ಮನೆ ರಾಜಕೀಯ ಕೋಲಾರದಲ್ಲಿ ಸ್ಪರ್ಧಿಸದಂತೆ ರಾಹುಲ್ ಗಾಂಧಿ ಹೇಳಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

ಕೋಲಾರದಲ್ಲಿ ಸ್ಪರ್ಧಿಸದಂತೆ ರಾಹುಲ್ ಗಾಂಧಿ ಹೇಳಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

0

ಬೆಂಗಳೂರು:  ಕೋಲಾರದಲ್ಲಿ ಸ್ಪರ್ಧಿಸಬೇಡಿ ಎಂದು ರಾಹುಲ್ ಗಾಂಧಿ ಹೇಳಿಲ್ಲ. 1 ಪರ್ಸೆಂಟ್ ರಿಸ್ಕ್ ತೆಗೆದುಕೊಳ್ಳಬೇಡಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಸಿದ್ಧರಾಮಯ್ಯ, ಸ್ಪರ್ಧೆ ವಿಚಾರದಲ್ಲಿ ಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆ. ನೀವು ರಾಜ್ಯಾದ್ಯಂತ ಪ್ರವಾಸ ಮಾಡಬೇಕು ಎಂದಿದ್ದಾರೆ. ನನ್ನ ಸ್ಪರ್ಧೆ ವಿಚಾರ ವರಿಷ್ಠರ ನಿರ್ಧಾರಕ್ಕೆ ಬಿಟ್ಟಿದ್ದು ಎಂದರು.

ಕೋಲಾರದ ಸ್ಪರ್ಧೆ ವಿಚಾರ ಇನ್ನೂ ಇತ್ಯರ್ಥ ಆಗಿಲ್ಲ. ರಿಸ್ಕ್ ತೆಗೆದುಕೊಳ್ಳದಂತೆ ಹೇಳಿದ್ದಾರೆ. ಹೈಕಮಾಂಡ್ ಬೇರೆನು ಹೇಳಿಲ್ಲ. ಚುನಾವಣಾ ಪ್ರಚಾರಕ್ಕೆ ರಾಜ್ಯದಲ್ಲಿ  ಓಡಾಡಬೇಕು.  ಕೋಲಾರಕ್ಕೆ ಒಂದಿನ ಪ್ರಚಾರಕ್ಕೆ ಹೋಗಬಾರದು. ಕೋಲಾರಕ್ಕೆ ಸಮಯ ಕೊಡಲು ಆಗಲ್ಲ ಎಂದಿದ್ದೆ. ಕೋಲಾರ ವಿಚಾರ ಪೆಂಡಿಂಗ್ ಇಟ್ಟಿದ್ದೇನೆ. ಆದರೆ ಕೋಲಾರದಿಂದ ಹಿಂದೆ ಸರಿದ್ರು  ಎಂದು ಅಪಪ್ರಚಾರವಾಗುತ್ತಿದೆ ಎಂದು ಸಿದ್ಧರಾಯ್ಯ ತಿಳಿಸಿದರು.

ಹಿಂದಿನ ಲೇಖನಸಿದ್ದರಾಮಯ್ಯ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಇದ್ದಿಲು ಮಸಿಗೆ ಬುದ್ಧಿ ಹೇಳಿದಂತೆ: ಸಿಎಂ ಬೊಮ್ಮಾಯಿ
ಮುಂದಿನ ಲೇಖನದೆಹಲಿ ಬಜೆಟ್ ಮಂಡನೆಗೆ ತಡೆ: ಪ್ರಧಾನಿಗೆ ಪತ್ರ ಬರೆದ ಅರವಿಂದ್ ಕೇಜ್ರಿವಾಲ್