ಮನೆ ಮನೆ ಮದ್ದು ಕರಿಬೇವು

ಕರಿಬೇವು

0

 ತೈಲ ತಯಾರಿಸುವ ವಿಧಾನ : 1 ಭಾಗ ಕೊಬ್ಬರಿ ಎಣ್ಣೆ ಇಲ್ಲವೆ ಎಳ್ಳೆಣ್ಣೆಗೆ ಅರ್ಧಭಾಗ ಕರಿಬೇವಿನ ರಸ ಬೆರೆಸಿ ಒಲೆಯ ಮೇಲಿಟ್ಟು ಕಾಯಿಸಬೇಕು ಸಣ್ಣಗಿನ ಉರಿಯ ಮೇಲೆ ನೀರಿನಂಶ ಹೋಗುವವರೆಗೂ ಕಾಯಿಸಬೇಕು.ಒಂದು ಸೌಟಿನಲ್ಲಿ ಎಣ್ಣೆ ಹಾಕಿ ಒಲೆಯ ಮೇಲಿಟ್ಟಾಗ ಚಟ್ ಚಟ್ ಬಾರದಿದ್ದಲ್ಲಿ ತೈಲ ತಯಾರಾಗಿದೆ. ಎಂದರ್ಥ. ನಂತರ ಇಳಿಸಿ,ಆರಿಸಿ, ಶೋಧಿಸಿ ಬಾಟಲಿಯಲ್ಲಿ ತುಂಬಿಟ್ಟಿಕೊಳ್ಳಬೇಕು.

Join Our Whatsapp Group

      ಕರಿಬೇವಿನ ಎಲೆ ಕಷಾಯವು ಗೈಡ್ಯಾರೆಯಾಗಿ ಕಸಾಯ ಮಹಾನ್ ಎಂಬ ಕಷಾಯವೆಂಬ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಲಭ್ಯ ಎಂದಂತೆ ಭೇದಿ ವಾಂತಿ ನಿಲ್ಲಿಸಬಲ್ಲ ತಾಕತ್ತು ಅದಕ್ಕೆ ಇದೆ.

 ಸಂಶೋಧನೆ ,:

       ಇಲಿಗಳಲ್ಲಿ ಕರಿಬೇವಿನ ಎಲೆಗಳ ಪ್ರಯೋಗದಿಂದ ರಕ್ತದಲ್ಲಿ ಸಕ್ಕರೆ, ಅಂಶ ಗಣನೀಯವಾಗಿ ಇಳಿಮುಖವಾಗಿದ್ದು ರುಜುವತಾಗಿದೆ.

.

 ಅಡುಗೆ:

       ಅಡುಗೆ ಉಪಯೋಗಿಸುವ ಕರಿಬೇವನ್ನು ಅನೇಕ ಜನರು ಊಟದ ಸಮಯದಲ್ಲಿ ತೆಗೆದಾಕುವುದು ಸಾಮಾನ್ಯ ಸಂಗತಿ. ಹೀಗೆ ಮಾಡದಂತೆ ತಡೆಯಲು ಕರಿಬೇವನ್ನು  ಸಣ್ಣಗೆ ಹೆಚ್ಚಿ ಅಡುಗೆಗೆ ಹಾಕಬೇಕು.

 ಕರಿಬೇವಿನ ಚಟ್ನಿ ಪುಡಿ  : 1 :   ಕೊಬ್ಬರಿ ತುರಿ ಒಂದು ಬಟ್ಟಲು, ಕರಿಬೇವು ಎರಡು ಬಟ್ಟಲು, ಒಣ ಒಣಮೆಣಸಿನಕಾಯಿ ಏಳು ಎಂಟು ಹುಣಸೆಹಣ್ಣು ಸ್ವಲ್ಪ,ಬೆಳ್ಳುಳ್ಳಿ ಐದು-ಆರು ಎಸಳು,ಕಾಳುಮೆಣಸು ಅರ್ಧ ಚಮಚೆ.

 ಉಪ್ಪನ್ನು ಬಿಟ್ಟು ಉಳಿದೆಲ್ಲವನ್ನು ಬೇರೆ ಬೇರೆ ಹುರಿದುಕೊಂಡು ಒಟ್ಟಿಗೆ ಸೇರಿಸಿ ಪುಡಿ ಮಾಡಿಟ್ಟುಕೊಳ್ಳಬೇಕು.ಈ ಪುಡಿ ವಿಶೇಷವಾಗಿ ಬಾಣಂತಿಯರು ಉಪಯೋಗಿಸಲು ಉತ್ತಮವಾದದು.

 ಚಟ್ನಿ ಪುಡಿ :  2 :    500 ಗ್ರಾಂ ಕರಿ ಬೇವು 500 ಗ್ರಾಂ ಹುರಿಗಡಲೆ, 10 -12 ಒಣಮೆಣಸಿನಕಾಯಿ ಚಿಟಿಕೆ ಹಿಂಗು.

         ನೆರಳಿನಲ್ಲಿ  ಒಣಗಿಸಿದ ಕರಿಬೇವನ್ನು ಸ್ವಲ್ಪ ಎಣ್ಣೆಯಲ್ಲಿ ಮೆಣಸಿನ ಕಾಯಿ ಮತ್ತು ಹಿಂಗಿನೊಂದಿಗೆ ಹುರಿದು ಹುರಿಗಡಲೆಯೊಂದಿಗೆ  ಸೇರಿಸಿ ಪುಡಿ ಮಾಡಿ ಇಟ್ಟುಕೊಂಡಲ್ಲಿ ಚಟ್ನಿಪುಡಿ ತಯಾರಾಗುತ್ತದೆ.

        ಇದೇ ರೀತಿ ಸಮಾಭಾಗ ಕಡಲೆಬೆಳೆ,ಉದ್ದಿನ ಬೆಳೆ, ಹೆಸರು ಬೇಳೆ,ಮತ್ತು ಕರಿಬೇವನ್ನು ತೆಗೆದುಕೊಂಡು ಅವಶ್ಯವಿದ್ದಷ್ಟು ಮೆಣಸಿನಕಾಯಿ, ಉಪ್ಪು ಸ್ವಲ್ಪ ಬೆಲ್ಲ ಮತ್ತು ಇವೆಲ್ಲದರ ಕಾಲು ಭಾಗ ಒಣಕೊಬ್ಬರಿ ತೆಗೆದುಕೊಳ್ಳಬೇಕು. ನಂತರ ಎಲ್ಲ ಬೆಳೆಗಳನ್ನು ಬೇರೆ ಬೇರೆಯಾಗಿ ಹುರಿದು ಮೆಣಸಿನ ಕಾಯಿ ಕರಿಬೇವು, ಕೊಬ್ಬರಿಯನ್ನು ಹುರಿದು ಮಿಶ್ರಪುಡಿ ಮಾಡಿ   ಆಹಾರದೊಂದಿಗೆ ಉಪಯೋಗಿಸಬಹುದು.

 ಕರಿಬೇವಿನ ಪಲ್ಯ  : 200 ಗ್ರಾಂ ಕರಿಬೇವಿನ ಸೊಪ್ಪು, 1 ಕಪ್ ಕಾಯಿತುರಿ 3- 4 ಒಣ ಮೆಣಸಿನಕಾಯಿ 3 ಚಮಚೆ ಎಣ್ಣೆ, ಒಂದು ಚಮಚ ಜೀರಿಗೆ,2 ಚಮಚ ಉದ್ದಿನಬೇಳೆ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಸ್ವಲ್ಪ ಹುಣಸೆ ಹಣ್ಣಿನ ರಸ

        ಕರಿಬೇವನ್ನು ಸಣ್ಣಗೆ ಹಚ್ಚಿಕೊಳ್ಳಬೇಕು ನಂತರ ಒಲೆಯ ಮೇಲೆ ಪಾತ್ರೆ ಇಟ್ಟು ಒಗ್ಗರಣೆಗೆ ಎಣ್ಣೆ ಹಾಕಿ ಒಣ ಮೆಣಸಿನಕಾಯಿ, ಜೀರಿಗೆ, ಉದ್ದಿನಬೇಳೆ, ಸಾಸುವೆ ಹಾಕಬೇಕು.ನಂತರ ಹೆಚ್ಚಿಟ್ಟ ಕರಿಬೇವಿನ ಸೊಪ್ಪು ಹಾಕಿ ಮೂರ್ನಾಲ್ಕು ನಿಮಿಷ ಹುರಿಯಬೇಕು ನಂತರ ತೆಂಗಿನ ಕಾಯಿ ತುರಿ ಬೆರೆಸಬೇಕು ಬೇಯುವಾಗ ಉಪ್ಪು, ಹುಳಿ, ಮೆಣಸಿನ ಹುಡಿ ಸೇರಿಸಬೇಕು.

 ಕರಿಬೇವಿನ ವಡೆ  : 100 ಗ್ರಾಂ ಕರಿಬೇವಿನ ಕರಿಬೇವಿನ ಸೊಪ್ಪು 1 ಕಪ್ ಸಣ್ಣ ರವೆ 1 ಕಪ್ ಕಡಲೆ ಹಿಟ್ಟು,25 ಗ್ರಾಂ ಜೀರಿಗೆ, 1 ಚಮಚೆ ಮೆಣಸಿನ ಹುಡಿ,ರುಚಿಗೆ ತಕ್ಕಷ್ಟು ಉಪ್ಪು ಎಣ್ಣೆ.

        ಕಡಲೆ ಹಿಟ್ಟು, ರವೆ,ಜೀರಿಗೆ, ಮೆಣಸಿನ ಹುಡಿ ಮತ್ತು ಉಪ್ಪು, ನೀರು ಸೇರಿಸಿ ಹದವಾಗಿ ಬೆರೆಸಿಕೊಳ್ಳಬೇಕು.ಅದಕ್ಕೆ ಸಣ್ಣಗೆ ಹಚ್ಚಿಟ್ಟುಕೊಂಡಿರುವ ಕರಿಬೇವಿನ ಸೊಪ್ಪನ್ನು ಬೆರೆಸಿ ತಟ್ಟಿ ವಡೆಯನ್ನು ಎಣ್ಣೆಯಲ್ಲಿ ಹಾಕಿ ಕರೆದುಕೊಳ್ಳಬೇಕು.

 ಕರಿಬೇವಿನ ಚಿತ್ರನ್ನ   : ಅಕ್ಕಿ 2 ಕಪ್ಪು ಕರಿಬೇವು,20 ಎಲೆ,ಮೆಣಸು ಒಂದು ಚಮಚೆ ಜೀರಿಗೆ ಒಂದು ಚಮಚೆ, ಒಣಕೊಬ್ಬರಿ ತುರಿ ಒಂದು ಹಿಡಿ, ತುಪ್ಪ ಐದು ಚಮಚೆ ಉಪ್ಪು ರುಚಿಗೆ ತಕ್ಕಷ್ಟು.

      ಉದುರಾಗಿ ಅನ್ನ  ತಯಾರಿಸಿಟ್ಟುಕೊಳ್ಳಬೇಕು.ಕರಿಬೇವನ್ನು ತೊಳೆದು ಸ್ವಚ್ಛಗೊಳಿಸಿಕೊಳ್ಳಬೇಕು. ಜೀರಿಗೆ, ಮೆಣಸನ್ನು ಹುರಿದು ತರಿತರಿಯಾಗಿ ಪುಡಿ ಮಾಡಿಟ್ಟುಕೊಳ್ಳಬೇಕು. ಕರಿಬೇವಿನ ಎಲೆಗಳನ್ನು ಬಾಣಲೆಯಲ್ಲಿ ಹಾಕಿ ಬಾಡಿಸಬೇಕು ಕೈಯಿಂದ ಪುಡಿ ಮಾಡಿಕೊಳ್ಳಬೇಕು. ತುಪ್ಪದ ಒಗ್ಗರಣೆ ಹಾಕಿ ಅದಕ್ಕೆ ಮೆಣಸಿನ ತರಿ ಜೀರಿಗೆ ಕರಿಬೇವಿನ ಪುಡಿ ಹಾಕಿ ಸೌಟಿನಿಂದ ಕೈಯಾಡಿಸಬೇಕು. ನಂತರ ಇದಕ್ಕೆ ಅನ್ನ ಹಾಕಿ ಕೊಬ್ಬರಿ ತುರಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಹದವಾಗಿ ಕಲಸಿ ಮುಚ್ಚಿಡಬೇಕು ಜ್ವರ ಬಂದು ಹೋದ ನಂತರ ಮತ್ತು ಅಜೀರ್ಣದಿಂದ ಬಳಲುವವರಿಗೆ ಸ್ವಾದಿಷ್ಟ ಆಹಾರ.