ಮನೆ ಮನರಂಜನೆ ತೆಲುಗಿನಲ್ಲಿ ನಟ ಡಾಲಿ ಧನಂಜಯ್ 26ನೇ ಸಿನಿಮಾ

ತೆಲುಗಿನಲ್ಲಿ ನಟ ಡಾಲಿ ಧನಂಜಯ್ 26ನೇ ಸಿನಿಮಾ

0

ಸ್ಯಾಂಡಲ್’ವುಡ್ ನಟ ಡಾಲಿ ಧನಂಜಯ್ ಕನ್ನಡ ಹಾಗೂ ತೆಲುಗು ಎರಡು ಭಾಷೆ ಚಿತ್ರಕ್ಕೆ ನಟರಾಕ್ಷಸ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದು ಡಾಲಿ ಧನಂಜಯ್ ನಟಿಸಲಿರುವ 26ನೇ ಸಿನಿಮಾ.

ಈ ಚಿತ್ರದಲ್ಲಿ ಧನಂಜಯ್ ಜೊತೆಗೆ ತೆಲುಗಿನ ಪ್ರತಿಭಾನ್ವಿತ ನಟ ಸತ್ಯದೇವ್ ಕೂಡ ಮುಖ್ಯಭೂಮಿಕೆಯಲ್ಲಿ ಬಣ್ಣ ಹಚ್ಚಿದ್ದಾರೆ. ವಿಶೇಷ ಅಂದರೆ ಇದು ಸತ್ಯದೇವ್ ನಟಿಸುತ್ತಿರುವ 26ನೇ ಚಿತ್ರ ಕೂಡ ಹೌದು..

ಈ ಹಿಂದೆ ತೆಲುಗಿನಲ್ಲಿ ಪೆಂಗ್ವಿನ್ ಸಿನಿಮಾ ಮಾಡಿದ್ದ ಈಶ್ವರ್ ಕಾರ್ತಿಕ್ ಡಾಲಿ-ಸತ್ಯದೇವ್ ಬಣ್ಣ ಹಚ್ಚಿರುವ 26ನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕ್ರೈಮ್ ಕಥೆಯನ್ನೊಳಗೊಂಡ ಈ ಚಿತ್ರವನ್ನು ಓಲ್ಡ್‌ ಟೌನ್ ಪಿಕ್ಚರ್ಸ್ ಸಂಸ್ಥೆಯಡಿ ಬಾಲ ಸುಂದರಂ ಮತ್ತು ದಿನೇಶ್ ಸುಂದರಂ ನಿರ್ಮಾಣ ಮಾಡುತ್ತಿದ್ದಾರೆ.

ಟಗರು ಸಿನಿಮಾ ಖ್ಯಾತಿಯ ಚರಣ್ ರಾಜ್ ಸಂಗೀತ, ಮಣಿಕಂಠನ್ ಕೃಷ್ಣಮಾಚಾರಿ ಛಾಯಾಗ್ರಹಣ, ಅನಿಲ್ ಕ್ರಿಶ್ ಸಂಕಲನ ಸಿನಿಮಾಕ್ಕಿದ್ದು, ಶೀಘ್ರದಲ್ಲೇ ಟೈಟಲ್ ರಿವೀಲ್ ಮಾಡಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ.

ಹಿಂದಿನ ಲೇಖನಐಸಿಸ್ ನಂಟು: ಶಿವಮೊಗ್ಗದಲ್ಲಿ ಇಬ್ಬರ ಬಂಧನ
ಮುಂದಿನ ಲೇಖನಯುವ ಜನರ ಆಕ್ರೋಶದ ಅಲೆಗೆ ಭ್ರಷ್ಟ ಬಿಜೆಪಿ ಸರ್ಕಾರ ಕೊಚ್ಚಿ ಹೋಗುವ ದಿನ ದೂರವಿಲ್ಲ: ಸಿದ್ದರಾಮಯ್ಯ