ಮನೆ ಕ್ರೀಡೆ 2022ರಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರಾ ರಾಹುಲ್-ಆಥಿಯಾ ಶೆಟ್ಟಿ?

2022ರಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರಾ ರಾಹುಲ್-ಆಥಿಯಾ ಶೆಟ್ಟಿ?

0

ಹೈದರಾಬಾದ್​​​(ತೆಲಂಗಾಣ): ಖ್ಯಾತ ಕ್ರಿಕೆಟ್​ ತಾರೆ ಕೆ.ಎಲ್​ ರಾಹುಲ್​ ಮತ್ತು ಬಾಲಿವುಡ್ ನಟಿ ಆಥಿಯಾ ಶೆಟ್ಟಿ ಸಂಬಂಧ ಇದೀಗ ಗುಟ್ಟಾಗಿ ಉಳಿದಿಲ್ಲ. ಕಳೆದ ಕೆಲ ದಿನಗಳ ಹಿಂದೆ ಸುನೀಲ್​ ಶೆಟ್ಟಿ ಕುಟುಂಬದೊಂದಿಗೆ ರಾಹುಲ್​​​​​​ ಕಾಣಿಸಿದ್ದರು. ಈ ಮೂಲಕ ಇಬ್ಬರ ನಡುವಿನ ಲವ್ವಿ-ಡವ್ವಿ ವಿಚಾರಕ್ಕೆ ಮತ್ತಷ್ಟು ಪುಷ್ಠಿ ಸಿಕ್ಕಿತ್ತು. ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ ಈ ಜೋಡಿ 2022ರಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿದೆ.

ಬಾಲಿವುಡ್ ನಟ ಸುನೀಲ್ ಶೆಟ್ಟಿ ಮಕ್ಕಳಾಗಿರುವ ಆಥಿಯಾ ಮತ್ತು ಆಹಾನ್​ ಶೆಟ್ಟಿ ವಿವಾಹ ಮಾಡಲು ಕುಟುಂಬ ನಿರ್ಧರಿಸಿದ್ದು, ಒಟ್ಟಿಗೆ ಮದುವೆ ಸಮಾರಂಭ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

2022ರಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರಾ ರಾಹುಲ್​-ಆಥಿಯಾ ಶೆಟ್ಟಿ?ವರದಿಗಳ ಪ್ರಕಾರ ಆಥಿಯಾ-ರಾಹುಲ್​​ ಸಂಬಂಧಕ್ಕೆ ಈಗಾಗಲೇ ಎರಡು ಕುಟುಂಬಗಳಿಂದ ಗ್ರೀನ್​ ಸಿಗ್ನಲ್​ ಸಿಕ್ಕಿದೆ. ಮತ್ತೊಂದು ಕಡೆ ಆಹಾನ್ ಕೂಡ ತಮ್ಮ ಬಹುಕಾಲದ ಗೆಳತಿ ತಾನಿಯಾ ಶ್ರಾಫ್​ ಜೊತೆ ಸಪ್ತಪದಿ ತುಳಿಯಲಿದ್ದಾರೆ ಎಂದು ವರದಿಯಾಗಿದೆ.ಇದನ್ನೂ ಓದಿರಿ: ಮೊದಲ ಸಲ ಸಾರ್ವಜನಿಕವಾಗಿ ಕಾಣಿಸಿಕೊಂಡ ಆಥಿಯಾ – ರಾಹುಲ್​!ಕಳೆದ ಕೆಲ ದಿನಗಳ ಹಿಂದೆ ಸುನೀಲ್ ಶೆಟ್ಟಿ ಮಗ ಆಹಾನ್​​ ನಟನೆ ಮಾಡಿರುವ ತಡಪ್​ ಚಿತ್ರದ ಸ್ಕ್ರೀನಿಂಗ್ ವೇಳೆ ಈ ಜೋಡಿ ಸಾರ್ವಜನಿಕವಾಗಿ ಕಾಣಿಸಿತ್ತು. ಇದಕ್ಕೂ ಮೊದಲು ಕಳೆದ ಕೆಲ ದಿನಗಳ ಹಿಂದೆ ತಾವಿಬ್ಬರು ಪರಸ್ಪರ ಪ್ರೀತಿಸುತ್ತಿರುವ ವಿಷಯವನ್ನ ಖುದ್ದಾಗಿ ರಾಹುಲ್​ ಬಹಿರಂಗಪಡಿಸಿದ್ದರು.ಆಥಿಯಾ ಹುಟ್ಟುಹಬ್ಬದ ವೇಳೆ ‘ಹ್ಯಾಪಿ ಬರ್ತಡೇ ಮೈ ಲವ್​’ ಎಂದು ಪೋಸ್ಟ್​​ ಮಾಡಿದ್ದರು. ಇದಾದ ಬಳಿಕ ವಿಶ್ವಕಪ್​​ನಲ್ಲಿ ಸ್ಕಾಟ್ಲೆಂಡ್​ ವಿರುದ್ಧ ನಡೆದ ಪಂದ್ಯದ ವೇಳೆ ಮೈದಾನಕ್ಕೆ ಆಗಮಿಸಿದ್ದ ಆಥಿಯಾ ಕ್ರೀಡಾಂಗಣದಲ್ಲಿ ಕುಳಿತು ಪಂದ್ಯ ವೀಕ್ಷಣೆ ಮಾಡಿದ್ದರು.

ಟೀಂ ಇಂಡಿಯಾ ಏಕದಿನ, ಟಿ20 ಕ್ರಿಕೆಟ್​ನ ಉಪನಾಯಕನಾಗಿರುವ ಕೆ ಎಲ್‌ ರಾಹುಲ್​​, ಇದೀಗ ಐಪಿಎಲ್​ನಲ್ಲಿ ಲಖನೌ ತಂಡದ ಕ್ಯಾಪ್ಟನ್​ ಆಗಿ ಆಯ್ಕೆಯಾಗಿದ್ದಾರೆ.

ಹಿಂದಿನ ಲೇಖನಬರ್ತ್ ಡೇ ದಿನವೇ ಆಲ್ರೌಂಡರ್ ಅಕ್ಸರ್ ಪಟೇಲ್ ನಿಶ್ಚಿತಾರ್ಥ
ಮುಂದಿನ ಲೇಖನಕಳ್ಳತನ ಪ್ರಕರಣ: ನಾಲ್ವರ ಬಂಧನ; 6 ದ್ವಿ ಚಕ್ರ ವಾಹನ, 30 ಗ್ರಾಂ ಚಿನ್ನ ವಶಕ್ಕೆ