ಹರಿಹರ ಸುತನು ಸುರಗಣ ಹಿತನು ವರಮುನಿ ಸನ್ನುತನು
ಸುಂದರ ರೂಪನು ಆತ್ಮಪ್ರದೀಪನು ಪಂದಲ ರಾಜಕುಮಾರನ
ಪಂದಲ ರಾಜಕುಮಾರನು ||
ಪಂಕಜ ವದನನು ಸಂಕಟ ಹರನು ಮಂಗಳ
ಪದಯುಗ ಸಮ್ಮಿಹಿತನು ||
ಶಾಂತಿಯ ಧಾಮನು ಸುರಧುರ ನಾಮನು
ಒಲವಲಿ ವರಗಳ ಕರೆವವನು |
ಸ್ವಾಮಿಯೇ ಶರಣಂ ಅಯ್ಯಪ್ಪ || ||ಹರಿಹರ ||
ಕರುಣಾಂಭರಣನು ಸುಖದಾಯಕನು
ಶರಣಾಗತ ಜನ ರಕ್ಷಕನು ||
ಪಂಪ ಬೀರ ಸಮೀರ ನಿವಾಸನು |
ಪ್ರಾಣವನಾದ ಪರಿ ಶೋಭಿತನು |
ಸ್ವಾಮಿಯೇ ಶರಣಂ ಅಯ್ಯಪ್ಪ || ||ಹರಿಹರ ||
ಭೂತನಾಥನು ದಿವ್ಯ ಚರಿತನು ಶೀತಲ ಚಂದನ ಪ್ರಿಯನು ||
ಮಾತಾತೀತನು ಗೀತ ರಂಜಿತನು ತ್ರಿಲೋಕ ವಂದಿದನು |
ತ್ರಿಲೋಕ ವಂದಿತನು |
ಸ್ವಾಮಿಯೇ ಶರಣಂ ಅಯ್ಯಪ್ಪ || ||ಹರಿಹರ ||
ಪಾಪವಿಧೂರನು ಪಾಪವಿದಾರನು ಆಪತ್ ವಿಹಾರ ಕಾರಣನು ||
ಮುನಿಜನ ಸೇವಿತ ಶತ್ರುಜನ ಭಕ್ತರ ಶೋಕ ವಿನಾಶಕನು |
ಭಕ್ತರ ಸೋಕಾವಿನಾಸಕನು
ಸ್ವಾಮಿಯೇ ಶರಣಂ ಅಯ್ಯಪ್ಪ || ||ಹರಿಹರ||