ಮನೆ ಅಪರಾಧ ಕಾಬೂಲ್‌ ಮಸೀದಿಯಲ್ಲಿ ಬಾಂಬ್‌ ಸ್ಫೋಟ, 10 ಮಂದಿ ಸಾವು

ಕಾಬೂಲ್‌ ಮಸೀದಿಯಲ್ಲಿ ಬಾಂಬ್‌ ಸ್ಫೋಟ, 10 ಮಂದಿ ಸಾವು

0
ಸಾಂದರ್ಭಿಕ ಚಿತ್ರ

ಕಾಬೂಲ್‌(Kabul): ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನ ಸುನ್ನಿ ಮಸೀದಿಯೊಂದರಲ್ಲಿ ಪ್ರಬಲ ಬಾಂಬ್ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದು, 20 ಜನ ಗಾಯಗೊಂಡಿದ್ದಾರೆ.

ಕಾಬೂಲ್ ನ ಆಂತರಿಕ ಸಚಿವಾಲಯದ ಉಪ ವಕ್ತಾರ ಬೆಸ್ಮುಲ್ಲಾ ಹಬೀಬ್ ಘಟನೆ ಕುರಿತು ಮಾಹಿತಿ ನೀಡಿದ್ದು, ಪಶ್ಚಿಮ ಕಾಬೂಲ್‌ನ ಖಲೀಫಾ ಸಾಹಿಬ್ ಮಸೀದಿಯಲ್ಲಿ ಶುಕ್ರವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದೆ ಎಂದು ಹೇಳಿದ್ದಾರೆ.

ಮುಸ್ಲಿಮರ ಪವಿತ್ರ ತಿಂಗಳ ರಂಜಾನ್ ನ ಕೊನೆಯ ಶುಕ್ರವಾರದಂದು ಪ್ರಾರ್ಥನೆ ಸಲ್ಲಿಸಲು ಖಲೀಫಾ ಸಿಹಿಬ್ ಮಸೀದಿಯಲ್ಲಿ ಹೆಚ್ಚು ಜನ ಸೇರಿದ್ದಾಗ ಈ ಸ್ಫೋಟ ಸಂಭವಿಸಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ಸ್ಫೋಟದ ಹೊಣೆಯನ್ನು ಇನ್ನೂ ಯಾವುದೇ ಉಗ್ರ ಸಂಘಟನೆ ಹೊತ್ತುಕೊಂಡಿಲ್ಲ.

ಹಿಂದಿನ ಲೇಖನಪಿಎಸ್​ಐ ನೇಮಕಾತಿ ಅಕ್ರಮ: ತಪ್ಪು ಮಾಡಿದವರಿಗೆ ಶಿಕ್ಷಯಾಗಲಿ ಎಂದ ಹೆಚ್ ಡಿಕೆ
ಮುಂದಿನ ಲೇಖನಎಂಟು ತಿಂಗಳ ಮಗುವನ್ನು ಹತ್ಯೆಗೈದ ಮಾವ