ಮನೆ ಅಪರಾಧ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ನಿವೇಶನ ಹಂಚಿಕೆ ಆರೋಪ: 6 ಮಂದಿ ಆರೋಪಿಗಳ ಬಂಧನ

ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ನಿವೇಶನ ಹಂಚಿಕೆ ಆರೋಪ: 6 ಮಂದಿ ಆರೋಪಿಗಳ ಬಂಧನ

0

ಬೆಂಗಳೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅಕ್ರಮವಾಗಿ ನಿವೇಶನಗಳ ಹಂಚಿಕೆ ಮಾಡಿದ ಆರೋಪದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನೌಕರರು ಸೇರಿದಂತೆ ಆರು ಮಂದಿಯನ್ನು ಶೇಷಾದ್ರಿಪುರಂ ಪೊಲೀಸರು ಬಂಧಿಸಿ, ಹೆಚ್ಚಿನ ವಿಚಾರಣೆಗೆ ಒಳಪಸಿದ್ದಾರೆ.

ಅಡಿಯಲ್ಲಿ  ಬಿಡಿಎ ವಿಚಕ್ಷಣ ದಳ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಬಿಡಿಎನಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿರುವ ಲೋಹಿತ್, ಕಂಪ್ಯೂಟರ್ ವಿಭಾಗದ ಡೇಟಾ ಆಪರೇಟರ್ ಸುನೀಲ್ ಹಾಗೂ ಮಧ್ಯವರ್ತಿಗಳಾದ ಪವನ್, ವಿಕ್ರಂ ಜೈನ್, ಮಂಜು ನಾಯಕ್, ರಾಮಚಂದ್ರ ಎಂಬುವರನ್ನು ಬಂಧಿಸಲಾಗಿದೆ.

Advertisement
Google search engine

ಆರೋಪಿಗಳು ಎಚ್‌ಬಿಆರ್ ಲೇಔಟ್, ವಿಶ್ವೇಶ್ವರಯ್ಯ ಲೇಔಟ್, ಕೆಂಪೇಗೌಡ ಲೇಔಟ್ ಸೇರಿ ನಗರದ ಪ್ರತಿಷ್ಠಿತ ಲೇಔಟ್‌ನಲ್ಲಿರುವ ನಿವೇಶನಗಳನ್ನು ಅಕ್ರಮವಾಗಿ ಕಬಳಿಸುತ್ತಿದ್ದರು. ಬಳಿಕ ಇ-ಹರಾಜು ಮೂಲಕ ಬೇರೆಯವರಿಗೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಕಳೆದ ವರ್ಷ ಬಿಡಿಎ ಮೇಲೆ ಎಸಿಬಿ ಬೃಹತ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ 40 ಮಂದಿ ಎಫ್​ಐಆರ್ ದಾಖಲು ಮಾಡಲು ಅನುಮತಿ ಕೇಳಿದ್ದ ಎಸಿಬಿಗೆ, ರಾಜ್ಯ ಸರ್ಕಾರ 25 ಅಧಿಕಾರಿಗಳ ಮೇಲೆ ಎಫ್ಐಆರ್ ದಾಖಲು ಮಾಡಲು ಅನುಮತಿ ನೀಡಿದ್ದು ಈಗ 15ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದೆ‌. ಈ ಪ್ರಕರಣದಲ್ಲಿ ಮಧ್ಯವರ್ತಿಗಳ ಜತೆ ಅಧಿಕಾರಿಗಳು ಶಾಮೀಲಾಗಿ ವಂಚಿಸಿದ್ದಾರೆ ಎಂಬುದು ಗೊತ್ತಾಗಿದ್ದು, ತನಿಖೆ ಮುಂದುವರೆದಿದೆ.

ಹಿಂದಿನ ಲೇಖನನಟಿ ಮಾಳವಿಕಾ ಅವಿನಾಶ್ ಜನ್ಮದಿನ: ಅಭಿಮಾನಿಗಳಿಂದ ಶುಭಾಶಯ
ಮುಂದಿನ ಲೇಖನವೇಗವಾಗಿ ಹರಡುತ್ತಿರುವ ಒಮೈಕ್ರಾನ್ ಹೊಸ ರೂಪಾಂತರ BA.2: ವಿಜ್ಞಾನಿಗಳ ಎಚ್ಚರಿಕೆ