ಮನೆ ಸುದ್ದಿ ಜಾಲ ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ

ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ

0

ಮೈಸೂರು (Mysuru): ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ಜೂ.3 ರಂದು 220/66/11 ಏಗಿ ವಾಜಮಂಗಲ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕ.ವಿ.ಪ್ರ.ನಿ.ನಿ. ವತಿಯಿಂದ ತ್ರೈಮಾಸಿಕ ಅವಧಿಯ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.

ಹೀಗಾಗಿ ಹಲವೆಡೆ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ನ.ರಾ.ಮೊಹಲ್ಲಾದ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯುತ್ ವ್ಯತ್ಯಯವಾಗಲಿರುವ ಪ್ರದೇಶಗಳು:

ಮೆಲ್ಲಹಳ್ಳಿ, ಹಾರೋಹಳ್ಳಿ, ಹಳೆಕೆರಿಹುಂಡಿ, ಶಿವಪುರ, ಹಲಗಯ್ಯನಹುಂಡಿ, ಪಿಲ್ಲಹಳ್ಳಿ, ವರಕೂಡು, ಬಡಗಲಹುಂಡಿ, ಮೂಡಲಹುಂಡಿ, ಕೆಂಪೆಗೌಡನಹುಂಡಿ, ವರುಣ, ದಂಡಿಕೆರೆ, ವಾಜಮಂಗಲ, ಮೊಸಂಬಾಯನಹಳ್ಳಿ, ಯಾಂದಳ್ಳಿ, ಸಜ್ಜೆಹುಂಡಿ, ಜಂತಗಳ್ಳಿ, ಮಹದೇಶ್ವರ ಬಡಾವಣೆ, ಇಂಡಸ್ ಬಡಾವಣೆ, ಭೂಗತಗಳ್ಳಿ ಗೇಟ್, ಚಿಕ್ಕಹಳ್ಳಿ, ಚೋರನಹಳ್ಳಿ, ಭೂಗತಗಳ್ಳಿ, ನಾಡನಹಳ್ಳಿ, ಪೋಲೀಸ್ ಬಡಾವಣೆ, ನೇತಾಜಿನಗರ, ಐಪಿಎಸ್ ನಗರ, ಲಾಲ್ ಬಹದ್ದೂರು ಶಾಸ್ತ್ರಿ ನಗರ, ಎಸ್.ಎಂ.ಪಿ. ಡೆವಲಪ್ಪರ್ಸ್ ಶೋಭ ಡೆವಲಪ್ಪರ್ಸ್, ಯಶಸ್ವಿನಿ ಹಿಲ್ ವ್ಯೂ, ವರಕೂಡು, ಬಡಗಲಹುಂಡಿ, ಮೂಡಲಹುಂಡಿ, ಕೆಂಪೇಗೌಡನಹುಂಡಿ, ಜಂತಗಳ್ಳಿ, ಚಿಕ್ಕಹಳ್ಳಿ, ಚೋರನಹಳ್ಳಿ, ಯಾಂದಳ್ಳಿ, ಜೆ.ಎಸ್.ಎಸ್. ಬಡಾವಣೆ, ವಸಂತನಗರ, ಸುಕದಾಯಿ ಬಡಾವಣೆ, ಶಾಂತವೇರಿ ಗೋಪಾಲಗೌಡ ನಗರ, ಸಪ್ತಮಾತೃಕ ಬಡಾವಣೆ, ಸಹೃದಯ ನಗರ, ಪ್ರಕೃತಿ ಬಡಾವಣೆ  ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು.