ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್ ಮೆಂಟ್ ಬ್ಯಾಂಕ್ ಆಫ್ ಇಂಡಿಯಾವು ಆಫೀಸರ್ (ಗ್ರೂಪ್ ಎ, ಬಿ) ಹುದ್ದೆಗಳ ನೇಮಕಾತಿ 2024 ಗಾಗಿ ಅರ್ಜಿಗಳನ್ನು ಸ್ವೀಕರಿಸಲು ಪ್ರಾರಂಭಿಸಿದೆ. ಒಟ್ಟು 72 ಹುದ್ದೆಗಳು ಖಾಲಿಯಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಎಸ್ ಐಡಿಬಿಐ ನ ಅಧಿಕೃತ ವೆಬ್ಸೈಟ್ sidbi.in ಗೆ ಭೇಟಿ ನೀಡಿ, ಡಿಸೆಂಬರ್ 2 ರೊಳಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ:
ನೇಮಕಾತಿ ಬ್ಯಾಂಕ್ ಹುದ್ದೆ ಹೆಸರು : ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್ಟೆಂಟ್ ಬ್ಯಾಂಕ್ ಆಫ್ ಇಂಡಿಯಾ
ಹುದ್ದೆ ಹೆಸರು : ಆಫೀಸರ್ (ಗ್ರೂಪ್ ಎ, ಬಿ)
ಒಟ್ಟು ಹುದ್ದೆಗಳ ಸಂಖ್ಯೆ : 72
ಮಾಸಿಕ ವೇತನ : ರೂ 100000 – ರೂ 115000
ಅಭ್ಯರ್ಥಿಗಳಿಗೆ ಇರಬೇಕಾದ ವಿದ್ಯಾರ್ಹತೆ:
ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಅಂಗೀಕೃತ ವಿಶ್ವವಿದ್ಯಾಲಯಗಳಿಂದ ಸಿಎ, ಸಿಎಂಎ, ಐಸಿಡಬ್ಲ್ಯೂಎ, ಸಿಎಫ್, ಇತರೆ ಪದವಿ, ಎಲ್ಎಲ್ಬಿ, ಎಂಬಿಎ, ಎಂಸಿಎ, ಪಿಜಿಡಿಎಂ ಹೀಗೆ ವಿವಿಧ ಪದವಿ ಪಾಸಾಗಿರಬೇಕು.
ವಯಸ್ಸಿನ ಅರ್ಹತೆಗಳು:
ಆಫೀಸರ್ ಗ್ರೇಡ್ ಎ ಹುದ್ದೆಗೆ ಕನಿಷ್ಠ 21 ವರ್ಷ ಆಗಿರಬೇಕು. ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು.
ಆಫೀಸರ್ ಗ್ರೇಡ್ ಬಿ ಹುದ್ದೆಗೆ ಕನಿಷ್ಠ 25 ವರ್ಷ ಹಾಗೂ ಗರಿಷ್ಠ 33 ವರ್ಷ ವಯಸ್ಸು ಮೀರಿರಬಾರದು.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ ಮೂಲಕ ನೇರ ನೇಮಕಾತಿ
ಅರ್ಜಿ ಶುಲ್ಕ ವಿವರ:
ಸಾಮಾನ್ಯ ಅರ್ಹತೆ, ಒಬಿಸಿ ಅಭ್ಯರ್ಥಿಗಳಿಗೆ, ವಿಕಲಚೇತನ ಅಭ್ಯರ್ಥಿಗಳಿಗೆ ರೂ 1100 ಹಾಗೂ
ಎಸ್ಸಿ / ಎಸ್ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 175 ರೂ ಶುಲ್ಕವನ್ನು ನಿಗದಿ ಪಡಿಸಲಾಗಿದೆ.
ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ಯಾಶ್ ಕಾರ್ಡ್, ಕ್ರೆಡಿಟ್ ಕಾರ್ಡ್, ಮೊಬೈಲ್ ವ್ಯಾಲೆಟ್ ಈ ವಿಧಾನಗಳಲ್ಲಿ ಅರ್ಜಿ ಶುಲ್ಕ ಪಾವತಿ ಮಾಡಬಹುದು.
ಇದನ್ನೂ ಓದಿ: ಕರ್ನಾಟಕ ಲೋಕಾಯುಕ್ತದಲ್ಲಿ 30 ಕ್ಲರ್ಕ್, ಟೈಪಿಸ್ಟ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ಇಲ್ಲಿದೆ ಮಾಹಿತಿ
ಪ್ರಮುಖ ದಿನಾಂಕಗಳು:
ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ : 08-11-2024
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 02-12-2024
ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ: 02-12-2024
ವಯಸ್ಸಿನ ಅರ್ಹತೆ ಪರಿಗಣಿಸುವ ದಿನಾಂಕ: 08-11-2024
ವಿದ್ಯಾರ್ಹತೆ ಪರಿಗಣಿಸುವ ಕೊನೆ ದಿನಾಂಕ: 02-12-2024
ಹಂತ -1 ಆನ್ಲೈನ್ ಪರೀಕ್ಷಾ ದಿನಾಂಕ : 22-12-2024
ಹಂತ -2 ಆನ್ಲೈನ್ ಪರೀಕ್ಷಾ ದಿನಾಂಕ : 19-01-2024
ಸಂದರ್ಶನ ನಡೆಯುವ ದಿನಾಂಕ : ಫೆಬ್ರವರಿ 2025