ಮನೆ ಅಪರಾಧ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇ ಸಿಗರೇಟ್ ಸೀಜ್: ಆರೋಪಿಗಳ ಬಂಧನ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇ ಸಿಗರೇಟ್ ಸೀಜ್: ಆರೋಪಿಗಳ ಬಂಧನ

0

ಬೆಂಗಳೂರು: ಬೆಂಗಳೂರು ವಿಮಾನ ನಿಲ್ದಾಣದ ಹರಾಜಿನಲ್ಲಿ ಇ ಸಿಗರೇಟ್ ಖರೀದಿಸಿ ನಗರದಲ್ಲಿ ​ಮಾರುತ್ತಿದ್ದ ಆರೋಪಿಗಳನ್ನು ಜೆಜೆ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Join Our Whatsapp Group

ವಿದೇಶದಿಂದ ಬರುವ ಪ್ರಯಾಣಿಕರ ಬಳಿ ಇರುವ ಇ ಸಿಗರೇಟ್​ಗಳನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಸೀಜ್​ ಮಾಡುತ್ತಾರೆ. ಸೀಜ್​ ಮಾಡಿದ ಇ ಸಿಗರೇಟ್​ ಸೇರಿದಂತೆ ಇನ್ನಿತರೆ ವಸ್ತುಗಳನ್ನು ಹರಾಜು ಹಾಕಲಾಗುತ್ತದೆ.

ಹರಾಜಿನಲ್ಲಿ ಇ ಸಿಗರೇಟ್​ಗಳನ್ನು ಖರೀದಿಸುವ ಖತರ್ನಾಕ್ ಗ್ಯಾಂಗ್ ಜೆಜೆನಗರ ಪೊಲೀಸ್​ ಠಾಣಾ ವ್ಯಾಪ್ತಿಯ ಗೋಡೌನ್​ನಲ್ಲಿ ಶೇಖರಿಸಿದ್ದರು. ಬಳಿಕ ಇ ಸಿಗರೇಟ್ ​ಗಳನ್ನು ವಿಂಗಡಿಸುತ್ತಿದ್ದರು. ಬಳಸದ ಇ ಸಿಗರೇಟ್ ​ಗಳನ್ನು 300-400 ರೂ. ಬೆಲೆಗೆ ಮಾರಾಟ ಮಾಡುತ್ತಿದ್ದರು. ಈ ಮಾಹಿತಿ ತಿಳಿದು ದಾಳಿ ನಡೆಸಿದ ಜೆಜೆನಗರ ಪೊಲೀಸರು ಇಬ್ಬರು ಆರೋಪಿಗಳಿಂದ ಸುಮಾರು 110 ಇ ಸಿಗರೇಟ್ ವಶಪಡಿಸಿಕೊಂಡಿದ್ದಾರೆ.