ಮನೆ ಸುದ್ದಿ ಜಾಲ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಏರ್ ಇಂಡಿಯಾದ ಎರಡು ವಿಮಾನಗಳ ಕಾರ್ಯಾಚರಣೆ

ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಏರ್ ಇಂಡಿಯಾದ ಎರಡು ವಿಮಾನಗಳ ಕಾರ್ಯಾಚರಣೆ

0

ನವದೆಹಲಿ : ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತರಲು ಏರ್ ಇಂಡಿಯಾದ ಎರಡು ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ.

ಈ ವಿಮಾನಗಳು ದೆಹಲಿಯಿಂದ ಬುಕಾರೆಸ್ಟ್ (ರೊಮೇನಿಯಾ) ಮತ್ತು ಬುಡಾಪೆಸ್ಟ್ (ಹಂಗೇರಿ)ನಿಂದ ಭಾರತೀಯರನ್ನು ಕರೆತರಲಿವೆ. ಇದರಲ್ಲಿ ಒಂದು ವಿಮಾನ ಈಗಾಗಲೇ ರೊಮೇನಿಯಾದಿಂದ ಹಲವಾರು ಭಾರತೀಯರನ್ನು ಹೊತ್ತು ತರುತ್ತಿದೆ. ಸಂಜೆ ವೇಳೆಗೆ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದೆ ಎಂದು ಏರ್​ ಇಂಡಿಯಾ ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಉಕ್ರೇನ್​ನಿಂದ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಭಾರತೀಯರ ಕೋವಿಡ್​ ತಪಾಸಣೆಗಾಗಿ ನಿಲ್ದಾಣದಲ್ಲಿ ವಿಶೇಷ ಕಾರಿಡಾರ್​ ರೂಪಿಸಲಾಗಿದೆ. ವಿಮಾನ ಲ್ಯಾಂಡ್​ ಆದ ಬಳಿಕ ಕೋವಿಡ್​ ತಪಾಸಣೆ ನಡೆಸುವ ಅಗತ್ಯವಿರುವ ಕಾರಣ ಈ ವಿಶೇಷ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಹಿಂದಿನ ಲೇಖನಹಳೆ ದ್ವೇಷಕ್ಕೆ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ
ಮುಂದಿನ ಲೇಖನರಾಜ್ಯದಲ್ಲಿ 12 ವರ್ಷದಲ್ಲಿ 8,207 ರೈತರ ಆತ್ಮಹತ್ಯೆ ಪ್ರಕರಣ ವರದಿ