ಬೆಂಗಳೂರು: ಸಂಗೊಳ್ಳಿ ರಾಯಣ್ಣನ ಹೆಸರು ಹೇಳುವುದಕ್ಕೂ ಸಿದ್ದರಾಮಯ್ಯ ನಾಲಾಯಕ್. ನೀವು ಸಂಗೊಳ್ಳಿ ರಾಯಣ್ಣನ ಜೊತೆ ಹೋಲಿಕೆ ಮಾಡಿಕೊಳ್ಳಬೇಡಿ. ಸಂಗೊಳ್ಳಿ ರಾಯಣ್ಣ ನಿಮ್ಮ ಹಾಗೆ ಕುಟುಂಬಕ್ಕೆ ಆಸ್ತಿ ಮಾಡಿದವರಲ್ಲ. ನಿಮ್ಮ ಹಾಗೆ ರಾಯಣ್ಣ 14 ಸೈಟ್ ಪಡೆದವರಲ್ಲ ಎಂದು ಬೆಂಗಳೂರಿನಲ್ಲಿ ಬಿಜೆಪಿ ಎಂಎಲ್ಸಿ ಎನ್.ರವಿಕುಮಾರ್ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಂಗೊಳ್ಳಿ ರಾಯಣ್ಣನನ್ನು ಸೋಲಿಸಿದ್ದು ನಮ್ಮವರೇ, ಈಗ ನನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಸುಮ್ಮನೆ ಇರುತ್ತೀರಾ ಎಂದು ಸಿಎಂ ಸಿದ್ದರಾಮಯ್ಯ ಭಾಷಣವೇಳೆ ಹೇಳಿದ್ದರು. ಈ ಮಾತಿಗೆ ಸಂಬಂಧಿಸಿ ಬಿಜೆಪಿ ಎಂಎಲ್ಸಿ ಎನ್.ರವಿಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯನವರೇ ನಿಮ್ಮ ಪಾರ್ಟಿಯಲ್ಲೇ ನಿಮ್ಮನ್ನು ಕೆಳಗಿಳಿಸುವ ಪ್ರಯತ್ನ ಮಾಡುತ್ತಿರುವುದು ಯಾರು? ನಿಮಗೆ ನಿಮ್ಮ ಪಾರ್ಟಿಯಲ್ಲಿ ಮೋಸ, ದ್ರೋಹ ಮಾಡುತ್ತಿರುವುದು ಯಾರು? ಹೆಸರು ಹೇಳಿ? ನೀವು ಸಂಗೊಳ್ಳಿ ರಾಯಣ್ಣ ಜೊತೆ ಹೋಲಿಕೆ ಮಾಡಿಕೊಳ್ಳಬೇಡಿ. ರಾಯಣ್ಣ ಒಂದು ಎಕರೆ ಜಾಗವನ್ನೂ ತನ್ನ ಕುಟುಂಬಕ್ಕೆ ಮಾಡಿಕೊಂಡವರಲ್ಲ. ರಾಯಣ್ಣ ನಿಮ್ಮ ಹಾಗೆ ಕುಟುಂಬಕ್ಕೆ ಆಸ್ತಿ ಮಾಡಿದವರಲ್ಲ. ನಿಮ್ಮ ಹಾಗೆ ರಾಯಣ್ಣ 14 ಸೈಟ್ ಪಡೆದವರಲ್ಲ. ನೀವು ರಾಜ್ಯದ ಜನರ ಕ್ಷಮೆ ಕೇಳಬೇಕು. ರಾಯಣ್ಣನ ಹೆಸರು ಹೇಳುವುದಕ್ಕೂ ನೀವು ನಾಲಾಯಕ್. ರಾಣಿ ಚೆನ್ನಮ್ಮನ ಹೆಸರು ಹೇಳಲೂ ನೀವು ಲಾಯಕ್ ಇಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಇದೇ ವೇಳೆ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿ, ಹಿಂದೂ ವಿರೋಧಿ ಇದ್ದರೆ ಅದು ಮುಖ್ಯಮಂತ್ರಿ ಸಿದ್ದರಾಮಯ್ಯ. ಅಶ್ವತ್ಥ್ ನೇತೃತ್ವದ ಸತ್ಯಶೋಧನಾ ಸಮಿತಿ ಸ್ಥಳಕ್ಕೆ ಭೇಟಿ ನೀಡಿತ್ತು. ದೇಶದ್ರೋಹಿ ಸಂಘಟನೆ ಬೆಂಬಲಿಸುವ SDPI ಸಹ ವರದಿಗೆ ಬಂದಿದೆ. ಅಬ್ದುಲ್ ಮಜೀದ್ ನೇತೃತ್ವದ ವರದಿ ನಮಗೆ ಈಗಾಗಲೇ ಗೊತ್ತಾಗಿದೆ. ಹಿಂದೂಗಳೇ ಮೆರವಣಿಗೆ ವೇಳೆ ಕಲ್ಲುತೂರಿದ್ರು ಅಂತಾ ವರದಿ ನೀಡ್ತಾರೆ. ಸಿದ್ದರಾಮಯ್ಯ ಆಡಳಿತದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗುತ್ತಾರೆ. ಪ್ಯಾಲೆಸ್ತೇನ್ ಧ್ವಜ ಹಾರಾಟ,ರಾಮೇಶ್ವರಂ ಕೆಫೆ ಮೇಲೆ ಬಾಂಬ್ ಹಾಕಿದ್ದಾರೆ. ಕುಕ್ಕರ್ ಬ್ಲಾಸ್ಟ್ ಮಾಡುತ್ತಾರೆ. ಕರ್ನಾಟಕ ಸೇಫ್ ಅಂತ ಅವರಿಗೆ ಅನ್ನಿಸಿದೆ ಎಂದು ಕಿಡಿಕಾರಿದರು.
🎯 ರೈಲ್ವೆ ಟೆಕ್ನಿಷಿಯನ್ ನೇಮಕಾತಿ 2024 – 14,928 ಹುದ್ದೆಗಳು 🛠️
ಅರಿಶಿನ ಕುಂಕುಮದ ನೈಜ ಮಹತ್ವ ದೇವರ ದರ್ಶನಕ್ಕೂ, ಆರೋಗ್ಯಕ್ಕೂ 🌼✨
ಪ್ರಧಾನ ಮಂತ್ರಿ ಆವಾಸ್ ಯೋಜನೆಮನೆ ಕಟ್ಟಲು ಪಡೆಯಿರಿ ಸರ್ಕಾರದಿಂದ ಸಬ್ಸಿಡಿ
ರಾಮನಗರದಲ್ಲಿ ಅತಿಥಿ ಬೋಧಕರ ಹುದ್ದೆಗಳು
ಆರೋಗ್ಯ ಸಲಹೆ…..
ಪಾರ್ವತಿ ದೇವಿ ಚಂದ್ರಘಂಟ ಹೇಗಾದರೂ ಗೊತ್ತ
ರಾಮನಗರದಲ್ಲಿ ಅತಿಥಿ ಬೋಧಕರ ಹುದ್ದೆಗಳು
ನವರಾತ್ರಿಯ ಎರಡನೇ ದಿನವಾದ ಇಂದು ತಾಯಿ ಬ್ರಹ್ಮಚಾರಿಣಿಯನ್ನ ಪೂಜಿಸಲಾಗುತ್ತೆ
ನಬಾರ್ಡ್ ಬ್ಯಾಂಕ್ ನಲ್ಲಿ ಆಫೀಸರ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.