ಮನೆ ರಾಜ್ಯ ಸತತ 3ನೇ ಬಾರಿಗೆ ಬಿಜೆಪಿ ಪಾಲಾದ ಹುಬ್ಬಳ್ಳಿ – ಧಾರವಾಡ ಪಾಲಿಕೆ

ಸತತ 3ನೇ ಬಾರಿಗೆ ಬಿಜೆಪಿ ಪಾಲಾದ ಹುಬ್ಬಳ್ಳಿ – ಧಾರವಾಡ ಪಾಲಿಕೆ

0

ಹುಬ್ಬಳ್ಳಿ(Hubballi): ಸತತವಾಗಿ ಮೂರನೇ ಬಾರಿ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಅಧಿಕಾರ ಹಿಡಿಯುವಲ್ಲಿ ಬಿಜೆಪಿ ಯಶಸ್ವಿಯಾಗಿದ್ದು, ನೂತನ ಮೇಯರ್ ಆಗಿ ಈರೇಶ ಅಂಚಟಗೇರಿ ಹಾಗೂ ಉಪಮೇಯರ್ ಆಗಿ ಉಮಾ‌ ಮುಕುಂದ್​​ ಆಯ್ಕೆಯಾಗಿದ್ದಾರೆ.

ಮೇಯರ್ ಮತ್ತು ಉಪ ಮೇಯರ್​ ಆಯ್ಕೆಗೆ ಇಂದು ಮಹಾನಗರ ಪಾಲಿಕೆಯಲ್ಲಿ ಕೈ ಎತ್ತುವ ಮೂಲಕ ಮತದಾನ ಪ್ರಕ್ರಿಯೆ ನಡೆದಿದೆ.

ಮತದಾನದಲ್ಲಿ ಪಾಲಿಕೆಯ ಸದಸ್ಯರು, ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ, ಶಾಸಕ ಜಗದೀಶ್​​ ಶೆಟ್ಟರ್ ಸೇರಿದಂತೆ ಪಾಲಿಕೆಯ ವ್ಯಾಪ್ತಿಯ ಜನಪ್ರತಿನಿಧಿಗಳು ಭಾಗವಹಿಸಿದ್ದರು.