ಮನೆ ಮನರಂಜನೆ ಅರ್ಜುನ್‌ ಸರ್ಜಾ ನಿರ್ದೇಶನದಲ್ಲಿ ʼಸೀತಾ ಪಯಣʼ

ಅರ್ಜುನ್‌ ಸರ್ಜಾ ನಿರ್ದೇಶನದಲ್ಲಿ ʼಸೀತಾ ಪಯಣʼ

0

ನಿರ್ದೇಶಕ ಅರ್ಜುನ್‌ ಸರ್ಜಾ ಸದ್ದಿಲ್ಲದೇ ಸಿನಿಮಾವೊಂದನ್ನು ನಿರ್ದೇಶಿಸಿದ್ದಾರೆ. ಅದು “ಸೀತಾ ಪಯಣ’. ಈ ಚಿತ್ರದಲ್ಲಿ ನಿರಂಜನ್‌ ನಾಯಕರಾಗಿ ನಟಿಸಿದ್ದಾರೆ.

ಈ ನಿರಂಜನ್‌ ಉಪೇಂದ್ರ ಅಣ್ಣ ಸುಧೀಂದ್ರ ಅವರ ಪುತ್ರ. ಈಗಾಗಲೇ ಎರಡ್ಮೂರು ಸಿನಿಮಾಗಳಲ್ಲಿ ನಿರಂಜನ್‌ ನಟಿಸಿದ್ದು, ಆ ಚಿತ್ರಗಳು ಬಿಡುಗಡೆಯ ಹಂತಕ್ಕೆ ಬಂದಿವೆ. ಈ ನಡುವೆಯೇ ನಿರಂಜನ್‌ ಸದ್ದಿಲ್ಲದೇ “ಸೀತಾ ಪಯಣ’ದಲ್ಲಿ ನಟಿಸಿದ್ದಾರೆ.

ಅರ್ಜುನ್‌ ಸರ್ಜಾ ನಿರ್ದೇಶಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ “ಪ್ರೇಮ ಬರಹ’ ಎಂಬ ಸಿನಿಮಾ ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ತಮ್ಮ ಮಗಳು ಐಶ್ವರ್ಯ ಅರ್ಜುನ್‌ ಅವರನ್ನು ನಾಯಕಿಯನ್ನಾಗಿಸುವ ಮೂಲಕ ಚಿತ್ರರಂಗಕ್ಕೆ ಪರಿಚಯಿಸಿದ್ದರು. ನಟ ಚಂದನ್‌ ಈ ಚಿತ್ರದ ಹೀರೋ. 2018ರಲ್ಲಿ ರೊಮ್ಯಾಂಟಿಕ್‌ ಡ್ರಾಮಾ ಕಥಾಹಂದರದ ಈ ಸಿನಿಮಾವನ್ನು ಸ್ವತಃ ಅರ್ಜುನ್‌ ಸರ್ಜಾ ನಿರ್ದೇಶಿಸಿ, ತಮ್ಮದೇ ಶ್ರೀರಾಮ್‌ ಫಿಲಂಸ್‌ ಬ್ಯಾನರ್‌ನಡಿ ನಿರ್ಮಿಸಿದ್ದರು. ಈ ಚಿತ್ರಕ್ಕೆ ಕಥೆಯನ್ನೂ ಸ್ವತಃ ಅವರೇ ಬರೆದಿದ್ದರು.

ಅದಕ್ಕೂ ಮೊದಲು 2014ರಲ್ಲಿ ತೆರೆಕಂಡ “ಅಭಿಮನ್ಯು’ ಸಿನಿಮಾವನ್ನು ಅರ್ಜುನ್‌ ನಿರ್ದೇಶಿಸಿದ್ದರು. ಈ ಚಿತ್ರಕ್ಕೆ ಕರ್ನಾಟಕ ರಾಜ್ಯ ಪ್ರಶಸ್ತಿಯೂ ಬಂದಿತ್ತು. ಇತ್ತೀಚೆಗೆ ಪ್ಯಾನ್‌ ಇಂಡಿಯಾ, ಪ್ಯಾನ್‌ ವರ್ಲ್ಡ್ ಮಟ್ಟದಲ್ಲಿ ತೆರೆಕಂಡ ಧ್ರುವಾ ಸರ್ಜಾ ಅವರ “ಮಾರ್ಟಿನ್‌’ ಚಿತ್ರಕ್ಕೂ ಅರ್ಜುನ್‌ ಕಥೆ ಬರೆದಿದ್ದಾರೆ.