ಮನೆ ರಾಷ್ಟ್ರೀಯ ಅಕ್ರಮ ಹಣ ವರ್ಗಾವಣೆ: ಜೂ.9 ರವರೆಗೆ ಸಚಿವ ಸತ್ಯೇಂದ್ರ ಜೈನ್ ಇಡಿ ಕಸ್ಟಡಿಗೆವ

ಅಕ್ರಮ ಹಣ ವರ್ಗಾವಣೆ: ಜೂ.9 ರವರೆಗೆ ಸಚಿವ ಸತ್ಯೇಂದ್ರ ಜೈನ್ ಇಡಿ ಕಸ್ಟಡಿಗೆವ

0

ನವದೆಹಲಿ (New Delhi)-ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ (Satyendra Jain) ಅವರನ್ನು ಜೂನ್ 9 ರವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ನೀಡಲಾಗಿದೆ.

ದೊಡ್ಡ ಸಂಚಿನ ಹಿಂದಿರುವ ಸತ್ಯವನ್ನು ಹೊರಗೆಳೆಯಲು ಜೈನ್ ಅವರನ್ನು ಮುಂದಿನ ವಿಚಾರಣೆಯ (ಜೂನ್ 9) ತನಕ ಇಡಿ ವಶಕ್ಕೆ ಒಪ್ಪಿಸುವ ಅಗತ್ಯವನ್ನು ವಿಶೇಷ ನ್ಯಾಯಾಧೀಶರಾದ ಗೀತಾಂಜಲಿ ಗೋಯಲ್ ಅವರು ಪರಿಗಣಿಸಿದರು.

ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈನ್‌ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೋಮವಾರ ಬಂಧಿಸಿದ್ದರು.

ಹಣಕಾಸು ಅಪರಾಧಗಳ ತನಿಖೆ ನಡೆಸುತ್ತಿರುವ ತನಿಖಾ ಸಂಸ್ಥೆ, ಅರವಿಂದ್ ಕೇಜ್ರಿವಾಲ್ ಸರ್ಕಾರದ ಸಚಿವರು 2015-16ರಲ್ಲಿ ಕೋಲ್ಕತ್ತಾ ಮೂಲದ ಸಂಸ್ಥೆಯೊಂದಿಗೆ ಹವಾಲಾ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದೆ.

ಕೇಂದ್ರೀಯ ತನಿಖಾ ದಳ (ಸಿಬಿಐ) ಸತ್ಯೇಂದ್ರ ಜೈನ್ ಮತ್ತು ಅವರ ಕುಟುಂಬದ ವಿರುದ್ಧ ಆಗಸ್ಟ್ 2017 ರಲ್ಲಿ  1.62ರೂ. ಕೋಟಿ ವರೆಗಿನ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಪ್ರಕರಣ ದಾಖಲಿಸಿತ್ತು. 2011-12 ರಲ್ಲಿ 11.78 ಕೋಟಿ ರೂ. ಮತ್ತು 2015-16 ರಲ್ಲಿ 4.63 ಕೋಟಿ ರೂ. ವರ್ಗಾವಣೆ ಮಾಡಲು ಜೈನ್ ಮತ್ತು ಅವರ ಕುಟುಂಬವು ಯಾವುದೇ ನೈಜ ವ್ಯವಹಾರವಿಲ್ಲದ ನಾಲ್ಕು ಶೆಲ್ ಸಂಸ್ಥೆಗಳನ್ನುಸ್ಥಾಪಿಸಿದೆ ಎಂದು ಸಿಬಿಐ ಆರೋಪಿಸಿದೆ. ಸಿಬಿಐನ ಎಫ್‌ಐಆರ್ ಆಧರಿಸಿ ಅಕ್ರಮ ಹಣ ವರ್ಗಾವಣೆ ಆರೋಪದ ಕುರಿತು ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿದೆ.

ಆಮ್ ಆದ್ಮಿ ಪಕ್ಷದ ನಾಯಕ ಮತ್ತು ಅವರ ಕುಟುಂಬದ ಒಡೆತನದ  4.81 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡ ಸುಮಾರು ಎರಡು ತಿಂಗಳ ನಂತರ ಈ ಬಂಧನವಾಗಿದೆ.