ಮನೆ ಅಪರಾಧ ಏಳು ಜನ ಡ್ರಗ್​​​​​ ಪೆಡ್ಲರ್​​ ಗಳ ಬಂಧನ: 1.66 ಕೋಟಿ ಮೌಲ್ಯದ ಡ್ರಗ್ಸ್​ ಜಪ್ತಿ

ಏಳು ಜನ ಡ್ರಗ್​​​​​ ಪೆಡ್ಲರ್​​ ಗಳ ಬಂಧನ: 1.66 ಕೋಟಿ ಮೌಲ್ಯದ ಡ್ರಗ್ಸ್​ ಜಪ್ತಿ

0

ಬೆಂಗಳೂರು: ಏಳು ಜನ ಡ್ರಗ್​​​​​ ಪೆಡ್ಲರ್​​ ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 1.66 ಕೋಟಿ ಮೌಲ್ಯದ ಡ್ರಗ್ಸ್​ ಜಪ್ತಿ ಮಾಡಿಕೊಂಡಿದ್ದಾರೆ.

ಸಿಸಿಬಿ ಪೊಲೀಸರು ಕಳೆದ ಒಂದ ವಾರದಿಂದ ನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಿದ್ದಾರೆ. ಗಿರಿನಗರ, ಮಡಿವಾಳ, ಚಿಕ್ಕಜಾಲ, ಆರ್.ಟಿ.ನಗರ ಬೈಯಪ್ಪನಹಳ್ಳಿ ವ್ಯಾಪ್ತಿಯಲ್ಲಿ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು ಬಂಧಿತರ ವಿರುದ್ಧ ಒಟ್ಟು ಐದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಂಧಿತರಿಂದ 18.5 ಕೆಜಿ ಗಾಂಜಾ, 203 ಗ್ರಾಂ ಎಂಡಿಎಂಎ, 410 ಎಕ್ಸ್ ಟಸಿ ಪಿಲ್ಸ್, 7 ಮೊಬೈಲ್, 2 ದ್ವಿಚಕ್ರವಾಹ, 1 ಕಾರ್ ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಂಗಳೂರು ಪೊಲೀಸರು ನೈಜೀರಿಯಾ ಮೂಲದ ಡ್ರಗ್ ಪೆಡ್ಲರ್ ಪೀಟರ್ ಎಂಬುವನಿಂದ 12 ಲಕ್ಷ ಹಣ ಜಪ್ತಿ ಮಾಡಿಕೊಂಡಿದ್ದಾರೆ. ಬಳಿ ಇದ್ದ ಹಣ ಜಪ್ತಿ ಮಾಡಿಕೊಳ್ಳಲಾಗಿದೆ. NDPS ಕಾಯ್ದೆಯ ಕಲಂ 5(A) ಹಾಗೂ 68 (E) ಹಾಗೂ 68 (F) ರಲ್ಲಿನ ಅಧಿಕಾರ ಚಲಾಯಿಸಿ ಹಣ ಜಪ್ತಿ ಮಾಡಿಕೊಳ್ಳಲಾಗಿದೆ. ವಿದ್ಯಾರಣ್ಯ ಪೊಲೀಸರು 2023ರಲ್ಲಿ ಈತನನ್ನು ಬಂಧಿಸಿದ್ದರು.

ಪೀಟರ್​​ ಹೆಂಡತಿಯ ಅಕೌಂಟ್ ಸೇರಿ ಒಟ್ಟು 7 ಅಕೌಂಟಗಳ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಪೀಟರ್​ 2018ರಲ್ಲಿ ವೈದ್ಯಕೀಯ ವೀಸಾದ ಮೂಲಕ ಭಾರತಕ್ಕೆ ಬಂದು ನೆಲೆಸಿದ್ದಾನೆ. ಪೀಟರ್ 2022 ರಲ್ಲಿ ಮಣಿಪುರ ಮೂಲದ ಯುವಯಿಯನ್ನು ಮದುವೆಯಾಗಿದ್ದಾನೆ. ಪೀಟರ್​ ಹೆಂಡತಿಯ ಹೆಸರಲ್ಲಿ ನಗರದಲ್ಲಿ ಎರೆಡು ಬ್ಯಾಂಕ್ ಖಾತೆ ಹೊಂದಿದ್ದಾನೆ. ಆರೋಪಿ ಪೀಟರ್​​ ಯುಪಿಐ ಪೇಮೆಂಟ್ ಮೂಲಕ ವಹಿವಾಟು ಮಾಡುತ್ತಿದ್ದನು.

ಹಿಂದಿನ ಲೇಖನಜ. 22 ರ ನಂತರ ಅಯೋಧ್ಯೆಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತೇವೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಂದಿನ ಲೇಖನನನ್ನ ಯುವಕ ಯುವತಿಯರು ಭ್ರಮ‌ನಿರಸನರಾಗದಂತೆ ಅವರ ಭವಿಷ್ಯಕ್ಕೆ ಶಕ್ತಿ ತುಂಬುವ ಸಲುವಾಗಿ ಯುವನಿಧಿ: ಸಿಎಂ ಸಿದ್ದರಾಮಯ್ಯ ಘೋಷಣೆ