ಮನೆ ಕ್ರೀಡೆ ಜಿಂಬಾಬ್ವೆ ವಿರುದ್ಧದ ಸರಣಿಗೆ ಆಲ್‌ರೌಂಡರ್ ಶಾಬಾಜ್ ಅಹ್ಮದ್ ಆಯ್ಕೆ

ಜಿಂಬಾಬ್ವೆ ವಿರುದ್ಧದ ಸರಣಿಗೆ ಆಲ್‌ರೌಂಡರ್ ಶಾಬಾಜ್ ಅಹ್ಮದ್ ಆಯ್ಕೆ

0

ನವದೆಹಲಿ (New Delhi): ಆಗಸ್ಟ್‌ 18 ರಿಂದ ಜಿಂಬಾಬ್ವೆ-ಭಾರತ ನಡುವಣ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಈ ಪಂದ್ಯಕ್ಕೆ ಆಲ್‌ರೌಂಡರ್ ಶಾಬಾಜ್ ಅಹ್ಮದ್ ಅವರು ಮೊದಲ ಬಾರಿಗೆ ಭಾರತ ಕ್ರಿಕೆಟ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಗಾಯಾಳು ವಾಷಿಂಗ್ಟನ್ ಸುಂದರ್ ಅವರ ಸ್ಥಾನಕ್ಕೆ ಶಾಬಾಜ್ ಅವರನ್ನು ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಐಪಿಎಲ್‌–2020ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ 27 ವರ್ಷದ ಶಾಬಾಜ್, ತಮ್ಮ ಆಲ್‌ರೌಂಡ್‌ ಆಟದ ಮೂಲಕ ಗಮನ ಸೆಳೆದಿದ್ದರು. ಪಶ್ಚಿಮ ಬಂಗಾಳದ ಎಡಗೈ ಸ್ಪಿನ್ನರ್ ಶಾಬಾಜ್, 16 ಪಂದ್ಯಗಳಿಂದ 216 ರನ್ ಗಳಿಸಿದ್ದರು. ಅಲ್ಲದೆ, 4 ವಿಕೆಟ್ ಉರುಳಿಸಿದ್ದರು.

18 ಪ್ರಥಮ ದರ್ಜೆ ಪಂದ್ಯಗಳಲ್ಲಿ ಅವರ ಬ್ಯಾಟಿಂಗ್ ಸರಾಸರಿ ಶೇ.41.64ರಷ್ಟಿದ್ದು, ಬೌಲಿಂಗ್ ಸರಾಸರಿ ಶೇ.19.47ರಷ್ಟಿದೆ. ಜಿಂಬಾಬ್ವೆ ವಿರುದ್ಧದ 3 ಏಕದಿನ ಪಂದ್ಯಗಳ ಸರಣಿಗೆ ಆಯ್ಕೆ ಸಮಿತಿಯು ವಾಷಿಂಗ್ಟನ್ ಸುಂದರ್ ಅವರ ಸ್ಥಾನಕ್ಕೆ ಶಾಬಾಜ್ ಅಹ್ಮದ್ ಅವರನ್ನು ಆಯ್ಕೆ ಮಾಡಿದೆ ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.

ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್ ಪಂದ್ಯದ ವೇಳೆ ಭುಜದ ಗಾಯಕ್ಕೆ ತುತ್ತಾಗಿರುವ ವಾಷಿಂಗ್ಟನ್ ಸುಂದರ್ ಅವರು ಜಿಂಬಾಬ್ವೆ ಸರಣಿಯಿಂದ ಹೊರಗುಳಿದಿದ್ದಾರೆ.

ಹಿಂದಿನ ಲೇಖನದಲಿತ ಬಾಲಕನ ಹತ್ಯೆ ಖಂಡಿಸಿ ಪ್ರತಿಭಟನೆ
ಮುಂದಿನ ಲೇಖನಮಾರಾಟ ಮಹಾಮಂಡಳದಿಂದ ಸಹಕಾರ ಮಹಾಮಂಡಳಕ್ಕೆ 2 ಕೋಟಿ ರೂ. ಹಸ್ತಾಂತರ