Saval TV on YouTube
ನವದೆಹಲಿ(Newdelhi): ಗುಜರಾತ್’ನಲ್ಲಿ ಆಮ್ ಆದ್ಮಿ ಪಕ್ಷ ಗಳಿಸಿರುವ ಮತಗಳು ನಮ್ಮನ್ನು ರಾಷ್ಟ್ರೀಯ ಪಕ್ಷವಾಗಿ ಗುರುತಿಸಿಕೊಳ್ಳುವಂತೆ ಮಾಡಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಮೊದಲ ಸಲ ಆರೋಗ್ಯ ಮತ್ತು ಶಿಕ್ಷಣ ಆಧಾರಿತ ರಾಜಕೀಯ ಪಕ್ಷವೊಂದು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ದೇಶದ ಜನತೆಗೆ ಅಭಿನಂದನೆಗಳು ಎಂದಿದ್ದಾರೆ.
ಗುಜರಾತ್‌ನಲ್ಲಿ ಎಎಪಿ 7 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ರಾಷ್ಟ್ರೀಯ ಪಕ್ಷವಾಗಿ ಗುರುತಿಸಿಕೊಳ್ಳಲು ಎಎಪಿ 2 ಸ್ಥಾನ ಗೆಲ್ಲಬೇಕು ಮತ್ತು ಶೇ.6ರಷ್ಟು ಮತ ಗಳಿಸಬೇಕು. ಗುಜರಾತ್ ಚುನಾವಣೆಯಲ್ಲಿ ಉತ್ತಮ ಪ್ರಚಾರ ನಡೆಸಿದ್ದ ಎಎಪಿ, ಎರಡಂಕಿ ಸ್ಥಾನ ಪಡೆಯುವುದು ಕಷ್ಟವೆಂದು ಚುನಾವಣೋತ್ತರ ಸಮೀಕ್ಷೆಗಳು ಅಂದಾಜಿಸಿದ್ದವು.
ಇಷ್ಟಾಗಿಯೂ ಹೊಸ ಪಕ್ಷವಾಗಿ, ಬಿಜೆಪಿ ಅಬ್ಬರದ ನಡುವೆ ಗುಜರಾತ್’ನಲ್ಲಿ ಎಎಪಿ ಬೆಳವಣಿಗೆ ಆಶಾದಾಯಕವಾಗಿದೆ.