ಮನೆ ಅಪರಾಧ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಕುಣಿಗಲ್ ಪೊಲೀಸ್ ಠಾಣೆಯ ಎಎಸ್ಐ ಸಾವು

ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಕುಣಿಗಲ್ ಪೊಲೀಸ್ ಠಾಣೆಯ ಎಎಸ್ಐ ಸಾವು

0

ಕುಣಿಗಲ್: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಕುಣಿಗಲ್ ಪೊಲೀಸ್ ಠಾಣೆಯ ಎಎಸ್ಐ ಚಿಕಿತ್ಸೆ ಫಲಕಾರಿಯಾಗದೇ ಮೇ. 16ರ ಗುರುವಾರ ಮೃತಪಟ್ಟಿದ್ದಾರೆ.

Join Our Whatsapp Group

ಕುಣಿಗಲ್ ಪೊಲೀಸ್ ಠಾಣೆಯ ಎಎಸ್ಐ ವೆಂಕಟೇಶ್ (50) ಮೃತ ದುದೈವಿ.

ಘಟನೆ ವಿವರ: ವೆಂಕಟೇಶ್ ಕರ್ತವ್ಯ ನಿಮಿತ್ತ ಎಡಿಯೂರಿಗೆ ಹೋಗಿ ಬೈಕ್ ನಲ್ಲಿ  ಕುಣಿಗಲ್ ಗೆ ವಾಪಸ್ ಬರುತ್ತಿದ್ದ ಸಂದರ್ಭ ರಾ.ಹೆ. 75ರ ಬಿ.ಎಂ ರಸ್ತೆ  ಆಲಪ್ಪನಗುಡ್ಡೆ ಸಮೀಪ ಎಡಿಯೂರು ಕಡೆಯಿಂದ ಬಂದ ಅಪರಿಚಿತ ವಾಹನ ಬೈಕ್ ಹಿಂಬದಿಗೆ ಡಿಕ್ಕಿ ಹೊಡೆದಿದೆ.

ಈ ಪರಿಣಾಮ ಎಎಸ್ಐ ವೆಂಕಟೇಶ್ ತೀವ್ರ ಗಾಯಗೊಂಡಿದ್ದು, ಅವರನ್ನು  ನಾಗಮಂಗಲ ತಾಲೂಕಿನ ಅಂದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಮೃತಪಟ್ಟಿದ್ದಾರೆ.

ಹಿಂದಿನ ಲೇಖನಅಂಜಲಿ ಹತ್ಯೆ ಬೆದರಿಕೆ ‘ಮೂಢನಂಬಿಕೆ’ ಎಂದು ನಿರ್ಲಕ್ಷ್ಯ: ಇಬ್ಬರು ಪೊಲೀಸರು ಸಸ್ಪೆಂಡ್
ಮುಂದಿನ ಲೇಖನಖಾತೆ, ಪಹಣಿ ವರ್ಗಾವಣೆ ಮಾಡಲು ಲಂಚಕ್ಕೆ ಬೇಡಿಕೆ: ರಾಜಸ್ವ ನಿರೀಕ್ಷಕ ಲೋಕಾಯುಕ್ತ ಬಲೆಗೆ