ಮನೆ ರಾಜ್ಯ ಕಾಫಿನಾಡಲ್ಲೊಂದು ಅಪರೂಪದ ಮದ್ವೆ – ಈಗ ಜಾತಿ ಸಂಕೋಲೆ ಮೀರಿ ಕೈಹಿಡಿದ ಜೋಡಿ

ಕಾಫಿನಾಡಲ್ಲೊಂದು ಅಪರೂಪದ ಮದ್ವೆ – ಈಗ ಜಾತಿ ಸಂಕೋಲೆ ಮೀರಿ ಕೈಹಿಡಿದ ಜೋಡಿ

0

ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಅಪರೂಪದ ಮದುವೆಯೊಂದು ನಡೆದಿದೆ. ಎಟಿಎಂನಿಂದ ಪರಿಚಯವಾಗಿ ಪ್ರೀತಿ ಬಲೆಯಲ್ಲಿ ಬಿದ್ದಿದ್ದ, ಜೋಡಿ ಇದೀಗ ಜಾತಿ ಸಂಕೋಲೆ ಮೀರಿ ಸಪ್ತಪದಿ ತುಳಿದಿದ್ದಾರೆ.

ಎರಡು ಮನೆಯವರ ಒಪ್ಪಿಗೆ ಪಡೆದು ಪರಿಶಿಷ್ಟ ಜಾತಿಯ ಹುಡುಗಿ ಸಾವಿತ್ರಿ ಹಾಗೂ ಬ್ರಾಹ್ಮಣ ಸಮುದಾಯದ ಯುವಕ ಸಚಿನ್ ಚಿಕ್ಕಮಗಳೂರು ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಸಾಮೂಹಿಕ ಮದುವೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಅಂದು ಯುವತಿ ಸಾವಿತ್ರಿ ಹಣ ತೆಗೆದುಕೊಳ್ಳಲು ಎಟಿಎಂಗೆ ಆಗಮಿಸಿದ್ದರು. ಯುವಕ ಸಚಿನ್ ಕೂಡ ಇ-ಲಾಬಿಯಲ್ಲಿ ಖಾತೆಗೆ ಹಣ ಹಾಕಿಕೊಳ್ಳಲು ಬಂದಿದ್ದರು. ಇದೇ ವೇಳೆ ಸಾವಿತ್ರಿ ಅವರು ಹಣ ತೆಗೆಯಲು ಪರದಾಡುತ್ತಿದ್ದರು. ಆಗ ಸಚಿನ್ ಸಾವಿತ್ರಿಗೆ ಸಹಾಯ ಮಾಡಿದ್ದರು.

ಇದೇ ಕಾರಣಕ್ಕೆ ಇಬ್ಬರು ನಂಬರ್ ಶೇರ್ ಮಾಡಿಕೊಂಡಿದ್ದರು. ಅಲ್ಲಿಂದ ಪರಿಚಯವಾಗಿ ಪ್ರೀತಿ ಶುರುವಾಗಿತ್ತು. ಇದೀಗ ಎರಡು ಮನೆಯವರನ್ನು ಒಪ್ಪಿಸಿ ಬೌದ್ಧ ಸಂಘಟನೆ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.