ಮನೆ ಕ್ರೀಡೆ ದಕ್ಷಿಣ ಆಫ್ರಿಕಾ  ವಿರುದ್ಧ ಆಸ್ಟ್ರೇಲಿಯಾ ತಂಡಕ್ಕೆ 3ವಿಕೆಟ್ ಗಳ ಜಯ

ದಕ್ಷಿಣ ಆಫ್ರಿಕಾ  ವಿರುದ್ಧ ಆಸ್ಟ್ರೇಲಿಯಾ ತಂಡಕ್ಕೆ 3ವಿಕೆಟ್ ಗಳ ಜಯ

0

ದಕ್ಷಿಣ ಆಫ್ರಿಕಾ  ವಿರುದ್ಧ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 3ವಿಕೆಟ್ ಗಳ ಜಯ ಸಾಧಿಸಿದೆ.

ಟಾಸ್ ಸೋತು  ಬ್ಯಾಟಿಂಗ್ ಮಾಡಿದ  ಆಫ್ರಿಕಾವನ್ನು ದಕ್ಷಿಣ ಆಫ್ರಿಕಾದ ಆರಂಭ ಕೂಡ ಅಷ್ಟು ಹೇಳಿಕೊಳ್ಳುವಂತಿರಲಿಲ್ಲ. ಆದರೆ ನಾಯಕ ತೆಂಬಾ ಬಾವುಮಾ ಕೊನೆಯವರೆಗೂ ಏಕಾಂಗಿಯಾಗಿ ಹೋರಾಡಿ ಟೆಂಬಾ 114 ರನ್ ಗಳ ಗರಿಷ್ಠ ಶತಕ ಗಳಿಸಿದರೆ, ಮಾರ್ಕೊ ಯಾನ್ಸೆನ್ 32 ರನ್ ಕೊಡುಗೆ ನೀಡಿದರು. ಉಳಿದಂತೆ ತಂಡದ ಇತರರಿಗೆ ವಿಶೇಷವಾದುದನ್ನು ಮಾಡಲು ಸಾಧ್ಯವಾಗಲಿಲ್ಲ. ಆದ್ದರಿಂದ ಆಫ್ರಿಕಾ 49 ಓವರ್ ಗಳಲ್ಲಿ 222 ರನ್  ಕಲೆಹಾಕಿತು.

223 ರನ್ ಗಳ ಗುರಿ ಬೆನ್ನತ್ತಿದ್ದ. ಆಸ್ಟ್ರೇಲಿಯಾ 40.2 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು ಸವಾಲನ್ನು ಪೂರ್ಣಗೊಳಿಸಿತು. ಈ ಗೆಲುವಿನೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಮುನ್ನಡೆ ಸಾಧಿಸಿದೆ.

ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್) , ಟೆಂಬಾ ಬವುಮಾ (ನಾಯಕ) , ರಸ್ಸಿ ವ್ಯಾನ್ ಡೆರ್ ಡಸ್ಸೆನ್ , ಐಡೆನ್ ಮಾರ್ಕ್ರಾಮ್ , ಹೆನ್ರಿಕ್ ಕ್ಲಾಸೆನ್ , ಡೇವಿಡ್ ಮಿಲ್ಲರ್ , ಮಾರ್ಕೊ ಯಾನ್ಸೆನ್ , ಜೆರಾಲ್ಡ್ ಕೊಟ್ಝೆ , ಕೇಶವ್ ಮಹಾರಾಜ್ , ಕಗಿಸೊ ರಬಾಡ , ಲುಂಗಿ ಎನ್ಗಿಡಿ.

ಆಸ್ಟ್ರೇಲಿಯಾ: ಡೇವಿಡ್ ವಾರ್ನರ್ , ಟ್ರಾವಿಸ್ ಹೆಡ್ , ಮಿಚೆಲ್ ಮಾರ್ಷ್ (ನಾಯಕ) , ಕ್ಯಾಮರೋನ್ ಗ್ರೀನ್ , ಜೋಶ್ ಇಂಗ್ಲಿಸ್ , ಅಲೆಕ್ಸ್ ಕ್ಯಾರಿ ( ವಿಕೆಟ್ ಕೀಪರ್) , ಮಾರ್ಕಸ್ ಸ್ಟೊಯಿನಿಸ್ , ಶಾನ್ ಅಬಾಟ್ , ಆಷ್ಟನ್ ಅಗರ್ , ಜೋಶ್ ಹ್ಯಾಝಲ್ವುಡ್ , ಆ್ಯಡಂ ಝಂಪಾ.

ಹಿಂದಿನ ಲೇಖನಮಾಸಿಕ ₹ 150 ವೇತನದ ಹುದ್ದೆ: ಮಾನವ ಶ್ರಮದ ಶೋಷಣೆ, ಹಕ್ಕುಗಳ ಉಲ್ಲಂಘನೆ ಎಂದು ಉ.ಪ್ರ ಸರ್ಕಾರಕ್ಕೆ ಹೈಕೋರ್ಟ್‌ ಛೀಮಾರಿ
ಮುಂದಿನ ಲೇಖನಹಣಕಾಸು ಅವ್ಯವಹಾರ: ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಆದೇಶಿಸಿದ ರಾಜ್ಯ ಸರ್ಕಾರ