ಮನೆ ಅಪರಾಧ ಕಾರು – ಟ್ರ್ಯಾಕ್ಟ‌ರ್ ನಡುವೆ ಅಪಘಾತ: ಓರ್ವ ಸಾವು

ಕಾರು – ಟ್ರ್ಯಾಕ್ಟ‌ರ್ ನಡುವೆ ಅಪಘಾತ: ಓರ್ವ ಸಾವು

0

ಧಾರವಾಡ: ಕಾರು ಮತ್ತು ಟ್ರ್ಯಾಕ್ಟ‌ರ್ ನಡುವೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ಅಮ್ಮಿನಭಾವಿ ಗ್ರಾಮದ ಬಳಿಯ ಸವದತ್ತಿ ರಸ್ತೆಯಲ್ಲಿ ನಡೆದಿದೆ.

ಮೃತನ ಗುರುತು ಇನ್ನೂ ‌ಪತ್ತೆಯಾಗಿಲ್ಲ ಎಂದು ಧಾರವಾಡ ಗ್ರಾಮೀಣ ಪೊಲೀಸರು ತಿಳಿಸಿದ್ದಾರೆ.

ಸವದತ್ತಿ ಕಡೆಯಿಂದ ಧಾರವಾಡ ಕಡೆಗೆ ಬರುತ್ತಿದ್ದ ಕಾರು ಸವದತ್ತಿ ಕಡೆಗೆ ಹೋಗುವ ಟ್ರ್ಯಾಕ್ಟರ್‌ ಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಸವದತ್ತಿ ಯಲ್ಲಮ್ಮ ದೇವಿಯ ದರ್ಶನಕ್ಕೆ ಹೊರಟಿದ್ದ ಟ್ರ್ಯಾಕ್ಟರ್‌ ನಲ್ಲಿನ ಪ್ರಯಾಣಿಕರು ಗಾಯಗೊಂಡಿದ್ದು, ಮೂವರಿಗೆ ಗಂಭೀರ ಗಾಯವಾಗಿದೆ.

ಗಾಯಾಳುಗಳನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಥಳಕ್ಕೆ ಧಾರವಾಡ ಗ್ರಾಮೀಣ ಪೊಲೀಸರು ಭೇಟಿ ನೀಡಿದ್ದಾರೆ.

ಹಿಂದಿನ ಲೇಖನಕೋಲಾರ: ನಿಧಿ ಶೋಧಿಸುತ್ತಿದ್ದವರನ್ನು ಪ್ರಶ್ನಿಸಿದ್ದಕ್ಕೆ ಗ್ರಾಮಸ್ಥನ ಮೇಲೆ ಮಾರಣಾಂತಿಕ ಹಲ್ಲೆ
ಮುಂದಿನ ಲೇಖನಬೈಕ್ -ಮಿನಿ ಗೂಡ್ಸ್ ವಾಹನ ಅಪಘಾತ: ಬೈಕ್ ಸವಾರ ಸಾವು