ಮನೆ ಸುದ್ದಿ ಜಾಲ ರಾಜ್ಯದಲ್ಲಿ 12 ವರ್ಷದಲ್ಲಿ 8,207 ರೈತರ ಆತ್ಮಹತ್ಯೆ ಪ್ರಕರಣ ವರದಿ

ರಾಜ್ಯದಲ್ಲಿ 12 ವರ್ಷದಲ್ಲಿ 8,207 ರೈತರ ಆತ್ಮಹತ್ಯೆ ಪ್ರಕರಣ ವರದಿ

0

ಬೆಳಗಾವಿ: ರಾಜ್ಯದಲ್ಲಿ 12 ವರ್ಷದಲ್ಲಿ 8,207 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ವರ್ಷಕ್ಕೆ ಸರಾಸರಿ 683 ಕೃಷಿಕರು ಪ್ರಾಣ ಕಳೆದುಕೊಂಡಿರುವುದು ಕಳವಳಕ್ಕೆ ಕಾರಣವಾಗಿದೆ.

ಜಿಲ್ಲೆಯ ಅಥಣಿಯ ವಕೀಲ ಭೀಮನಗೌಡ ಪರಗೊಂಡ ಅವರು ಮಾಹಿತಿ ಹಕ್ಕು ಕಾಯ್ದೆಯಲ್ಲಿ ಅರ್ಜಿ ಸಲ್ಲಿಸಿದ್ದರು. ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಹಾಗೂ ಯೋಜನಾ ವಿಭಾಗದ ಸಾರ್ವಜನಿಕ ಮಾಹಿತಿ ಅಧಿಕಾರಿ ಕಚೇರಿಯಿಂದ ಅಂಕಿ–ಅಂಶಗಳನ್ನು ಒದಗಿಸಿದೆ.

2015–16ರಲ್ಲಿ ಅತಿ ಹೆಚ್ಚು ಅಂದರೆ 1,525 ಪ್ರಕರಣಗಳು ವರದಿಯಾಗಿವೆ. 2017–18ರಲ್ಲಿ 1,323 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಎಲ್ಲ ಪ್ರಕರಣಗಳನ್ನೂ ಸರ್ಕಾರದ ಪರಿಹಾರಕ್ಕೆ ಪರಿಗಣಿಸಿಲ್ಲ. ವಿವಿಧ ಕಾರಣಗಳನ್ನು ನೀಡಿ ನೂರಾರು ಪ್ರಕರಣಗಳನ್ನು ತಿರಸ್ಕರಿಸಲಾಗಿದೆ. 215 ಪ್ರಕರಣಗಳು ಬಾಕಿ ಇವೆ. 18 ಪ್ರಕರಣಗಳಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯ(ಎಫ್ಎಸ್‌ಎಲ್‌) ವರದಿ ಬರುವುದು ಬಾಕಿ ಇದೆ. 197 ಪ್ರಕರಣಗಳಲ್ಲಿ ಇತರ ದಾಖಲಾತಿಗಳನ್ನು ಕೇಳಲಾಗಿರುವುದರಿಂದ ಅವೂ ಬಾಕಿ ಇವೆ ಎಂದು ಮಾಹಿತಿ ನೀಡಲಾಗಿದೆ.

2005–16ನೇ ಸಾಲಿನಿಂದ ಸತತ ಮೂರು ವರ್ಷ ಸರಾಸರಿ 1,200 ಮಂದಿ ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ.ವರದಿಯಾದ ಒಟ್ಟು 8,207 ಪ್ರಕರಣಗಳಲ್ಲಿ 6,160 ಪ್ರಕರಣಗಳನ್ನಷ್ಟೆ ಅರ್ಹ ಎಂದು ಪರಿಹಾರಕ್ಕಾಗಿ ಪರಿಗಣಿಸಲಾಗಿದೆ. 1,809 ಪ್ರಕರಣಗಳನ್ನು ತಿರಸ್ಕರಿಸಲಾಗಿದೆ.

ಹಿಂದಿನ ಲೇಖನಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಏರ್ ಇಂಡಿಯಾದ ಎರಡು ವಿಮಾನಗಳ ಕಾರ್ಯಾಚರಣೆ
ಮುಂದಿನ ಲೇಖನಕೋವಿಡ್ ಕಾಲದಲ್ಲಿ ವೈದ್ಯರು, ವಿಜ್ಞಾನಿಗಳೇ ದೇವರಾದರು: ಪ್ರೊ.ಎಸ್.ಅಯ್ಯಪ್ಪನ್