ಮನೆ ರಾಜ್ಯ ದಸರಾ ಚಲನಚಿತ್ರೋತ್ಸವ 2024: ಸಿನಿಮಾ ಸಮಯ ಮ್ಯಾಗಜೀನ್ ಬಿಡುಗಡೆ

ದಸರಾ ಚಲನಚಿತ್ರೋತ್ಸವ 2024: ಸಿನಿಮಾ ಸಮಯ ಮ್ಯಾಗಜೀನ್ ಬಿಡುಗಡೆ

0

ಮೈಸೂರು: ದಸರಾ ಚಲನಚಿತ್ರೋತ್ಸವ 2024 ರ ಸಂಬಂಧ ಇಂದು ಚಲನಚಿತ್ರೋತ್ಸವ ಉಪ ಸಮಿತಿಯ ವತಿಯಿಂದ ಇಂದು ಮಾಲ್ ಆಫ್ ಮೈಸೂರಿನ ಐನಾಕ್ಸ್ ಚಿತ್ರಮಂದಿರದಲ್ಲಿ ಸಿನಿಮಾ ಸಮಯ ದೈನಂದಿನ ಮ್ಯಾಗಜಿನ್ ಬಿಡುಗಡೆ ಮಾಡಲಾಯಿತು.

Join Our Whatsapp Group

ಈ ಸಂದರ್ಭದಲ್ಲಿ ಉಪ ಸಮಿತಿಯ ಉಪ ವಿಶೇಷಾಧಿಕಾರಿಗಳಾದ  ಡಾ.ಬಸವರಾಜು ಕೆ.ಎನ್. ಸಮಿತಿಯ ಕಾರ್ಯಾಧ್ಯಕ್ಷರಾದ ರಂಗೇಗೌಡ, ಸಮಿತಿಯ ಕಾರ್ಯದರ್ಶಿ ಹರೀಶ್ ಟಿ.ಕೆ. ಹಾಗೂ ಕಲಾತ್ಮಕ ನಿರ್ದೇಶಕ ಮನು ಹಾಗೂ ಇತರರು ಉಪಸ್ಥಿತರಿದ್ದರು.

ಸಿನಿಮಾ ಸಮಯ- ದಸರ ಚಲನಚಿತ್ರೋತ್ಸವದ ಕೈಗನ್ನಡಿ

ಸಿನಿಮಾ ಸಮಯ’ವು ಮೈಸೂರು ದಸರಾ ಚಲನಚಿತ್ರೋತ್ಸವದ ನಿತ್ಯ ಅವತರಣಿಕೆಯಾಗಿದ್ದು, ಚಿತ್ರೋತ್ಸವದ ದಿನಗಳಲ್ಲಿ ಯಾವೆಲ್ಲಾ ಚಿತ್ರಗಳು ಯಾವ ವಿಭಾಗದಲ್ಲಿ ಪ್ರದರ್ಶನಗೊಂಡಿತ್ತು ಎನ್ನುವುದನ್ನು ತಿಳಿಸುತ್ತದೆ.

 ಕನ್ನಡ ಹಾಗೂ ವಿಶ್ವದ  ಪ್ರಪಂಚದ ಹಲವು ಭಾಷೆಗಳ, ಹಲವು ಪ್ರಕಾರಗಳ ಚಲನಚಿತ್ರ ಪ್ರದರ್ಶನ ಮತ್ತು ಅದರ ಬಗ್ಗೆ ಪ್ರೇಕ್ಷಕರ ಅಭಿಪ್ರಾಯ, ಸಿನೆಮಾ ತಂಡದವರಿಂದ ಅಭಿಪ್ರಾಯ ಹೀಗೆ ಅನೇಕ ವಿಚಾರಗಳನ್ನು ಪ್ರಕಟಿಸುತ್ತದೆ.

ಈ ಮ್ಯಾಗಜೀನ್ ಮಾಡುವ ಮೂಲ ಉದ್ದೇಶವೆಂದರೆ ಚಿತ್ರೋತ್ಸವದಲ್ಲಿ ನಿತ್ಯವೂ ಏನೆಲ್ಲಾ ನಡೆಯುತ್ತದೆ ಎನ್ನುವುದನ್ನು ಪ್ರೇಕ್ಷಕರಿಗೆ ತಿಳಿಸುವುದು.