ಮನೆ ರಾಷ್ಟ್ರೀಯ ನಾಲ್ಕನೇ ಹಂತದ ಕಕ್ಷೆ ಬದಲಾವಣೆ ಕಾರ್ಯ ಯಶಸ್ವಿಯಾಗಿ ಪೂರ್ಣಗೊಳಿಸಿದ ಆದಿತ್ಯ ಎಲ್ 1

ನಾಲ್ಕನೇ ಹಂತದ ಕಕ್ಷೆ ಬದಲಾವಣೆ ಕಾರ್ಯ ಯಶಸ್ವಿಯಾಗಿ ಪೂರ್ಣಗೊಳಿಸಿದ ಆದಿತ್ಯ ಎಲ್ 1

0

ನವದೆಹಲಿ: ಶುಕ್ರವಾರ ಮುಂಜಾನೆ ಸೂರ್ಯನನ್ನು ಅಧ್ಯಯನ ಮಾಡುವ ಭಾರತದ ಮೊದಲ ಬಾಹ್ಯಾಕಾಶ ಆಧಾರಿತ ಮಿಷನ್ ಆದಿತ್ಯ ಎಲ್ 1 ಬಾಹ್ಯಾಕಾಶ ನೌಕೆಯು ನಾಲ್ಕನೇ ಹಂತದ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿದೆ ಎಂದು ಇಸ್ರೋ ತಿಳಿಸಿದೆ.

ಈ ಕುರಿತು ಟ್ವಿಟರ್ ಎಕ್ಸ್‌ ನಲ್ಲಿ ಮಾಹಿತಿ ಹಂಚಿಕೊಂಡ ಇಸ್ರೊ ಗುರುವಾರ ತಡರಾತ್ರಿ 2 ಗಂಟೆಗೆ ಕಕ್ಷೆ ಬದಲಾವಣೆ ಕಾರ್ಯ ಯಶಸ್ವಿಯಾಗಿ ನೆರವೇರಿದೆ ಎಂದು ಹೇಳಿಕೊಂಡಿದೆ.

ಸೂರ್ಯನನ್ನು ಅಧ್ಯಯನ ಮಾಡಲು ಲಗ್ರೇಂಜ್ ಪಾಯಿಂಟ್ 1 (L1) ಗೆ ಹೊರಟಿರುವ ಬಾಹ್ಯಾಕಾಶ ನೌಕೆಯು ಮುಂದಿನ ಸೆಪ್ಟೆಂಬರ್ 19 ರಂದು ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ನಿರ್ಣಾಯಕ ಟ್ರಾನ್ಸ್-ಲಗ್ರಾಂಜಿಯನ್ ಪಾಯಿಂಟ್ 1 ಅಳವಡಿಕೆಗೆ (TL1I) ಒಳಗಾಗಲಿದೆ ಎಂದು ISRO ಹೇಳಿದೆ.

ಸೂರ್ಯನನ್ನು ಅಧ್ಯಯನ ಮಾಡುವ ಭಾರತದ ಮೊದಲ ಬಾಹ್ಯಾಕಾಶ-ಆಧಾರಿತ ಮಿಷನ್ ಆದಿತ್ಯ-ಎಲ್ 1, ಸೆಪ್ಟೆಂಬರ್ 2 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಹಾರಾಟ ನಡೆಸಿತು.

ಹಿಂದಿನ ಲೇಖನಶ್ರೀರಾಂಪುರ: ಮೂಕಾಂಬಿಕಾ ಸಮೃದ್ಧಿ ಬಡಾವಣೆಯಲ್ಲಿ ಭಾರತ ಸಂವಿಧಾನದ ಪ್ರತಿಜ್ಞಾ ವಿಧಿ ಸ್ವೀಕಾರ
ಮುಂದಿನ ಲೇಖನಸರಗೂರು: ಕಾಡಾನೆ ದಾಳಿಯಿಂದ ರೈತ ಸಾವು