ಮನೆ ವ್ಯಾಯಾಮ ವ್ಯಾಯಾಮ ಮಾಡುವ ಮೊದಲು ಅನುಸರಿಸಬೇಕಾದ ನಿಯಮ

ವ್ಯಾಯಾಮ ಮಾಡುವ ಮೊದಲು ಅನುಸರಿಸಬೇಕಾದ ನಿಯಮ

0

ಇತ್ತೀಚಿನ ದಿನಗಳಲ್ಲಿ ದೇಹವನ್ನು ಫಿಟ್‌ ಆಗಿಟ್ಟುಕೊಳ್ಳಲು ವ್ಯಾಯಾಮ ಮಾಡುವುದು ಹಲವರ ದಿನಚರಿ ಆಗಿದೆ. ಆದರೆ ಕೆಲವರು ದೇಹದ ತೂಕದ ಇಳಿಕೆಗೆ ಸಾಕಷ್ಟು ಪ್ರಯತ್ನ ಪಟ್ಟರೂ ಅದು ಸಾಧ್ಯವಾಗುವುದೇ ಇಲ್ಲ. ವ್ಯಾಯಾಮ ಮಾಡುವ ಮೊದಲು ಕೆಲವು ತಪ್ಪುಗಳು ತೂಕ ಇಳಿಕೆಯ ಹಾದಿಯನ್ನು ಕಷ್ಟಗೊಳಿಸಬಹುದು.

ವ್ಯಾಯಾಮ ಮಾಡುವ ಮೊದಲು ನೀವು ಏನು ಮಾಡಬೇಕು ಎನ್ನುವುದನ್ನು ತಿಳಿದುಕೊಳ್ಳಿ ಇದರಿಂದ ನಿಮ್ಮ ತೂಕ ಇಳಿಕೆ ಮತ್ತು ದೇಹದ ಫಿಟ್‌ ನೆಸ್‌ ಅನ್ನು ಸುಲಭವಾಗಿ ಕಾಪಾಡಿಕೊಳ್ಳಬಹುದು. ವ್ಯಾಯಾಮ ಮಾಡುವ ಮೊದಲು ಯಾವೆಲ್ಲಾ ನಿಯಮಗಳನ್ನು ಅನುಸರಿಸಬೇಕು ಎಂಬ ಮಾಹಿತಿ ಇಲ್ಲಿದೆ.

ವ್ಯಾಯಾಮವನ್ನು ತಪ್ಪಿಸಬೇಡಿ

ಯಾವುದೇ ಕೆಲಸವಾದರೂ ಅಷ್ಟೇ ಒಂದು ದಿನ ಬಿಟ್ಟರೆ ಮನಸ್ಸು ಮರುದಿನವೂ ಎಕ್ಸ್‌ಕ್ಯೂಸ್‌ ಕೇಳುತ್ತದೆ. ಹೀಗಾಗಿ ವ್ಯಾಯಾಮದಲ್ಲೂ ಅಷ್ಟೇ, ಆದಷ್ಟು ನಿತ್ಯದ ವ್ಯಾಯಾಮವನ್ನು ಸ್ಕಿಪ್‌ ಮಾಡಬೇಡಿ. ನಿಮ್ಮ ಇಷ್ಟದ ವ್ಯಾಯಾಮದಿಂದ ಆರಂಭಿಸಿ. ನೀವು ಎಷ್ಟೇ ಬ್ಯುಸಿ ಇದ್ದರೂ ನಿಮ್ಮ ಆರೋಗ್ಯ ಮುಖ್ಯವಾಗಿರುತ್ತದೆ ಹೀಗಾಗಿ ಕನಿಷ್ಠ 15 ನಿಮಿಷವಾದರೂ ವ್ಯಾಯಾಮವನ್ನು ಮಾಡಿ. ಇದರಿಂದ ದೇಹ ಕೂಡ ನಿಮ್ಮ ದಿನಚರಿಗೆ ಹೊಂದಿಕೊಳ್ಳುತ್ತದೆ. ಅಲ್ಲದೆ ತೂಕ ಇಳಿಸಿ, ಫಿಟ್‌ ಆಗಿರುವಂತೆ ನೋಡಿಕೊಳ್ಳಬಹುದು.

​ವಾರ್ಮ್‌ಅಪ್‌ ಮಾಡಿ

ಸ್ಟ್ರೆಚಿಂಗ್ ಅಥವಾ ವಾರ್ಮ್‌ ಅಪ್‌ ವ್ಯಾಯಾಮವನ್ನು ಸಾಮಾನ್ಯವಾಗಿ ಎಲ್ಲರೂ ವ್ಯಾಯಾಮ ಮಾಡುವ ಮೊದಲು ಅಭ್ಯಾಸ ಮಾಡುವ ಚಟುವಟಿಕೆಯಾಗಿದೆ. ಅನೇಕ ಜನರು ಇದನ್ನು ಮಾಡುವುದನ್ನು ಬಿಟ್ಟುಬಿಡುತ್ತಾರೆ, ಇದು ನಿಮ್ಮ ದೇಹದಲ್ಲಿ ನೋವು ಮತ್ತು ಬಿಗಿತಕ್ಕೆ ಕಾರಣವಾಗಬಹುದು. ಸ್ಟ್ರೆಚಿಂಗ್ ಎನ್ನುವುದು ನಿಮ್ಮ ಸ್ನಾಯುಗಳನ್ನು ಬೆಚ್ಚಗಾಗಲು ಮತ್ತು ಅಭ್ಯಾಸಕ್ಕೆ ಸಿದ್ಧಪಡಿಸುವುದಕ್ಕಾಗಿ ಮಾಡುವ ಆರಂಭಿಕ ವ್ಯಾಯಾಮವಾಗಿದೆ. ಹೀಗಾಗಿ ವ್ಯಾಯಾಮ ಆರಂಭಿಸುವ ಮೊದಲು ವಾರ್ಮ್‌ ಅಫ್‌ ವ್ಯಾಯಾಮಗಳನ್ನು ತಪ್ಪಿಸಬೇಡಿ.

​ಉತ್ತಮ ನಿದ್ದೆ ಅಗತ್ಯ

ಡೋಪಮೈನ್ ಮತ್ತು ಸಿರೊಟೋನಿನ್‌ನಂತಹ ಸಂತೋಷದ ಹಾರ್ಮೋನ್‌ಗಳನ್ನು ಸುಧಾರಿಸಲು ನಿದ್ದೆ ಮತ್ತು ವಿಶ್ರಾಂತಿ ಅತ್ಯಗತ್ಯ. ನಿದ್ದೆಯು ನಿಮ್ಮ ದೇಹಕ್ಕೆ ಸಾಕಷ್ಟು ಶಕ್ತಿಯನ್ನು ಒದಗಿಸುತ್ತದೆ, ಇದು ವ್ಯಾಯಾಮವನ್ನು ಅಭ್ಯಾಸ ಮಾಡಲು ಅಗತ್ಯವಾಗಿರುತ್ತದೆ. ವ್ಯಾಯಾಮ ಮಾಡಿದ ಬಳಿಕವೂ ದಣಿವಾಗದಂತೆ ನಿದ್ದೆ ದೇಹವನ್ನು ಸುರಕ್ಷಿತವಾಗಿಡುತ್ತದೆ. ಆದ್ದರಿಂದ ವ್ಯಾಯಾಮದ ಮೊದಲು 7 ರಿಂದ 9 ಗಂಟೆಗಳ ಆರಾಮದಾಯಕ ರಾತ್ರಿ ನಿದ್ದೆಯನ್ನು ಮಾಡುವುದು ಒಳ್ಳೆಯದು.

​ಪೋಷಕಾಂಶಗಳ ಪೂರೈಕೆ

ನಿಮ್ಮ ದೇಹಕ್ಕೆ ಸೂಕ್ತವಾದ ಪೂರಕವನ್ನು ನೀಡಿ. ವ್ಯಾಯಾಮವನ್ನು ಮಾಡುವಾಗ ನೀವು ಬೇಗನೆ ದಣಿಯುತ್ತಿದ್ದರೆ ದೇಹದ ಶಕ್ತಿ ಹೆಚ್ಚಿಸುವ ಆಹಾರಗಳ ಸೇವನೆ ಬಗ್ಗೆ ಗಮನ ನೀಡಿ. ಅಲ್ಲದೆ ವ್ಯಾಯಾಮದ ಬಳಿಕ ಕೂಡ ನಿಮಗೆ ಹೆಚ್ಚು ಸುಸ್ತು, ದಣಿವು ಕಾಡಬಾರದು, ಹೀಗಾಗಿ ಪೋಷಕಾಂಶಯುಕ್ತ ಆಹಾರ ಸೇವನೆಯನ್ನು ರೂಢಿಯಲ್ಲಿಟ್ಟುಕೊಳ್ಳಿ. ಇದರಿಂದ ದೇಹದ ತೂಕ ನಿಧಾನವಾಗಿ ಮತ್ತು ಆರೋಗ್ಯಕರ ಹಾದಿಯಲ್ಲಿ ಕಡಿಮೆಯಾಗುತ್ತದೆ.

​ಆಹಾರ ಸೇವನೆ ಹೀಗಿರಲಿ

ಹಲವಾರು ಜನರಿಗೆ, ವ್ಯಾಯಾಮ ಮಾಡುವ ಮೊದಲು ಅವರು ಏನು ತಿನ್ನಬೇಕು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ ಸಮೃದ್ಧ ಆಹಾರವು ನಿಮ್ಮ ವ್ಯಾಯಾಮದ ಪ್ರತಿರೋಧವನ್ನು ಸುಧಾರಿಸುತ್ತದೆ ಮತ್ತು ನಿಮ್ಮ ದೇಹಕ್ಕೆ ಇಂಧನವಾಗಿ ಕಾರ್ಯನಿರ್ವಹಿಸುತ್ತದೆ. ಕೆಫೀನ್ ಸೇವನೆಯು ನಿಮ್ಮ ನರಮಂಡಲದ ಕಾರ್ಯನಿರ್ವಹಣೆಯನ್ನು ಹೆಚ್ಚಿಸುವುದರಿಂದ ಒಂದು ಕಪ್ ಕಾಫಿ ಕುಡಿಯುವುದು ಸಹ ಒಳ್ಳೆಯದು ಎನ್ನುತ್ತಾರೆ ಹಲವು ಫಿಟ್‌ನೆಸ್ ತಜ್ಞರು. ಗ್ರೀನ್‌ ಕುಡಿದರೆ ಒಳ್ಳೆಯದು.

ಹಿಂದಿನ ಲೇಖನರಾಜ್ಯದಲ್ಲಿ 639 ಮಂದಿಗೆ ಕೋವಿಡ್‌ ಸೋಂಕು
ಮುಂದಿನ ಲೇಖನಏಷ್ಯಾಕಪ್‌ ಟೂರ್ನಿ: ಹಾಂಗ್‌ ಕಾಂಗ್‌ ವಿರುದ್ಧ ಭಾರತಕ್ಕೆ ಭರ್ಜರಿ ಜಯ