ಅಶ್ವಗಂಧವನ್ನು ಇಂಡಿಯನ್ ಜೀನ್ ಸೆಂಗ್ ಎಂದು ಕರೆಯಲಾಗುತ್ತದೆ. ಆಯುರ್ವೇದದಲ್ಲಿ ಪ್ರಮುಖ ಔಷಧಿಯಾಗಿರುವ ಅಶ್ವಗಂಧ ಒಂಬತ್ತು ಗ್ರಹಗಳಲ್ಲಿ ಒಂದಾದ ಕೇತುವಿನ ಜೊತೆ ಸಹಕಾರಿಯಾಗಿದೆ ಅಶ್ವಗಂಧದ ಕುರಿತು ತಲೆಗಿನಲ್ಲಿ ಒಂದೇ ಗಾದೆ ಮಾತಿದೆ : “ಪೇರುಲೇನಿ ವ್ಯಾಧಿಕಿ ಪೆನ್ನೇರುಗುಡ್ಡ” ಅಂದರೆ “ಹೆಸರಿಲ್ಲದ ಕಾಯಿಲೆಗೆ ಅಶ್ವಗಂಧ ಮದ್ದು” ಎಂದರ್ಥ ಇಂತಹ ಭಯಾನಕ ಕಾಯಿಲೆಗೂ ಇದು ಔಷಧೀಯಾಗುತ್ತದೆಂಬುದಕ್ಕೆ ಕನ್ನಡದಲ್ಲಿ ಹಿರೇಮದ್ದಿನ ಗಿಡ ಎಂಬ ಹೆಸರೂ ಇದೆ. ಅಶ್ವಗಂಧದ ತಾಜಾ ಬೇರು ಕುದುರೆಯ ಮೂತ್ರದ ವಾಸನೆಯಂತೆ ಇರುತ್ತದ್ದಾದದರಿಂದ ಅಶ್ವಗಂಧ ಎಂಬ ಹೆಸರು ಬಂದಿದೆ.
ಸಸ್ಯವರ್ಣನೆ :
ವೈಜ್ಞಾನಿಕ ಹೆಸರು ಇದು ಸೋಲನೇಸೀಯೆ ಕುಟುಂಬಕ್ಕೆ ಸೇರಿದ ಸಸ್ಯ. ಇದು ನೆಟ್ಟಗೆ ಬೆಳೆಯುವ ನಿತ್ಯಹರಿದ್ವರ್ಣ ಸಸ್ಯವಿದು ಪೂರ್ಣ ಬೆಳೆದಾಗ ಸುಮಾರು 30 ರಿಂದ 150 ಸೆಂ. ಮೀ. ಎತ್ತರವಿರುತ್ತದೆ. ಕವಲು ರಂಬೆಗಳು ವ್ಯಾಪಕವಾಗಿ ಹರಡಿದ್ದು, ಸಸ್ಯ ಭಾಗಗಳ ಮೇಲೆಲ್ಲಾ ಬೆಳ್ಳನೆಯ ಮೃದು ತುಪ್ಪಳದ ಹೊದಿಕೆಯಿರುತ್ತದೆ. ಹಣ್ಣುಗಳು ಹಸಿರು ಇಲ್ಲವೇ ಹಸಿರು ಮಿಶ್ರಿತ ಹಳದಿ ಬಣ್ಣದ್ದಾಗಿರುತ್ತವೆ.ಹಣ್ಣುಗಳನ್ನು ಹಸಿರು ಬೇರ್ರಿ ಎಂದು ಕರೆಯುತ್ತಾರೆ.ಅವುಗಳು ಬಲಿತು ಪಕ್ಟಗೊಂಡಾಗ ಕಿತ್ತಲೆ ಕೆಂಪು ಬಣ್ಣಕ್ಕೆ ತಿರುಗುತ್ತವೆ. ಒಣಬೇರುಗಳು ವಾಣಿಜ್ಯವಾಗಿ ಪ್ರಮುಖವಾದ ಭಾಗ.ಇದು ದಟ್ಟ ಕಂದು ಬಣ್ಣವಿದ್ದು, ಒಳಭಾಗ ಕೆನೆ ಬಣ್ಣ ಹೊಂದಿರುತ್ತದೆ.
ಉಗಮ ಮತ್ತು ಹಂಚಿಕೆ :
ಭಾರತದಲ್ಲಿ ಅಶ್ವಗಂಧದ ಬೇಸಾಯವು ಮಧ್ಯಪ್ರದೇಶದ ಮಾಂರ್ಡ್ಸ ಜಿಲ್ಲೆಯ ಮಾನಸ,ನಿಮುಚ್ ಜಾವದ್ ತಾಲೂಕಿನಲ್ಲಿ, ರಾಜಸ್ಥಾನದ ಕೆಲವೊಂದು ಹಳ್ಳಿಗಳಲ್ಲಿ ಹಾಗೂ ಪಂಜಾಬ್, ಮಧ್ಯ ಭಾರತ ಮತ್ತು ದಕ್ಷಿಣ ಭಾರತಗಳ ಒಣ ಪ್ರದೇಶಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ.ಕರ್ನಾಟಕದಲ್ಲಿ ರಾಯಚೂರು ಜಿಲ್ಲೆಯೊಂದರಲ್ಲೇ 400 ಎಕರೆಗಳಷ್ಟು ಪ್ರದೇಶದಲ್ಲಿ ಬೆಳೆಯಾಗುತ್ತಿದೆ ಹಾಗು ಮೈಸೂರು ಜಿಲ್ಲೆಯಲ್ಲಿ ಇದನ್ನು ಸ್ವಲ್ಪ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಅಶ್ವಗಂಧ ಬೇಸಾಯ ಹೆಚ್ಚು ಜನಪ್ರಿಯವಾಗುತ್ತಿದೆ. ಇದಕ್ಕೆ ಕಾರಣ ಔಷಧಿ ಉದ್ದಿಮೆಗಳಲ್ಲಿ ಅಶ್ವಗಂಧದ ಬೇರುಗಳ ಬಳಕೆ ದಿನದಿಂದ ದಿನಕ್ಕೆ ಏರುತ್ತಿದೆ. 2500-3500 ಎಕರೆಗಳಷ್ಟು ಪ್ರದೇಶದಲ್ಲಿ ಕರ್ನಾಟಕದಲ್ಲಿ ಅಶ್ವಗಂಧ ಬೇಸಾಯ ಇತ್ತೀಚಿಗಿನ ವರ್ಷಗಳಲ್ಲಿ ಕಾಣಬಹುದಾಗಿದೆ.
ತಳಿಗಳು :
ಜವಹರ್ ಅಸ್ ಗಂಧ 20 ತಳಿಯು ಅಧಿಕ ಬೇರಿನ ಇಡುವರಿಯನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಇದರ ತಳಿಗಳೆಂದರೆ ಪೋಷಿತ ಮತ್ತು ರಕ್ಷಿತ.
ಮಣ್ಣು:
ಈ ಬೆಳೆಗೆ ಸುಲಭವಾಗಿ ನೀರು ಬಸಿದು ಹೋಗುವ ಫಲವತ್ತಾದ ಮರಳು ಮಿಶ್ರಿತ ಗೋಡು ಅಥವಾ ಲಘು ಕೆಂಪು ಮಣ್ಣು ಬಹಳ ಸೂಕ್ತ. ಮಣ್ಣಿನ ಸರಸಾರ 7.5 ರಿಂದ 8.0 ರಷ್ಟಿದ್ದರೆ ಉತ್ತಮ.
ಹವಾಗುಣ :
ಈ ಬೆಳಗೆ ಉಷ್ಣ ಅಥವಾ ಸಮಶೀತೋಷಣ ಹವಾಗುಣ ಅಗತ್ಯ. ವರ್ಷಕ್ಕೆ ಸುಮಾರು 660 ರಿಂದ 750 ಮಿ.ಮಿ. ಮಳೆ ಬೀಳುವ ಪ್ರದೇಶಗಳಲ್ಲಿ ಈ ಬೆಳೆಯನ್ನು ಬೆಳೆಯಬಹುದು ಇದನ್ನು ಮರುಭೂಮಿಯ ಬೆಳೆಯೆಂದೇ ಹೇಳಬಹುದು.
ಬೇಸಾಯ ಕ್ರಮಗಳು:
ಸಸ್ಯಾಭಿಮೃದ್ಧಿ :ಅಶ್ವಗಂಧ ಬೀಜಗಳನ್ನು ನೇರವಾಗಿ ಬಿತ್ತುವುದರ ಮೂಲಕ ಅಥವಾ ಸಸಿ ಮಂಡಿಗಳಲ್ಲಿ ಸಸಿ ಬೆಳೆಸಿ ನಾಟಿ ಮಾಡಿ ಬೆಳೆಸಬಹುದು.
ಬಿತ್ತನೆ ನಾಟಿ ವಿಧಾನ :
ಬೀಜ ಬಿತ್ತಲು ಮಳೆಗಾಲದ ಪ್ರಾರಂಭ ಸೂಕ್ತವಾದ ಕಾಲ.ಬೀಜವನ್ನು ಹಾಗೆಯೇ ನೆರವಾಗಿ ಅಥವಾ ಒಟ್ಟು ಸ
ಪಾತಿಯಲ್ಲಿ ಬಿಟ್ಟಬಹುದು. 1ಮೀ., 1 ಮೀ. ಪ್ರದೇಶಕ್ಕೆ ಹತ್ತು ಗ್ರಾಂ ಬೀಜವಿದ್ದರೆ ಸಾಕು. ಬೀಜಗಳನ್ನು 60 cm ಅಂತರದ ಸಾಲುಗಳಲ್ಲಿ ಬಿತ್ತನೆ ಮಾಡಬೇಕು. ಬಿತ್ತನೆಯಾದ ಕೂಡಲೇ ತೆಳುವಾಗಿ ಪುಡಿ ಮಣ್ಣು ಹರಡಿ ಬೀಜವನ್ನು ಮುಚ್ಚಬೇಕು. ಮಣ್ಣು ಸಾಕಷ್ಟೂ ಹಸಿಯಾಗಿದ್ದರೆ ಬಿತ್ತನೆ ಮಾಡಿದ ಬೀಜಗಳು ಸುಮಾರು 6ರಿಂದ 7 ದಿನಗಳಲ್ಲಿ ಮೊಳೆಯುತ್ತವೆ. ಸಸಿ ಮಂಡಿಗಳಲ್ಲಿ ಬೆಳೆಸಿದ ಎಳೆಯ ಸಸಿಗಳು ಸಾಕಷ್ಟು ಎತ್ತರಕ್ಕೆ ಬೆಳೆದಾಗ ಅವುಗಳನ್ನು ಕಿತ್ತು ಪೂರ್ವಸಿದ್ದತೆಯಾದ ಮಡಿಗಳಲ್ಲಿ 60 ಸೆಂಟಿಮೀಟರ್ ಅಂತರದ ಸಾಲುಗಳಲ್ಲಿ ನಾಟಿ ಮಾಡಬೇಕು. ಸಾಲುಗಳ ನಡುವೆ ಸಹ 60 cm ಅಂತರವಿದ್ದರೆ ಸಾಕಾಗುತ್ತದೆ.ನೇರ ಬಿತ್ತನೆ ಮಾಡಿದ ಬೆಳೆಯಲ್ಲಿಯೂ ಸಹ ಬಿತ್ತನೆಯಾದ ಸುಮಾರಿ 25 ದಿನಗಳ ಮೇಲೆ ಸಾಲುಗಳಲ್ಲಿ ಒತ್ತಾಗಿರುವ ಸಸಿಗಳನ್ನು ಕಿತ್ತು ಈ ಅಂತರವನ್ನು ಕಾಪಾಡುವುದು ಮುಖ್ಯ.