ಮನೆ ಅಪರಾಧ ಡಿಬಾರ್ ಆಗಿದ್ದಕ್ಕೆ ನೊಂದು ವಿದ್ಯಾರ್ಥಿನಿ ಆತ್ಮಹತ್ಯೆ

ಡಿಬಾರ್ ಆಗಿದ್ದಕ್ಕೆ ನೊಂದು ವಿದ್ಯಾರ್ಥಿನಿ ಆತ್ಮಹತ್ಯೆ

0

ಬೆಂಗಳೂರು: ಡಿಬಾರ್ ಆಗಿದ್ದಕ್ಕೆ ಬೆಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

21 ವರ್ಷದ ಭವ್ಯ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಮೃತ ಭವ್ಯ ಕೋರಮಂಗಲದ ಖಾಸಗಿ ಕಾಲೇಜಿನಲ್ಲಿ ಮೊದಲ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದಳು. ದೊಮ್ಮಲೂರು ಬ್ರಿಡ್ಜ್ ಬಳಿಯ ಮಹಿಳಾ ಪಿಜಿಯಲ್ಲಿ ವಾಸವಾಗಿದ್ದಳು. ಶುಕ್ರವಾರ ಪಿಜಿಯ 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಪರೀಕ್ಷೆ ವೇಳೆ ಭವ್ಯ ನಕಲು ಮಾಡಿ ಸಿಲುಕಿದ್ದರಿಂದ ಡಿಬಾರ್ ಮಾಡಲಾಗಿತ್ತು ಎಂಬ ಮಾತುಗಳು ಕೇಳಿ ಬಂದಿವೆ. ಇದರಿಂದ ನೊಂದಿದ್ದ ಭವ್ಯ ಸೋದರಿ ದಿವ್ಯಾಗೆ ಕರೆ ಮಾಡಿ ನೋವು ಹಂಚಿಕೊಂಡಿದ್ದಳು. ಡಿಬಾರ್ ಮಾಡಿದ್ದಾರೆ, ನಾನು ಬದುಕೋದಿಲ್ಲ ಎಂದು ಹೇಳಿದ್ದಳಂತೆ. ಭವ್ಯಾಳ ಮಾತು ಕೇಳಿದ ಸೋದರಿ ದಿವ್ಯಾ ತಂದೆಗೆ ವಿಷಯ ತಿಳಿಸಿದ್ದಳು. ಆದ್ರೆ ಅಷ್ಟರಲ್ಲಿ ಭವ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆ  ಸಂಬಂಧ ಜೀವನ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭವ್ಯ ಕಳುಹಿಸಿದ ವಾಟ್ಸಪ್ ಸಂದೇಶದ ವಿವರ:
ಐ ಲವ್ ಯು ದಿವ್ಯಾ, ನಾನು ನಿನ್ನ ಸೋದರಿಯಾಗಲು ಆರ್ಹಳಿಲ್ಲ. ಅಪ್ಪ ಮತ್ತು ಅಮ್ಮನಿಗೂ ಒಳ್ಳೆಯ ಮಗಳು ಆಗಲಿಲ್ಲ. ಆದ್ರೆ ನೀವುಗಳು ಎಲ್ಲರೂ ನನಗೆ ಒಳ್ಳೆಯ ಸೋದರಿ ಮತ್ತು ಉತ್ತಮ ಪೋಷಕರಾಗಿದ್ದೀರಿ. ಆದ್ರೆ ನಾನು ಯಾವತ್ತು ನಿಮಗೆ ಒಳ್ಳೆಯ  ಮಗಳು,ಸೋದರಿಯಾಗಲಿಲ್ಲ. ನನ್ನ ಜೀವನದಲ್ಲಿ ನೀನು ಯಾವಾಗಲು ಮಾದರಿ ಆಗಿದ್ದೀಯಾ. ಅಪ್ಪ-ಅಮ್ಮನಿಗೆ ನಾನು ಕ್ಷಮೆ ಕೇಳುತ್ತೇನೆ.
ನನಗೆ ಕೋವಿಡ್-19 ಸೋಂಕು ತಗುಲಿದಾಗ ಚಿಕಿತ್ಸೆ ನೀಡಿದ ಅಪ್ಪ ನನಗೆ ಮರುಜನ್ಮ ಕೊಟ್ಟರು. ಆದ್ರೆ ಅವರಿಗೆ ಮಗಳಾಗಲು ನಾನು ಯೋಗ್ಯ ಅಪ್ಪ. ಸಾರಿ ಅಪ್ಪ. ನನ್ನ ಉಳಿಸಲು ಪ್ರಯತ್ನಿಸಬೇಡಿ ಎಂದು ಭವ್ಯ ಸೋದರಿಗೆ ಕೊನೆಯ ಮೆಸೇಜ್ ಕಳುಹಿಸಿದ್ದಾಳೆ.

ಹಿಂದಿನ ಲೇಖನ5921 ಹೊಸ ಕೊರೊನಾ ಪ್ರಕರಣ ಪತ್ತೆ
ಮುಂದಿನ ಲೇಖನನವೀನ್ ಮೃತದೇಹ ಪಡೆಯಲು ಸರ್ವ ಪ್ರಯತ್ನ: ಸಿಎಂ ಬೊಮ್ಮಾಯಿ