ಮನೆ ಜ್ಯೋತಿಷ್ಯ ಮೆದುಳು

ಮೆದುಳು

0

ಇದು ಮಿದುಳಿನ ಕೆಳಗಿನ ಭಾಗದಲ್ಲಿ ಅಡಕವಾಗಿದೆ. ಇದು ದೇಹದ ಒಳ ಅವಯವ ಕ್ರಿಯೆಯನ್ನು ನಿಯಂತ್ರಿಸುತ್ತದೆ. ಉಸಿರಾಟ ಕ್ರಿಯೆ ಹೃದಯಬಡಿತ, ಗ್ರಂಥಿಗಳು ರಸಗಳನ್ನು ದ್ರವಿಸುವುದು, ಜಠರದ ಪಚನಕ್ರಿಯೆ ಇತರ ಅನೇಕ ಸ್ವಯಂಚಾಲಿತ ಕ್ರಿಯೆಯನ್ನು ನಿಯಂತ್ರಿಸುವುದು. ಅಂದರೆ ನಮ್ಮಿಂದ ಯಾವ ಸಂದೇಶವನ್ನು ಪಡೆಯದೆ ಸ್ವತಂತ್ರವಾಗಿ ತಮ್ಮ ಕ್ರಿಯೆಯಲ್ಲಿ ತೊಡಗಿಕೊಂಡಿರುತ್ತದೆ. ಇದು ಆಘಾತವಾದರೆ ನಮ್ಮ ಮರಣ ನಿಶ್ಚಯ.

Join Our Whatsapp Group

 ದೊಡ್ಡ ಮಿದುಳನ್ನು ಮೂರು ಭಾಗಗಳಾಗಿ ಮಾಡಿದ್ದಾರೆ.

 ಮುಂದಿನ ಮಿದುಳು.

       ಇದು ಹಣೆಯ ಹತ್ತಿರವಿರುವ ಭಾಗ ಇದರಲ್ಲಿ ಜ್ಞಾನೇಂದ್ರಿಯ ಕೋಶಗಳಾದ ಬುದ್ದಿಶಕ್ತಿ, ನೆನಪಿನಶಕ್ತಿ, ಪ್ರಜ್ಞಾಶಕ್ತಿ, ಸಂಕಲ್ಪಶಕ್ತಿ, ಮಾತು, ವಾಸನೆ, ರುಚಿ ನೋಡುವುದು, ಸ್ವಯಂ ಚಾಲಿತರಕ್ತಿ. (ನಮಗೆ ಅರಿವಿಲ್ಲದೆ ಇತರರ ಮಾತು, ವಾಸನೆ ಗ್ರಹಿಸುವುದು.)

 ಮಧ್ಯದ ಮೆದುಳು

ಇದು ಸಣ್ಣ ಕೊಳವೆಯಾಕಾರದ ಭಾಗ. ಇದರಲ್ಲಿ ಕಣ್ಣು ಮತ್ತು ಕಿವಿಗಳ ಪ್ರತಿಫಲವನ್ನು ಒಳಗೊಂಡಿದೆ.

 ಇಂದಿನ ಮೆದುಳು

ಮಿದುಳಿನ ಹಿಂದಿನಭಾಗ, ಕಣ್ಣಿನ ದೃಷ್ಟಿ ಸಣ್ಣ ಮಿದುಳಿನ ದೇಹ ಅಂಗಗಳಲ್ಲಿ ಸಾಮಾನ್ಯವಾಗಿ ದಂದೇಶ ರವಾಣಿಸುತ್ತಾ ಅದನ್ನು ನಿಯಂತ್ರಸುವುದು.

      ಇದರಲ್ಲಿ ಪಾನ್ಸ್ ಅಂಗವಿದು ಮಿದುಳಿನ ಮಧ್ಯಭಾಗದಲ್ಲಿ ಸಣ್ಣ ಮಿದುಳಿನ ಕೆಳಭಾಗದಲ್ಲಿ ಇದು ಒಂದು ಮಿದುಳಿನಿಂದ ಮತ್ತೊಂದು ಮಿದುಳಿಗೆ ಸಂದೇಶವನ್ನು ರವಾಣಿಸುತ್ತದೆ. ದೇಹದ ಎರಡು ಪಾರ್ಶ್ವಗಳ ಮಾಂಸಖಂಡಗಳ ಚಲನೆಯನ್ನು ಸರಿ ಸಮಾನವಾಗಿರುತ್ತದೆ ಇದು ಒಳ ಅಂಗಾಂಗಗಳ ಕ್ರಿಯೆಯನ್ನು ನಿಯಂತ್ರಿಸುತ್ತದೆ .

 ಬೆನ್ನೆಲುಬು

         ಈ ಬೆನ್ನೆಲುಬು ಅಥವಾ ಬೆನ್ನುಹುರಿಯು ಮಿದುಳಿನ ಮೊದಲದಿಂದ ಆರಂಭವಾಗಿ ಕೆಳಗೆ ಬೆಳೆಯುತ್ತಾ ಹೋಗಿದೆ. ಇದು ಗಟ್ಟಿಯಾಗಿ ಕೊಳವೆಯಾಕಾರದಲ್ಲಿ ದೇಹದ ಬೆನ್ನಿನ ಮಧ್ಯ ಭಾಗದಲ್ಲಿ ಆನೇಕ ನರವ್ಯೂಹದಿಂದ ಕೂಡಿದೆ. ಈ ಬೆನ್ನೆಲುಬು ದೇಹಕ್ಕೆ ಆಧಾರವಾಗಿ ನಿಂತಿದೆ. ದೇಹಕ್ಕೆ ಬೆನ್ನೆಲುಬು ಇಲ್ಲದಿದ್ದರೆ ದೇಹ ಚೆಂಡಿನಂತೆ ಉಂಡೆಯಾಗಿರುತ್ತಿತ್ತು.

         ಈ ಬೆನ್ನೆಲುಬು 31 ಜೊತೆ (ಜೊತೆ – ಎಂದರೆ ಒಂದು ಸಂದೇಶಗಳನ್ನು ಕಳಿಸುವುದು ಮತ್ತೊಂದು ಬರಮಾಡಿಕೊಳ್ಳುವುದು) ನರವ್ಯೂಹ ಹೊಂದಿ, ವಯಸ್ಕರಲ್ಲಿ ಸುಮಾರು 18 ಅಂಗುಲ (45 ಸಿ.ಎಂ) ಉದ್ದವಾಗಿ 12 ಎಲುಬಿನ ಜೋಡಣೆಯಿಂದ ಕೂಡಿದೆ. ಇದು ಮಿದುಳಿಗೂ ಮತ್ತು ದೇಹದ ಇತರ ಅಂಗಗಳಿಗೆ ತನ್ನ ನರವ್ಯೂಹದಿಂದ ಸಂದೇಶಗಳನ್ನು ಕಳಿಸುವ ಮತ್ತು ಸಂದೇಶ ಬರಮಾಡಿಕೊಳ್ಳುವ ಮಧ್ಯಮದ ಕೆಲಸ ನಿರ್ವಹಿಸುತ್ತದೆ.

         ಈ ಬೆನ್ನೆಲುಬಿನೊಳಗೆ ಬಿಳಿ ಮತ್ತು ಕಂದು ಬಣ್ಣದ ದ್ರವ್ಯವು ಮಿದುಳು ಮತ್ತು ಈ ಬೆನ್ನೆಲುಬಿನ ಮಧ್ಯ ಸಂಚರಿಸುತ್ತಿರುತ್ತದೆ. ಈ ಬೆನ್ನಲುಬಿನ ಮಧ್ಯಭಾಗದಲ್ಲಿ ಕಂದು ಬಣ್ಣದ ದ್ರವ್ಯದಲ್ಲಿ ಮೋಟರ್ ಎಂಬ ಜೀವಕೋಶಗಳು ತುಂಬಿರುತ್ತದೆ. ಬೆನ್ನೆಲುಬು ಹೊರವಲಯದಲ್ಲಿ ಬಿಳಿಬಣ್ಣದ ದ್ರವ್ಯದಲ್ಲಿ ನ್ಯೂರನ್ಸ್ ಎಂಬ ಜೀವಕೋಶಗಳು ತುಂಬಿರುತ್ತವೆ. ಈ ಬಿಳಿಬಣ್ಣದ ದ್ರವ್ಯದಲ್ಲಿನ ನ್ಯೂರನ್ಸ್‌ನಲ್ಲಿ ಆಕ್ಸಾನ್ ಎಂಬ ವಿದ್ಯುತ್ ತರಂಗಗಳು ಮಿದುಳಿನಿಂದ ಬಂದು ಹೋಗುತ್ತಿರುತ್ತದೆ ಈ ಬೆನ್ನೆಲುಬಿನ ಮಧ್ಯದಲ್ಲಿ ಒಂದು ಕೊಳವೆಯಿದೆ. ಇದು ಮಿದುಳಿನಿಂದಲೂ ಕೊಳವೆ ಆಕಾರದಲ್ಲಿ ಬಂದಿದೆ. ಇದರಲ್ಲಿ ಮಿದುಳುದ್ರವ್ಯ ತುಂಬಿರುತ್ತದೆ. ಈ ದ್ರವ್ಯವು ಈ ಬೆನ್ನೆಲುಬಿನ ಮಣಿಗಂಟು ಗಳ ಚಲನೆಯಲ್ಲಿ ಘರ್ಷಣೆಯಾಗದಂತೆ ಮೃದುತ್ವವನ್ನು ನೀಡುತ್ತದೆ. ಅಲ್ಲದೆ ಈ ಬೆನ್ನೆಲುಬಿನ ಸ್ನಾಯುಗಳಿಗೆ ಆಹಾರ, ಅನಿಲ, ಕಲ್ಮಶಗಳನ್ನು ಸಾಗಿಸುವ ಮಧ್ಯವರ್ತಿಯಾಗಿದೆ.

ಈ ಬೆನ್ನುಹುರಿಯು ಹೊರಗೆ ಮೂರು ಕವಚಗಳಿಂದ ಆವರಿಸಿದೆ. ಇದರ ಕಾರ್ಯ –

1. ಕತ್ತನ್ನು ಮುಂದೆ ಬಾಗಿಸುವುದು.

2. ಚರ್ಮ ಮತ್ತು ಮಾಂಸಖಂಡಗಳಿಂದ ಜ್ಞಾನದ ಅರಿವನ್ನು ಕೊಂಡು ಮಿದುಳಿಗೆ ತಲುಪಿಸುತ್ತದೆ.

3. ಮಿದುಳಿನಲ್ಲಿರುವ ಮೋಟರ್ ಕೋಶಗಳು ನೀಡುವ ಸಂದೇಶವನ್ನು ದೇಹದ ಅವಯವಗಳ ಮಾಂಸಖಂಡ ಮತ್ತು ಸ್ನಾಯುಗಳಿಗೆ ನೀಡುವುದು.

        ಈ ಬೆನ್ನುಹುರಿಯಲ್ಲಿ 31 ಜೊತೆ ನರವ್ಯೂಹವಿದೆ. ಇದರಲ್ಲಿ 8 ಜೊತೆ ಕತ್ತಿನ ಹತ್ತಿರ, 12 ಜೊತೆ ಎದೆಯ ಹತ್ತಿರ, 5 ಜೊತೆ ಹೊಟ್ಟೆ ಮತ್ತು ಸೊಂಟ, ತೊಡೆ, 6 ಜೊತೆ ಪಾದ ಕಾಲುಗಳಿಗೆ ಹೋಗುತ್ತದೆ.

ಒಂದು ಜೊತೆ ಎಂದರೆ – ಸೆನ್ಸರಿ ನ್ಯೂರನ್ಸ್ ದೇಹಕ್ಕೆ ಆಗುತ್ತಿರುವ ಪೆಟ್ಟು ಆಘಾತವನ್ನು.ಮಿದುಳಿಗೆ ತಿಳಿಸುತ್ತದೆ. ಮೋಟ‌ರ್ ನ್ಯೂರನ್ಸ್- ಮಿದುಳಿನಿಂದ ಬರುವ ರಕ್ಷಣೆ, ನಿರ್ವಹಣೆ, ಸಂದೇಶಗಳನ್ನು ದೇಹದ ಅಂಗಾಂಗಗಳಿಗೆ ನೀಡುತ್ತದೆ.

       ನರವ್ಯೂಹದಲ್ಲಿ ಸಂದೇಶ ರವಾನಿಸುವ ವೇಗ ಒಂದು ಸೆಕೆಂಡಿಗೆ 100 ಮೀಟರ್ ಆಗಿರುತ್ತದೆ.

 ಉತ್ತಮ ಮಿದುಳಿನ ಕಾರ್ಯಕ್ಕೆ ಐದು ವಸ್ತುಗಳು

 ಕಾಂಪ್ಲೆಕ್ಸ್ ಕಾರ್ಬೋಹೈಡ್ರೆಟ್ :

        ಮಿದುಳು ಚುರುಕಾಗಿ ಕೆಲಸ ಮಾಡುತ್ತಾ ಅದರ ಕೆಲಸದಲ್ಲಿ ಸರಿಯಾದ ವೇಗ ಇರಬೇಕಾದರೆ ಮೊದಲು ಅದಕ್ಕೆ ಶಕ್ತಿ ಕೊಡುವ ಗೂಕೋಸ್ ಸರಿಯಾಗಿ ದೊರೆಯಬೇಕು. ಅಂದರೆ ಗ್ಲೂಕೋಸ್ ಅದಕ್ಕೆ ಮೊದಲ ಇಂಧನವಾಗುತ್ತದೆ. ಆದರೆ ನಾವು ವಾಹನಕ್ಕೆ ಪೆಟ್ರೋಲ್ ಹಾಕಿದಾಗ ಅದು ಶುದ್ಧವಾಗಿ ಇರಬೇಕು. ಒಂದು ವೇಳೆ ಆದು ಕಲುಷಿತ ಕಲಬೆರಕೆಯಾಗಿದ್ದರೆ, ಅದು ವಾಹನ ಇಂಜಿನಿಗೆ ಹೇಗೆ ಪರಿಣಾಮ ಬೀರುತ್ತದೋ ಹಾಗೇ ಆ ಇಂಜಿನ್ ಗೆ ಶೇಕಡ 100 ಭಾಗ ಶುದ್ಧವಾದ ಪೆಟ್ರೋಲ್ ಸೇರದೆ ಕಲಬೆರಕೆ ಯಿಂದ ಅದರ ಪ್ರಮಾಣ ಪೆಟ್ರೋಲ್ ಕಡಿಮೆಯಾಗುತ್ತದೆ. ಅದೇ ರೀತಿಯಲ್ಲಿ ಕಲಬೆರಕೆಯಿಲ್ಲದೆ ಶುದ್ಧವಾದ ಗ್ಲೂಕೋಸ್ ತೆಗೆದುಕೊಳ್ಳಬೇಕು. ಈ ಗ್ಲೂಕೋಸ್ ನಾವು ತೆಗೆದುಕೊಳ್ಳುವ ಕಾರ್ಬೋ ಹೈಡ್ರೇಟ್ ಆಹಾರದಲ್ಲಿ ದೊರೆಯುತ್ತವೆ. ಆದರೆ ಬೇಗ ಗ್ರೂಕೋಸ್ ಆಗಿ ಪರಿವರ್ತನೆಯಾಗಿ, ಬೇಗ ವಿನಿಯೋಗವಾಗುತ್ತದೆ. ಆದ್ದರಿಂದ ನಾವು ಕಾಂಪ್ಲೆಕ್ಸ್ ಕಾರ್ಬೋಹೈಡ್ರೆಟ್ ಆಹಾರವನ್ನು ತೆಗೆದು ಕೊಂಡಾಗ ಅದರಲ್ಲಿರುವ ಗ್ಲೂಕೋಸ್ ನಿಧಾನವಾಗಿ ಪರಿವರ್ತನೆಯಾಗಿ ದೀರ್ಘಕಾಲದವರೆಗೂ ಮಿದುಳಿಗೆ ದೊರೆಯುವಂತೆ ಮಾಡುತ್ತದೆ. ಅದು ಸಿಪ್ಪೆತೆಗೆಯದ ಕಾಯಿ, ಹಣ್ಣುಗಳು, ಸಿಪ್ಪೆ ತೆಗೆಯದ ಗೋಧಿ, ಕುಟ್ಟಿರುವ ಅಕ್ಕಿ (ಪಾಲಿಶ್ ಮಾಡದ ಅಕ್ಕಿ) ಯಲ್ಲಿ ಹೆಚ್ಚಾಗಿರುತ್ತದೆ. ಅದೇ ರೀತಿ ಸಿಹಿಯಾದ ಮಿಠಾಯಿಂದ ಗ್ಲೂಕೋಸ್ ದೊರೆತರೂ ಸಹ ಮಿದುಳಿಗೆ ಬೇಕಾದಂತಹ ಆರೋಗ್ಯಕರವಾದ ಗ್ಲೂಕೋಸ್ ಇರುವುದಿಲ್ಲ. ಆದ್ದರಿಂದ ಇದನ್ನು ರುಚಿಗಾಗಿ ತೆಗೆದುಕೊಳ್ಳಬೇಕಷ್ಟೆ.