ಮನೆ ರಾಜಕೀಯ ಮುಸ್ಲಿಂ ಮುಖಂಡನಿಂದ ಗೊಮ್ಮಟೇಶ್ವರನ ಬಗ್ಗೆ ಅವಹೇಳನಕಾರಿ ಹೇಳಿಕೆ: ಬಹಿರಂಗ ಕ್ಷಮೆ ಯಾಚಿಸುವಂತೆ ತನ್ವೀರ್ ಸೇಠ್ ಬಹಿರಂಗ...

ಮುಸ್ಲಿಂ ಮುಖಂಡನಿಂದ ಗೊಮ್ಮಟೇಶ್ವರನ ಬಗ್ಗೆ ಅವಹೇಳನಕಾರಿ ಹೇಳಿಕೆ: ಬಹಿರಂಗ ಕ್ಷಮೆ ಯಾಚಿಸುವಂತೆ ತನ್ವೀರ್ ಸೇಠ್ ಬಹಿರಂಗ ಪತ್ರ

0

ಮೈಸೂರು:ಗೊಮ್ಮಟೇಶ್ವರನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಮುಸ್ಲಿಂ ಮುಖಂಡನಿಗೆ ಬಹಿರಂಗ ಕ್ಷಮೆ ಯಾಚಿಸುವಂತೆ ಒತ್ತಾಯಿಸಿ ಶಾಸಕ ತನ್ವೀರ್ ಸೇಠ್ ಬಹಿರಂಗ ಪತ್ರ ಬರೆದಿದ್ದಾರೆ.

ಗೊಮ್ಮಟೇಶ್ವರನನ್ನು ಬೆತ್ತಲು ಮಾಡಿ ದೇಶದ ಮಾನ ಹೋಗುತ್ತಿದೆ. ಗೊಮ್ಮಟೇಶ್ವರನನ್ನು ಬೆತ್ತಲಾಗಿ ನಿಲ್ಲಿಸಿದ್ದೀರಿ. ಗೊಮ್ಮಟೇಶ್ವರನಿಗೆ ಮೊದಲು ಚಡ್ಡಿ ಹಾಕಿ ಎಂದು ನ್ಯೂ  ಕಾಂಗ್ರೆಸ್ ಕಾರ್ಯಾಧ್ಯಕ್ಷ ಆಯೂಬ್ ಖಾನ್ ನೀಡಿದ್ದ ಹೇಳಿಕೆ ವಿರೋಧಿಸಿ ಬಹಿರಂಗ ಕ್ಷಮೆಗೆ ಒತ್ತಾಯಿಸಿ ಶಾಸಕ ತನ್ವೀರ್ ಸೇಠ್ ಬಹಿರಂಗ ಪತ್ರ ಬರೆದಿದ್ದಾರೆ.

ತನ್ವೀರ್ ಸೇಠ್ ಅವರು ಕರ್ನಾಟಕ ಜೈನ ಸಮಾಜದ ಅಧ್ಯಕ್ಷ ಪ್ರಸನ್ನ ಅವರಿಗೆ ಬಹಿರಂಗ ಪತ್ರ ಬರೆದಿದ್ದು, ಇತ್ತೀಚಿನ ದಿನಗಳಲ್ಲಿ ಸ್ವಯಂ ಘೋಷಿತ ನಾಯಕರ ಸಂಖ್ಯೆ ಅಧಿಕವಾಗುತ್ತಿದೆ. ನಮ್ಮ ಸಂವಿಧಾನ ಹೇಳಿದಂತೆ ಎಲ್ಲಾ ಧರ್ಮಗಳನ್ನು ಗೌರವಿಸುವುದು ನಮ್ಮ ಆದ್ಯ ಕರ್ತವ್ಯ. ಆದರೆ, ಕೆಲವು ಕೆಟ್ಟ ವ್ಯಕ್ತಿಗಳಿಂದ ಧಾರ್ಮಿಕ ಭಾವನೆಗಳಿಗೆ ನೋವುಂಟಾಗುತ್ತಿದೆ. ಒಬ್ಬ ಭಾರತೀಯನ್ನಾಗಿ ನಾನು ಇದನ್ನು ಖಂಡಿಸುತ್ತೇನೆ. ಭಾರತೀಯರಾದ ನಾವು ಪ್ರತಿಯೊಂದು ಧರ್ಮಕ್ಕೆ ಗೌರವನ್ನು ನೀಡಬೇಕು ಎಂದರು.

ಹಿಂದಿನ ಲೇಖನಚಿತ್ರ ನಿರ್ದೇಶಕ ರವಿ ಟಂಡನ್ ನಿಧನ
ಮುಂದಿನ ಲೇಖನಎನ್ಐ ಕಾಯಿದೆಯ ಸೆಕ್ಷನ್ 138 ರ ಅಡಿಯಲ್ಲಿನ ಅಪರಾಧವು ‘ಜಾರಿಗೊಳಿಸಬಹುದಾದ ಸಾಲ’ಕ್ಕಾಗಿ ನೀಡಲಾದ ಚೆಕ್‌ಗಳಿಗೆ ಮಾತ್ರ, ‘ಭದ್ರತೆ’ ಅಲ್ಲ: ಗುಜರಾತ್ ಹೈಕೋರ್ಟ್