ಮನೆ ರಾಜಕೀಯ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡದಿದ್ದರೆ ಮನೆಗೆ ಹೋಗುತ್ತೀರಿ: ಬೊಮ್ಮಾಯಿಗೆ ಯತ್ನಾಳ ಎಚ್ಚರಿಕೆ

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡದಿದ್ದರೆ ಮನೆಗೆ ಹೋಗುತ್ತೀರಿ: ಬೊಮ್ಮಾಯಿಗೆ ಯತ್ನಾಳ ಎಚ್ಚರಿಕೆ

0

ರಾಮದುರ್ಗ(ಬೆಳಗಾವಿ ಜಿಲ್ಲೆ)- ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡದಿದ್ದರೆ ಮನೆಗೆ ಹೋಗುತ್ತೀರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ (Basavaraj Bommai)  ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ (Basanagowda patil yatnal) ಅವರು ಎಚ್ಚರಿಕೆ ನೀಡಿದ್ದಾರೆ.

ಪಂಚಮಸಾಲಿಗಳಿಗೆ 2ಎ ಮೀಸಲಾತಿಗೆ ಆಗ್ರಹಿಸಿ ಗುರುವಾರ ನಡೆದ ಬೃಹತ್‌ ಪ್ರತಿಭಟನಾ ಸಮಾವೇಶ– ‘ಶರಣು ಶರಣಾರ್ಥಿ ಮತ್ತು ಬೈಕ್‌ ರ‍್ಯಾಲಿ’ ಉದ್ಘಾಟಿಸಿ ಅವರು ಮಾತನಾಡಿದರು.

 ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಹಿಂದುಳಿದ ವರ್ಗ 2ಎ ಮೀಸಲಾತಿ ನೀಡಲು ಒಪ್ಪಿದ್ದ ಬಿ.ಎಸ್. ಯಡಿಯೂರಪ್ಪ ಅವರು ಭರವಸೆ ಈಡೇರಿಸದೆ ಮನೆಗೆ ಹೋದರು. ಈಗ ನೀವು ಕೊಡದಿದ್ದರೆ ನೀವೂ ಮನೆಗೆ ಹೋಗುತ್ತೀರಿ ಎಚ್ಚರಿಕೆ ನೀಡಿದರು.

ನೀವು (ಬೊಮ್ಮಾಯಿ) ಪ್ರತಿನಿಧಿಸುವ ಕ್ಷೇತ್ರದಲ್ಲಿ ನಮ್ಮ ಜಾತಿಯವರದ್ದು 55ಸಾವಿರ ಮತಗಳಿವೆ. ಅದು ಗಮನದಲ್ಲಿರಲಿ. ಮೀಸಲಾತಿ ನೀಡುವುದಾಗಿ ಮುಖ್ಯಮಂತ್ರಿ ಒಪ್ಪಿದ್ದಾರೆ. 6 ತಿಂಗಳು ಸಮಯ ಕೇಳಿದ್ದಾರೆ. ಸಮಿತಿ ರಚಿಸಿದ್ದಾರೆ. ಯಡಿಯೂರಪ್ಪ ಹರಿಹರದವರ ಮಾತು ಕೇಳಿ ಹೋದರು. ನೀವು ಕಿವಿ ಕಚ್ಚುವವರ ಮಾತು ಕೇಳಿ ಹೋಗುವುದು ಬೇಡ ಎಂದು ಹೇಳಿದರು.

ರಾಜ್ಯಕ್ಕೆ ಕೇಂದ್ರ ಸಚಿವ ಅಮಿತ್‌ ಶಾ ಬಂದಾಗ ಬದಲಾವಣೆಗಳು ಆಗಬಹುದೆಂದು ಮುಖ್ಯಮಂತ್ರಿ ಟೆನ್ಷನ್ ಮಾಡಿಕೊಂಡಿದ್ದರು. ಆದರೆ, ಅದು ಸುಳ್ಳಾಗಿದೆ. ಆದರೆ, ಪಂಚಮಸಾಲಿಗಳಿಗೆ ಮೀಸಲಾತಿ ನೀಡುವುದು ತಪ್ಪಿದರೆ ಮುಖ್ಯಮಂತ್ರಿಗೆ ಮತ್ತೊಂದು ಭಯ ಖಂಡಿತ ಎದುರಾಗುತ್ತದೆ. ನಾವು ಅವರಿಗೆ ಟೆನ್ಷನ್ ಕೊಡುತ್ತಲೇ ಇರುತ್ತೇವೆ ಎಂದು ಹೇಳಿದರು.

ಹಿಂದಿನ ಲೇಖನಬಿಎಸ್ವೈ, ಸಿದ್ದು, ಹೆಚ್ಡಿಕೆ, ಡಿಕೆಶಿ ನಿತ್ಯ ಮಾತನಾಡುತ್ತಾರೆ: ಬಸನಗೌಡ ಪಾಟೀಲ ಯತ್ನಾಳ
ಮುಂದಿನ ಲೇಖನಮೀಸಲಾತಿಗಾಗಿ ಮಾಡು ಇಲ್ಲವೆ ಮಡಿ ಹೋರಾಟ: ಬಸವಜಯ ಮೃತ್ಯುಂಜಯ ಸ್ವಾಮೀಜಿ