ಮನೆ ದೇವಸ್ಥಾನ ಹಾಸನಾಂಬ ದರ್ಶನಕ್ಕೆ ಹರಿದು ಬಂದ ಭಕ್ತಸಾಗರ: 3 ದಿನದಲ್ಲಿ 42.78 ಲಕ್ಷ ರೂ. ಸಂಗ್ರಹ

ಹಾಸನಾಂಬ ದರ್ಶನಕ್ಕೆ ಹರಿದು ಬಂದ ಭಕ್ತಸಾಗರ: 3 ದಿನದಲ್ಲಿ 42.78 ಲಕ್ಷ ರೂ. ಸಂಗ್ರಹ

0

ಹಾಸನ(Hassan): ಜಿಲ್ಲೆಯ ಸುಪ್ರಸಿದ್ಧ ಹಾಸನಾಂಬ ದೇವಿಯ ದರ್ಶನ ಪಡೆಯಲು ಸಾವಿರಾರು ಮಂದಿ ಭಕ್ತರು ಆಗಮಿಸುತ್ತಿದ್ದು, ಕಾಣಿಕೆ ಹುಂಡಿಗೂ ಭಕ್ತರು ಶಕ್ತ್ಯಾನುಸಾರ ಕಾಣಿಕೆ ಅರ್ಪಿಸುತ್ತಿದ್ದಾರೆ.

ಸಾಮಾನ್ಯ ಸರತಿ ಸಾಲಿನಲ್ಲಿ ಹೆಚ್ಚು ಕಾಲ ನಿಲ್ಲಲು ಆಗಲ್ಲ ಎಂಬುವರಿಗಾಗಿ ತಲಾ ಒಂದು ಸಾವಿರ ರೂ. ಶುಲ್ಕ ವಿಧಿಸಿ ವಿಶೇಷ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ಕಳೆದ ಮೂರು ದಿನದಲ್ಲಿ ಅ.14 ರಂದು 4.99 ಲಕ್ಷ ರೂ., ಅ.15 ರಂದು 3.31 ಲಕ್ಷ ರೂ.,ಅ. 16 ರಂದು 8.35 ಲಕ್ಷ ರೂ. ಸಂಗ್ರಹವಾಗಿದೆ.

ಅದೇ ರೀತಿ ತಲಾ 300 ರೂ. ವಿಶೇಷ ದರ್ಶನದಿಂದ ಅ. 14 ರಂದು 4.30 ಲಕ್ಷ ರೂ., ಅ.15 ರಂದು 4.49 ಲಕ್ಷ ರೂ., ಅ. 16 ರಂದು 1.20 ಲಕ್ಷ ರೂ. ಸಂಗ್ರಹವಾಗಿದೆ.

30.50 ಲಕ್ಷ ರೂ. ಲಡ್ಡು ಮಾರಾಟ

ಈ ಬಾರಿ ವಿಶೇಷವಾಗಿ ಕೇವಲ ಮೂರು ದಿನದಲ್ಲಿ 30.50 ಲಕ್ಷ ಬೆಲೆಯ ಪ್ರಸಾದ ರೂಪದ ಲಡ್ಡು ಮಾರಾಟವಾಗಿದೆ. ಅ.14 ರಂದು 58 ಸಾವಿರ ರೂ.ಗಳ ಲಡ್ಡು ಮಾರಾಟವಾಗಿದ್ದರೆ, ಅ. 15 ರಂದು 1.21 ಲಕ್ಷ ಬೆಲೆಯ ಲಡ್ಡು, ಅ. 16 ರವರೆಗೆ 30.50 ಲಕ್ಷ ರೂ. ಲಡ್ಡು ಮಾರಾಟವಾಗಿದೆ. ಒಟ್ಟಾರೆ ಅ. 14 ರಂದು 9.88 ಲಕ್ಷ ರೂ., ಅ. 15 ರಂದು 9 ಲಕ್ಷ, ಅ.16ರ ವರಗೆ 42.78 ಲಕ್ಷ ರೂ. ಸಂಗ್ರಹವಾಗಿದೆ.

ಹಿಂದಿನ ಲೇಖನನಿಮ್ಮ ವಾಟ್ಸಪ್ ಬ್ಯಾನ್ ಆಗಿದ್ಯಾ?: ಈ ಟ್ರಿಕ್ ಅನುಸರಿಸಿ
ಮುಂದಿನ ಲೇಖನಇಷ್ಟದ ತರಕಾರಿ ಸಾಂಬಾರ್ ಮಾಡಿಲ್ಲವೆಂಬ ಕಾರಣಕ್ಕೆ ತಾಯಿಯನ್ನೇ ಕೊಂದ ಮಗ