ಬೆಂಗಳೂರು ನಟ ಸಾರ್ವಭೌಮ ಡಾ.ರಾಜ್‌ಕುಮಾರ್ ಅವರ ಸ್ಮಾರಕ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ನಟ ಚೇತನ್ ಅವರು ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಹೊರಬಂದ ಬಳಿಕ ಆರೋಪಗಳನ್ನು ಮಾಡಿದ್ದಾರೆ ಎಂಬ ಮಾಹಿತಿ ಬಂದಿದೆ. ಚೇತನ್ ಅವರ ಮನೆಯ ಮುಂದೆ ಬಂದು ಬೆದರಿಕೆ ಹಾಕದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಾರಾ ಗೋವಿಂದ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ .
ಚೇತನ್ ಅವರು ತಮ್ಮ ಬೆಂಬಲಿಗರು ಹಾಗೂ ವಿವಿಧ ಜನಪರ ಮತ್ತು ದಲಿತ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಠಾಣೆಗೆ ಬಂದು ದೂರು ನೀಡಿದ್ದು. ಈ ಕುರಿತು ಮಾತನಾಡಿದ ಅವರು, ಕಳೆದ ಶನಿವಾರ ಸಾ ರಾ ಗೋವಿಂದ್ ನನ್ನ ಮನೆಯ ಮುಂದೆ ಬಂದು ಅವಾಚ್ಯ ಶಬ್ದಗಳಲ್ಲಿ ಮಾತನಾಡಿ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಗುತ್ತಿದೆ. ಇದು ಕೇವಲ ಒಂದು ದಿನದ ಘಟನೆ ಅಲ್ಲ. ಅವರ ನಡೆನುಡಿಗಳ ಹಿನ್ನೆಲೆಯೇ ಗಂಭೀರವಾಗಿದೆ ಎಂದು ಆರೋಪಿಸಿದ್ದು. ಅವರು ಮುಂದುವರಿದು, ಇದರ ಹಿಂದೆಯೂ ಲಂಕೇಶ್ ಪತ್ರಿಕೆಯ ಕಚೇರಿಯ ಮೇಲೆ ದಾಳಿ ನಡೆಸಿರುವುದು ಹಾಗೂ ಮಹಿಳಾ ಪತ್ರಕರ್ತೆಯ ಮೇಲೆ ಹಲ್ಲೆ ಮಾಡಿದ ಆರೋಪಗಳು ಅವರ ವಿರುದ್ಧ ಕೇಳಿಬಂದಿವೆ. ಅಲ್ಲದೆ, ಫಿಲ್ಮ್ ಚೇಂಬರ್‌ನಲ್ಲಿ ಹಣಕಾಸು ಸಂಬಂಧಿತ ಸಮಸ್ಯೆ ಸೃಷ್ಟಿಸಿರುವುದು, ಕಳ್ಳತನದ ಆರೋಪಗಳು ಸೇರಿದಂತೆ ಹಲವು ಗಂಭೀರ ಆರೋಪಗಳು ಅವರ ಮೇಲೆ ಇವೆ ಎಂದು ಹೇಳಿಕೆ ನಿಡ್ಡಿದ್ದಾರೆ ಎನ್ನಲಾಗಿದೆ.
ಈ ಕುರಿತ್ತಾಗಿ ಡಾ. ರಾಜ್ ಕುಮಾರ್ ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಲಾಗುತ್ತಿದೆ. ಅವರ ಅಭಿಮಾನಿ ಎಂದು ಹೇಳಿಕೊಳ್ಳುವ ಯಾವುದೇ ಯೋಗ್ಯತೆಯೂ ಸಾರಾ ಗೋವಿಂದ್ ಅವರಿಗೆ ಇಲ್ಲ ಎನ್ನಲಾಗಿದ್ದು. ಸಿನಿಮಾ ರಂಗದ ಬೆಳವಣಿಗೆಗೆ ಅಡ್ಡಿಯಾಗುವ ಕೆಲಸಗಳು ನಡೆಯುತ್ತಿವೆ. ಯಾರಾದರೂ ಉದ್ಯಮದ ಒಳಿತಿಗಾಗಿ ನಿಂತರೆ, ಅವರ ಮೇಲೆ ದಬ್ಬಾಳಿಕೆ ಹಾಗೂ ಬೆದರಿಕೆ ತಂತ್ರಗಳನ್ನು ಬಳಸಲಾಗುತ್ತಿದೆ ಎಂದು ಚೇತನ್ ತೀವ್ರವಾಗಿ ಆರೋಪಿಸಿದ್ದಾರೆ ಎನ್ನಲಾಗಿದೆ. ಈ ಘಟನೆ ಕುರಿತ್ತಾಗಿ ಪೊಲೀಸರ ಸಮ್ಮುಖದಲ್ಲಿಯೇ ನನಗೆ ಬೆದರಿಕೆ ಹಾಕಲಾಗಿದೆ. ಜೀವಕ್ಕೆ ಅಪಾಯ ಉಂಟುಮಾಡುವ ರೀತಿಯಲ್ಲಿ ಮಾತನಾಡಲಾಗಿದೆ.
ಆದ್ದರಿಂದ ಅವರ ವಿರುದ್ಧ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಜನಪರ ಹಾಗೂ ದಲಿತ ಸಂಘಟನೆಗಳ ಪ್ರತಿನಿಧಿಗಳು ಕೂಡ ಚೇತನ್ ಅವರೊಂದಿಗೆ ಇದ್ದು, ಸಮೂಹವಾಗಿ ದೂರು ಸಲ್ಲಿಸಿದ್ದಾರೆ. ಸಾರಾ ಗೋವಿಂದ್ ಅವರು ದಬ್ಬಾಳಿಕೆ ಮತ್ತು ಭಯ ಹುಟ್ಟಿಸುವ ಕೆಲಸಗಳಲ್ಲಿ ತೊಡಗಿದ್ದಾರೆ. ದಲಿತ ವಿರೋಧಿ ಹೇಳಿಕೆಗಳನ್ನು ಕೂಡ ನೀಡಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡುತ್ತೇವೆ ಎಂದು ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ ಎನ್ನಬಹುದ್ದಾಗಿದೆ.















