ಮನೆ ತಂತ್ರಜ್ಞಾನ ನೋಕಿಯಾದಿಂದ C32 ಸ್ಮಾರ್ಟ್​ ಫೋನ್ ಬಿಡುಗಡೆ: ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ

ನೋಕಿಯಾದಿಂದ C32 ಸ್ಮಾರ್ಟ್​ ಫೋನ್ ಬಿಡುಗಡೆ: ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ

0

ಪ್ರಸಿದ್ಧ ನೋಕಿಯಾ ಕಂಪನಿ ತನ್ನ C ಕ್ಯಾಟಗರಿಯಲ್ಲಿ ಹೊಸ ಮೊಬೈಲ್ ಅನ್ನು ಅನಾವರಣ ಮಾಡಿದೆ. ಸದ್ದಿಲ್ಲದೆ ನೋಕಿಯಾ ಸಿ32 (Nokia C32) ಎಂಬ ಹೊಸ ಸ್ಮಾರ್ಟ್‌ ಫೋನ್‌ ಅನ್ನು ಬಿಡುಗಡೆ ಮಾಡಿದೆ. ಇದೊಂದು ಬಜೆಟ್ ಬೆಲೆಯ ಫೋನಾಗಿದ್ದು ಫೀಚರ್​ ಗೆ ತಕ್ಕಂತೆ ದರ ನಿಗದಿ ಪಡಿಸಲಾಗಿದೆ.

Join Our Whatsapp Group

ಬೆಲೆ ಎಷ್ಟು?:

ನೋಕಿಯಾ C32 ಸ್ಮಾರ್ಟ್​ ಫೋನ್ ದೇಶದಲ್ಲಿ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಅನಾವರಣಗೊಂಡಿದೆ. ಇದರ 4 GB RAM + 64 GB ಆಯ್ಕೆಗೆ 8,999 ರೂ. ಇದೆ ಅಂತೆಯೆ 4 GB RAM + 128 GB ಸ್ಟೋರೇಜ್ ರೂಪಾಂತರಕ್ಕೆ 9,499 ರೂ. ನಿಗದಿ ಮಾಡಲಾಗಿದೆ. ಈ ಫೋನ್ ನೋಕಿಯಾ ಇಂಡಿಯಾದ ಅಧಿಕೃತ ವೆಬ್ ​ಸೈಟ್ ​ನಲ್ಲಿ ಖರೀದಿಗೆ ಲಭ್ಯವಿದೆ.

ಏನಿದೆ ಫೀಚರ್ಸ್:

ನೋಕಿಯಾ C32 ಸ್ಮಾರ್ಟ್‌ಫೋನ್‌ 1600 x 700 ಪಿಕ್ಸೆಲ್ ರೆಸಲ್ಯೂಶನ್‌ ಸಾಮರ್ಥ್ಯದ 6.55 ಇಂಚಿನ ಕರ್ವ್​ಡದ ಡಿಸ್‌ಪ್ಲೇಯನ್ನು ಹೊಂದಿದೆ. ಇದು 20:9 ರಚನೆಯ ಅನುಪಾತವನ್ನು ಪಡೆದುಕೊಂಡಿದ್ದು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP52 ರೇಟಿಂಗ್ ನೀಡಿರುವ ಸಾಧ್ಯತೆ ಇದೆ. ಆಕ್ಟಾ ಕೋರ್‌ SoC ಪ್ರೊಸೆಸರ್‌ ವೇಗವನ್ನು ಪಡೆದಿದೆ. ಆದರೆ, ಇದು ಯಾವುದು ಎಂಬುದು ಬಹಿರಂಗವಾಗಿಲ್ಲ. ಆಂಡ್ರಾಯ್ಡ್‌ 13 (Go ಆವೃತ್ತಿ) ನಲ್ಲಿ ಕಾರ್ಯನಿರ್ವಹಿಸುತ್ತಿದ್ದು 7GB ವರೆಗೆ RAM ಅನ್ನು ವಿಸ್ತರಿಸಿಬಹುದು. ಮೈಕ್ರೊ SD ಕಾರ್ಡ್‌ ಮೂಲಕ 256GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಬಹುದು ಎಂದು ಕಂಪನಿ ಹೇಳಿದೆ.

ಈ ಸ್ಮಾರ್ಟ್‌ ಫೋನ್ ​ನ ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ, ಡ್ಯುಯೆಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಹಿಂಬದಿಯಲ್ಲಿ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಕ್ಯಾಮೆರಾ ಅಳವಡಿಸಲಾಗಿದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಟೆಕ್ನಾಲಜಿಯನ್ನು ಹೊಂದಿದೆ. ಜೊತೆಗೆ 2 ಮೆಗಾಪಿಕ್ಸೆಲ್ ​ನ ಸೆಕೆಂಡರಿ ಸೆನ್ಸಾರ್ ಕ್ಯಾಮೆರಾ ನೀಡಲಾಗಿದೆ. ಮುಂಭಾಗ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಕ್ಯಾಮೆರಾ ಫೀಚರ್ಸ್‌ ಗಳಲ್ಲಿ ಪೋರ್ಟ್ರೇಟ್ ಮೋಡ್, ಟೈಮ್ ಲ್ಯಾಪ್ಸ್, ಬ್ಯೂಟಿಫಿಕೇಶನ್ ಸಪೋರ್ಟ್ ಮತ್ತು ಎಲ್‌ಇಡಿ ಫ್ಲ್ಯಾಷ್ ಸೇರಿದಂತೆ ಕೆಲ ವಿಶೇಷ ಫೀಚರ್ ​ಗಳಿವೆ.

5,000mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದ್ದು, ಇದಕ್ಕೆ ತಕ್ಕಂತೆ 10W ಚಾರ್ಜಿಂಗ್ ಬೆಂಬಲವನ್ನು ಒಳಗೊಂಡಿದೆ. ಇದು ಮೂರು ದಿನಗಳ ಬ್ಯಾಟರಿ ಲೈಫ್ ನೀಡುತ್ತದೆ ಎಂದು ಕಂಪನಿ ಹೇಳಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, ಬ್ಲೂಟೂತ್ 5.2, ಯುಎಸ್‌ಬಿ 2.0 ಪೋರ್ಟ್ ಮತ್ತು 3.5 ಎಂಎಂ ಆಡಿಯೋ ಜ್ಯಾಕ್ ಸೇರಿದಂತೆ ಇತ್ತೀಚಿನ ಆಯ್ಕೆ ನೀಡಲಾಗಿದೆ. ಸೈಡ್-ಮೌಂಟೆಡ್ ಫಿಂಗರ್​ ಪ್ರಿಂಟ್ ಸೆನ್ಸಾರ್ ಅಳವಡಿಸಲಾಗಿದೆ.

ಹಿಂದಿನ ಲೇಖನಹಾವು ಕಚ್ಚಿದೆ ಎಂದರೂ ತಲೆ ಕೆಡಿಸಿಕೊಳ್ಳದ ಹೆತ್ತವರು: ಬಾಲಕಿ ಸಾವು
ಮುಂದಿನ ಲೇಖನಕಿಶ್ತ್ವಾರ್ ನಲ್ಲಿ ಕ್ರೂಸರ್ ವಾಹನ ಅಪಘಾತ: 7 ಮಂದಿ ಸಾವು, ಓರ್ವ ಗಂಭೀರ ಗಾಯ