ಮನೆ ಜ್ಯೋತಿಷ್ಯ ವೈದ್ಯಕೀಯ ಜ್ಯೋತಿಷ್ಯ

ವೈದ್ಯಕೀಯ ಜ್ಯೋತಿಷ್ಯ

0

 ಒಂದು ಉದಾಹರಣೆಗೆ ಜಾತಕ : 15- 2-1970 5. 40 ಆಮ್

Join Our Whatsapp Group

      ಇದು ಸ್ತ್ರೀ ಜಾತಕ..ಇವರು ಮೈಸೂರಿನಲ್ಲಿ ಜನಿಸಿ, ಅಮೆರಿಕಾದಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲುತ್ತಾ, 2008ರ ಸೆಪ್ಟೆಂಬರ್ ನಿಂದ ಆರೋಗ್ಯದಲ್ಲಿ ತೊಂದರೆ ಆಗಿದೆ. ಮೂತ್ರಕೋಶ ವೈಫಲ್ಯವಾಗಿದೆ, ಎರಡು ಕಣ್ಣು ಅದುರುತ್ತದೆ. ವಾರಕ್ಕೆ 28 ಸಾವಿರದ  ಇಂಜೆಕ್ಷನ್ ಮತ್ತು ಪ್ರತಿದಿನ ರೂ.700 ರೂಪಾಯಿ ಮಾತ್ರೆ ತೆಗೆದುಕೊಳ್ಳುತ್ತಾರೆ ಕೊನೆಗೆ ವಿಧಿಯಿಲ್ಲದೆ ಇವರು ವೃತ್ತಿಗೆ ರಾಜೀನಾಮೆ ನೀಡಿ,ಭಾರತಕ್ಕೆ ಬಂದು ದೆಹಲಿಯಲ್ಲಿ ವಾಸಮಾ ಡುತ್ತಾ, ಅವರ ಬಂಧುಗಳು, ನನ್ನಲ್ಲಿ ಪರಿಹಾರ ಕೇಳಿದರು.

      ನಾನು ಜಾತಕ ಪರಿಶೀಲಿಸಿ ರಾಹು, ಶನಿ, ಗುರು, ಕುಜರಿಗೆ ಪರಿಹಾರ ಹೇಳಿದೆ. ಅವರು ದೆಹಲಿಯಲ್ಲಿ ಮತ್ತು ಇಲ್ಲಿ ಅವರ ಪರವಾಗಿ ಪರಿಹಾರ ಮಾಡಿ, ಎರಡು ತಿಂಗಳಲ್ಲಿ ಕಣ್ಣು ಅದುರುವುದು ನಿಂತಿತು. ಆನಂತರ ಎರಡು ತಿಂಗಳಲ್ಲಿ ಎರಡು ಮೂತ್ರ ಕೋಶಗಳೂ ಕೆಲಸ ಆರಂಭಿಸಿದವು. ಅನಂತರ ಎರಡು ತಿಂಗಳಲ್ಲಿ ಪೂರ್ಣವಾಗಿ ಮೂತ್ರ ಮಾಮೂಲಿ ಸ್ಥಿತಿಗೆ ಬಂದು 2011ರ ಜೂನ್ ನಲ್ಲಿ ಮತ್ತೆ ಅಮೆರಿಕಾ ದೇಶಕ್ಕೆ ಕೆಲಸಕ್ಕೆ ಸೇರಲು ಹೋದರು.

    ಇವರ ಜಾತಕದಲ್ಲಿ ಕಾಲಪುರುಷನ ಸಪ್ತಮರಾಶಿ ತುಲಾ ರಾಶಿಯಲ್ಲಿ ಗುರು ಸ್ಥಿತ ಈ ಗುರುವಿಗೆ ಕುಜ, ನೀಚ ಶನಿ ಮತ್ತು ಅಸ್ತಂಗತ ರಾಹು ದೃಷ್ಟಿ ಮತ್ತೊಬ್ಬ ಕಾರಕ ಶುಕ್ರನು. ರವಿ ಮತ್ತು ರಾಹುವಿನಿಂದ ಪೀಡಿತ. ಇವರಿಗೆ ಗುರುದೆಶೆ ರಾಹು ಭಕ್ತಿಯಲ್ಲಿ ಆರಂಭವಾಗಿದೆ.

 ಉದಾಹರಣೆ ಜಾತಕ ಎರಡು : 2-18-1983  5-15 ಆಮ್.

    ಈ ಜಾತಕರಿಗೆ ಎಂ.ಎನ್.ಸಿ ಕಂಪನಿಯಲ್ಲಿ ವೃತ್ತಿಯಲ್ಲಿ ಇದ್ದು ಕಳೆದ ಒಂದೂವರೆ ವರ್ಷದಿಂದ ( 7-2-2012ರವರೆಗೆ ರವಿದಶೆ/ ಗುರು ಭಕ್ತಿ )ಮೂತ್ರಪಿಂಡ ವಿಫಲವಾಗಿದೆ. ಈಗ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದಾರೆ. ಈ ಜಾತಕದಲ್ಲಿ ಶನಿ ವಕ್ರಿಯಾಗಿ ತುಲಾದಲ್ಲಿ ಸ್ಥಿತನಾಗಿ ಕುಜ ಮತ್ತು ರಾಹುವಿನ ದೃಷ್ಟಿ ಪಡೆದಿದ್ದಾನೆ.ಗುರು ಈ ಲಗ್ನಕ್ಕೆ 3ನೇ 12ನೇ ಅಧಿಪತಿಯಾಗಿ ರಾಶಿ ಸಂಧಿಯಲ್ಲಿರುವ ಕುಜ ಮತ್ತು ಶುಕ್ರನ ದೃಷ್ಟಿಸುತ್ತಿದ್ದಾನೆ. ಇಲ್ಲಿ ಮೀನರಾಶಿ ಪೀಡಿತವಾಗಿ ಹಿಮೋಗ್ಲೋಬಿನ್ ಕೊರತೆ. ಚಂದ್ರ ಮತ್ತು ಶುಕ್ರ ಪೀಡಿತರಾಗಿ ಮಧುಮೇಹ ಹೆಚ್ಚಾಗಿ ಮೂತ್ರ ಕೋಶ ವಿಫಲವಾಗಿದೆ.

 ಉದಾಹರಣೆ ಜಾತಕ 3 :- 30 – 9-1947  7-30 PM

      ಈ ಜಾತಕರಿಗೆ 2012ರಲ್ಲಿ ಅಂದರೆ ಗುರು ಕುಜದೆಶೆ/ ಶುಕ್ರ ಭುಕ್ತಿಯಲ್ಲಿ ತೀವ್ರವಾದ ಹೃದಯ ವ್ಯಾದಿಯಾಗಿ ಹೃದಯಕ್ಕೆ ಬೈಪಾಸ್ ಸರ್ಜರಿ ಮಾಡಿದರು. ಈ ಸರ್ಜರಿಯಾದ ಮೇಲೆ ನೋವು ನಿವಾರಕ ಮತ್ತು ಸೋಂಕು ತಗಲದೆ ಇರಲು ಬಹಳ ಮಾತ್ರೆ ಮತ್ತು ಆೄಂಟಿಬಯಾಟಿಕ್ ಔಷಧಿ ಕೊಡಲು ಆರಂಭಿಸಿದರು. ಇದರಿಂದ ರೋಗಿಗೆ ಕ್ರಿಯಾಟಿನ್ ಮೂರು ಪಾಯಿಂಟ್ ಆರರಷ್ಟು ಹೆಚ್ಚಾಗಿ ಮೂತ್ರಪಿಂಡವಿಫಲವಾಗಲುವ ಸಂಭವವಿತ್ತು.ಇದರಿಂದ ರೋಗಿಗೆ ಡಯಾಲಿಸಿಸ್ ಮಾಡುವ ಸಂದರ್ಭ ಬರುತ್ತದೆಂದು ರೋಗಿಯ ಬಂಧುಗಳಿಗೆ ತಿಳಿಸಿದರು. ಆಗ ರೋಗಿಯ ಮಗಳು, ನನ್ನನ್ನು ದೂರವಾಣಿ ಮೂಲಕ ಸಂಪರ್ಕಿಸಿ ರೋಗಿಯ ಪರಿಸ್ಥಿತಿ ತಿಳಿಸಿ ಪರಿಹಾರ ಹೇಳಿಕೊಂಡರು, ರೋಗಿಗೆ ಸೋಂಕು ತಗಲದೆ ಇರಲು ಆ ಔಷಧವನ್ನು ನೀಡಲೇಬೇಕು.ಇಲ್ಲದಿದ್ದರೆ ಅಪಾಯ. ಔಷದಿ ನೀಡಿದರೆ ಮೂತ್ರಕೋಶಕ್ಕೆ ತೊಂದರೆ ಎಂದರು. ನಾನು ಜಾತಕವನ್ನು ಸಹ ಪರಿಶೀಲಿಸಿದೆ, ಸೋಂಕು ಜಾಡ್ಯ ತಡೆಯಲು ರಾಹು ಮತ್ತು ಕುಜನಿಗೆ ಪರಿಹಾರ,ಮೂತ್ರ ಕೋಶಕಾರಕ ಗುರುವಿಗೆ ಮತ್ತು ಮಧುಮೇಹ ಕಾರಕ ಚಂದ್ರನಿಗೆ ಅಕ್ಕಿದಾನವನ್ನು ಪ್ರತಿದಿನದಂತೆ ಮೂರು ದಿನ ಮಾಡಿ,ನಂತರ ನನಗೆ ತಿಳಿಸಲು ಹೇಳಿದೆ.

     ಅವರು ದಾನ ಮಾಡಿದ ಮರುದಿನ 2.8ಕ್ಕೆ ಇಳಿಯಿತು ಮರುದಿನ 1.3.ಗೆ ನಂತರ 1.1ಗೆ ನಾಲ್ಕನೇಯ ದಿನ 0.8ಕ್ಕೆ ಇಳಿದು ನನಗೆ ದೂರವಾಣಿ ಮುಖಾಂತರ ಸಂತೋಷಪಟ್ಟು ವಂದನೆ ಹೇಳಿದರು.ಅವರ ಅಪಾಯದಿಂದ ಪಾರಾಗಿರುವುದರಿಂದ ನನಗೆ ಸಂತೋಷವಾಯಿತು ಪ್ರತಿಯೊಬ್ಬರೂ ಸಹ ತಮ್ಮ ಬಂಧುಗಳಿಗೆ ನೋವು ನಿವಾರಕ ಅಥವಾ ಸೋಂಕು ನಿವಾರಕ ಔಷಧ ತೆಗೆದುಕೊಳ್ಳುವಾಗ ಬಹಳ ಎಚ್ಚರಿಕೆ ವಹಿಸಬೇಕು. ವೈದ್ಯರಿಗೂ ಇದು ಕಷ್ಟಕರ. ಶಸ್ತ್ರಚಿಕಿತ್ಸೆ  ಮಾಡಿಸಿ ಕೊಂಡವರಿಗೆ ನೋವು ಮತ್ತು ಸೋಂಕು ನಿವಾರಕ ಔಷಧ ನೀಡದಿದ್ದರೆ ರೋಗಿಯು ಉಳಿಯುವುದೇ ಕಷ್ಟಕರ ಆ ವೇಳೆಯಲ್ಲಿ ಜ್ಯೋತಿಷ್ಯ ಶಾಸ್ತ್ರಅವರನ್ನು ಕಾಪಾಡುತ್ತದೆ.

      ಇಲ್ಲಿ ಮೂತ್ರಪಿಂಡ ರಾಶಿ ಮಕರರಾಶಿಯು ಶನಿ ಕುಜ್ಜ ಮತ್ತು ರಾಹುವಿನಿಂದ ಪೀಡಿತ. ಆದ್ದರಿಂದ ಈ ಅಂಗಕ್ಕೆ  ಅಪಾಯಕಾದಿತ್ತು.

    ಇವರಿಗೆ ಎರಡನೇ ವಿಧದ ಮಧುಮೇಹವಿದೆ.ಕನ್ಯಾ ರಾಶಿ ಪೀಡಿತವಾಗಿರುವುದರಿಂದ ರಕ್ತನಾಳಗಳು ಗಡಸಾಗಿ, ರಕ್ತ ಚಲನೆ ಕಡಿಮೆಯಾಗಿ ಮಧುಮೇಹ ಮತ್ತು ಹೆಚ್ಚು ರಕ್ತದೊತ್ತಡವಿದೆ.