ಮನೆ ರಾಜ್ಯ ಬಂಗಾರಪೇಟೆ: ಹಳಿತಪ್ಪಿದ ಚೆನ್ನೈ-ಬೆಂಗಳೂರು ಡಬಲ್ ಡೆಕ್ಕರ್ ಎಕ್ಸ್‌’ಪ್ರೆಸ್ ರೈಲು

ಬಂಗಾರಪೇಟೆ: ಹಳಿತಪ್ಪಿದ ಚೆನ್ನೈ-ಬೆಂಗಳೂರು ಡಬಲ್ ಡೆಕ್ಕರ್ ಎಕ್ಸ್‌’ಪ್ರೆಸ್ ರೈಲು

0

ಬೆಂಗಳೂರು: ಚೆನ್ನೈನಿಂದ ಬೆಂಗಳೂರಿಗೆ ಬರುತ್ತಿದ್ದ ಚೆನ್ನೈ- ಬೆಂಗಳೂರು ಎಸಿ ಡಬಲ್ ಡೆಕ್ಕರ್ ಎಕ್ಸ್‌’ಪ್ರೆಸ್ ರೈಲು ಸೋಮವಾರ ಬಂಗಾರಪೇಟೆಯಿಂದ 20 ಕಿಮೀ ದೂರದಲ್ಲಿರುವ ಬಿಸನಟ್ಟಂ ನಿಲ್ದಾಣದ ಬಳಿ ಹಳಿತಪ್ಪಿದೆ.

Join Our Whatsapp Group

ಇಂದು ಬೆಳಗ್ಗೆ 11:30 ರ ಸುಮಾರಿಗೆ ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ – ಕೆಎಸ್‌ಆರ್ ಬೆಂಗಳೂರು ಡಬಲ್ ಡೆಕ್ಕರ್ ಎಕ್ಸ್‌’ಪ್ರೆಸ್(ರೈಲು ಸಂಖ್ಯೆ 22625)ರೈಲಿನ ಕೊನೆಯ ಕೋಚ್‌’ವೊಂದರ ಎರಡು ಚಕ್ರಗಳು ಹಳಿ ತಪ್ಪಿದ್ದವು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರೈಲಿನ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಹಳಿತಪ್ಪಿದ ಕೋಚ್ ಸಿ 1 ರ ಪ್ರಯಾಣಿಕರನ್ನು ಮತ್ತೊಂದು ಬೋಗಿಗಳಿಗೆ ಸ್ಥಳಾಂತರಿಸಿದ ನಂತರ ರೈಲು ಬಂಗಾರಪೇಟೆಗೆ ತೆರಳಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ವಿಭಾಗದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ರೈಲು ಸೇವೆಯನ್ನು ಪುನಃಸ್ಥಾಪಿಸುವ ಪ್ರಯತ್ನಗಳು ನಡೆಯುತ್ತಿವೆ. ಅಪಘಾತ ಪರಿಹಾರ ರೈಲು(ಎಆರ್‌’ಟಿ) ಕೂಡ ಸ್ಥಳಕ್ಕೆ ತಲುಪಿದೆ.

ಪ್ರಯಾಣಿಕರಿಗೆ/ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕೆಎಸ್‌’ಆರ್ ಬೆಂಗಳೂರು ಮತ್ತು ಬಂಗಾರಪೇಟೆ ನಿಲ್ದಾಣಗಳಲ್ಲಿ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ.

ಹಿಂದಿನ ಲೇಖನಕಾಂಗ್ರೆಸ್’​ನ ಹಿಂಸಾ ಗ್ಯಾರಂಟಿ ಸ್ಕೀಮ್ ಸಹಿಸುವುದಿಲ್ಲ: ನಳಿನ್ ಕುಮಾರ್ ಕಟೀಲ್
ಮುಂದಿನ ಲೇಖನಸೋಮಕ-ಜಂತು