ಮನೆ ರಾಜ್ಯ ಮೈಸೂರಿನಲ್ಲಿ ಅಪಘಾತ: ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿಗೆ ಗಾಯ

ಮೈಸೂರಿನಲ್ಲಿ ಅಪಘಾತ: ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿಗೆ ಗಾಯ

0

ಮೈಸೂರು(Mysuru): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ದಾಮೋದರ ಮೋದಿ ಅವರಿದ್ದ ಕಾರು ಇಲ್ಲಿನ ಕಡಕೊಳ ಬಳಿ ಡಿವೈಡರ್’ಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾದ ಘಟನೆ ಮಂಗಳವಾರ ನಡೆದಿದೆ.

ತಾಲ್ಲೂಕಿನ ಕಡಕೊಳ ಬಳಿ ಅಪಘಾತವಾಗಿದ್ದು, ಕಾರಿನಲ್ಲಿದ್ದ ಪ್ರಹ್ಲಾದ್ ದಾಮೋದರ್ ಮೋದಿ, ಅವರ ಪುತ್ರ‌ ಹಾಗೂ ಸೊಸೆ ಗಾಯಗೊಂಡಿದ್ದು, ಅವರನ್ನು ಮೈಸೂರಿನ ಜೆಎಸ್ ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಹ್ಲಾದ್ ಮೋದಿ ಅವರು ಮೈಸೂರು ಕಡೆಯಿಂದ ಬಂಡೀಪುರದ ಕಡೆಗೆ ತೆರಳುತ್ತಿದ್ದರು. ಮಧ್ಯಾಹ್ನ 1-40ರ ಸಮಯದಲ್ಲಿ ಕಡಕೊಳದ ಬಳಿ ರೋಡ್ ಡಿವೈಡರ್ ಗೆ ಅವರಿದ್ದ ಬೆನ್ಜ್ ಕಾರು (KA-51-MN-5678) ಡಿಕ್ಕಿ ಹೊಡೆದಿದೆ. ಕಾರಿನ ಚಾಲಕ ಸತ್ಯನಾರಾಯಣ ಅವರನಿಯಂತ್ರಣ ತಪ್ಪಿ ಕಾರು ರೋಡ್ ಡಿವೈಡರ್’ಗೆ ಗುದ್ದಿದೆ.

ಸ್ಥಳದಲ್ಲಿಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಹಾಗೂ ಪೊಲೀಸ್ ಸಿಬ್ಬಂದಿ ಇದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಿಂದಿನ ಲೇಖನವೈಯಕ್ತಿಕ ದ್ವೇಷಕ್ಕೆ ಮಿಕ್ಸಿ ಬ್ಲಾಸ್ಟ್: ಇಬ್ಬರ ಬಂಧನ
ಮುಂದಿನ ಲೇಖನಹರಿಹರರ ಬೀಡು ಶಿವನಸಮುದ್ರ