ಮನೆ ರಾಷ್ಟ್ರೀಯ ಕಿಶ್ತ್ವಾರ್ ನಲ್ಲಿ ಕ್ರೂಸರ್ ವಾಹನ ಅಪಘಾತ: 7 ಮಂದಿ ಸಾವು, ಓರ್ವ ಗಂಭೀರ ಗಾಯ

ಕಿಶ್ತ್ವಾರ್ ನಲ್ಲಿ ಕ್ರೂಸರ್ ವಾಹನ ಅಪಘಾತ: 7 ಮಂದಿ ಸಾವು, ಓರ್ವ ಗಂಭೀರ ಗಾಯ

0

ಕಿಶ್ತ್ವಾರ್ (ಜಮ್ಮು – ಕಾಶ್ಮೀರ): ಪಾಕಲ್ ದುಲ್ ಪ್ರಾಜೆಕ್ಟ್ ನ ಕ್ರೂಸರ್ ವಾಹನವು ಜಮ್ಮು-ಕಾಶ್ಮೀರದ ಕಿಶ್ತ್ವಾರ್ ನಲ್ಲಿ ಅಪಘಾತಕ್ಕೀಡಾಗಿ ಕನಿಷ್ಠ ಏಳು ಮಂದಿ ಸಾವನ್ನಪ್ಪಿರುವ ಘಟನೆ ದಂಗದೂರು ಅಣೆಕಟ್ಟು ಸಮೀಪ ಬುಧವಾರ ನಡೆದಿದೆ.

Join Our Whatsapp Group

ಅಧಿಕಾರಿಗಳ ಪ್ರಕಾರ ಘಟನೆಯಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ, ಓರ್ವ ಗಂಭೀರ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಕಿಶ್ತ್ವಾ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಕಿಶ್ತ್ವಾರ್ ಉಪ ಆಯುಕ್ತ ಡಾ.ದೇವಾಂಶ್ ಯಾದವ್ ತಿಳಿಸಿದ್ದಾರೆ.

ಕೇಂದ್ರ ವಿಜ್ಞಾನ ಹಾಗೂ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ರಸ್ತೆ ಅಪಘಾತದ ಬಗ್ಗೆ ಡಿಸಿ ಯಾದವ್ ಅವರೊಂದಿಗೆ ಮಾತನಾಡಿದರು.

ಹಿಂದಿನ ಲೇಖನನೋಕಿಯಾದಿಂದ C32 ಸ್ಮಾರ್ಟ್​ ಫೋನ್ ಬಿಡುಗಡೆ: ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ
ಮುಂದಿನ ಲೇಖನನೂತನ ಸಂಸತ್ ಭವನ ಉದ್ಘಾಟನೆ ಸಮಾರಂಭ: NCP, BRS, RJD ಸೇರಿ ಹಲವು ವಿಪಕ್ಷಗಳಿಂದ ಬಹಿಷ್ಕಾರ