ಮನೆ ಅಪರಾಧ ಕಲಬುರಗಿ: ಪತ್ನಿ ಹತ್ಯೆಗೈದು, ಮಕ್ಕಳೊಂದಿಗೆ ಪತಿ ಪರಾರಿ

ಕಲಬುರಗಿ: ಪತ್ನಿ ಹತ್ಯೆಗೈದು, ಮಕ್ಕಳೊಂದಿಗೆ ಪತಿ ಪರಾರಿ

0

ಕಲಬುರಗಿ: ಪತ್ನಿಯ ತಲೆ ಮೇಲೆ ಸಿಲಿಂಡರ್ ಎತ್ತಿ ಹಾಕಿ ಹತ್ಯೆಗೈದು ಮೂವರು ಮಕ್ಕಳೊಂದಿಗೆ ಪತಿ ಪರಾರಿಯಾಗಿರುವ ಘಟನೆ ಕಲಬುರುಗಿ  ನಗರದ ಓಜಾ ಲೇಔಟ್‌ನಲ್ಲಿ ನಡೆದಿದೆ.

ಆರತಿ(28) ಹತ್ಯೆಯಾದ ಪತ್ನಿ.  ತಾರನಾಥ್ ಎಂಬಾತನೇ ಕೃತ್ಯವೆಸಗಿರುವ ಪತಿ. ಇಬ್ಬರು 9 ವರ್ಷಗಳ ಹಿಂದೆ ಮದುವೆಯಾಗಿದ್ದರು. ಆರತಿ ಪದೇಪದೇ ತವರು ಮನೆಗೆ ಹೋಗುತ್ತಾರೆ ಎಂಬ ಕಾರಣಕ್ಕೆ ಆಗಾಗ ತಂಟೆಗಳು ನಡೆಯುತ್ತಿದ್ದವು. ಗುರುವಾರ ಕೂಡ ಸಂಕ್ರಾಂತಿ ಹಬ್ಬಕ್ಕೆ ತವರು ಮನೆಗೆ ಹೋಗುವ ವಿಚಾರವಾಗಿ ಪತಿ, ಪತ್ನಿ ಮಧ್ಯೆ ಜಗಳವಾಗಿತ್ತು. ಇದರಿಂದ ಕೋಪಗೊಂಡ ತಾರಾನಾಥ್ ರಾತ್ರಿ ಪತ್ನಿ ಮಲಗಿದ್ದಾಗ  ತಲೆ ಮೇಲೆ ಸಿಲಿಂಡರ್ ಎತ್ತಿ ಹಾಕಿದ್ದಾನೆ.

ತೀವ್ರ ರಕ್ತಸ್ರಾವದಿಂದ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೊಲೆ ಬಳಿಕ ಆರೋಪಿ ತಾರಾನಾಥ್ ಮೂವರು ಮಕ್ಕಳೊಂದಿಗೆ  ಪರಾರಿಯಾಗಿದ್ದು,  ಶೋಧ ನಡೆಯುತ್ತಿದೆ. ಈ ಕುರಿತು ಗುಲಬರ್ಗಾ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಪಡುವಾರಹಳ್ಳಿ-ವಿನಾಯಕನಗರದ ಸುತ್ತಲಿನ ಪ್ರದೇಶಗಳಲ್ಲಿ ಪಾದಯಾತ್ರೆ ನಡೆಸಿ ಸಾರ್ವಜನಿಕರ ಸಮಸ್ಯೆ ಆಲಿಸಿದ ಶಾಸಕ ಎಲ್. ನಾಗೇಂದ್ರ
ಮುಂದಿನ ಲೇಖನಜನವರಿ 31ರಿಂದ ಏಪ್ರಿಲ್ 8ರವರೆಗೆ ಸಂಸತ್ತಿನ ಬಜೆಟ್ ಅಧಿವೇಶನ