ಮನೆ ಸುದ್ದಿ ಜಾಲ ಸಚಿವ ಸಂಪುಟದಿಂದ ಬನ್ನೇರುಘಟ್ಟದಲ್ಲಿ ₹144.4 ಕೋಟಿ ವೆಚ್ಚದ, ವಿಶ್ವದರ್ಜೆಯ ಅಕ್ವೇರಿಯಂಗೆ ನಿರ್ಧಾರ

ಸಚಿವ ಸಂಪುಟದಿಂದ ಬನ್ನೇರುಘಟ್ಟದಲ್ಲಿ ₹144.4 ಕೋಟಿ ವೆಚ್ಚದ, ವಿಶ್ವದರ್ಜೆಯ ಅಕ್ವೇರಿಯಂಗೆ ನಿರ್ಧಾರ

0

ಬೆಂಗಳೂರು ಶುಕ್ರವಾರ (ಮೇ.8): ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಅತ್ಯಾಕರ್ಷಣೀಯ ಸಾರ್ವಜನಿಕ ಮತ್ಸ್ಯಾಗಾರವನ್ನು (ಅಕ್ವೇರಿಯಂ) 144.4 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.

ಸಾರ್ವಜನಿಕ- ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ (ಪಿಪಿಪಿ) 30 ವರ್ಷಗಳ ಅವಧಿಗೆ ವಿನ್ಯಾಸ, ನಿರ್ಮಾಣ, ಹಣಕಾಸು, ಕಾರ್ಯಾಚರಣೆ ಮತ್ತು ವರ್ಗಾವಣೆ ಆಧಾರದ ಮೇಲೆ ಕಾರ್ಯಗತಗೊಳಿಸಲು ತೀರ್ಮಾನಿಸಲಾಗಿದೆ. ಮುಖ್ಯವಾಗಿ ಅಕ್ವೇರಿಯಂನಲ್ಲಿ ಅಕ್ವೇರಿಯಂ ಮೀನುಗಳು, ಸಿಹಿ ನೀರು, ಸಮುದ್ರ ಹಾಗೂ ಉಪ್ಪು ನೀರಿನ ಜಲಚರಗಳ ಆಕರ್ಷಕ ಪ್ರದರ್ಶನವನ್ನು ಏರ್ಪಡಿಸಲಾಗುತ್ತದೆ.  ಇದರಿಂದ 7.5 ಎಕರೆ ವಿಸ್ತೀರ್ಣದಲ್ಲಿರುವ ಅಕ್ವೇರಿಯಂನಲ್ಲಿ ಏಷ್ಯನ್‌, ಅಮೇಜಾನ್‌, ಆಫ್ರಿಕಾ, ಕೋರಲ್‌ ರೀಫ್‌ಗಳ ಪ್ರದರ್ಶನ ಇರಲಿದೆ. ಜತೆಗೆ ಪಾರದರ್ಶಕ ವಾಕ್‌ ಥ್ರೂ ಸುರಂಗಗಗಳನ್ನು ಮಾಡಲು ತೀರ್ಮಾನಿಸಲಾಗಿದೆ. 3ಡಿ, 4ಡಿ, 5ಡಿ ಇಮ್ಮರ್ಸಿವ್‌ ಥಿಯೇಟರ್‌, ಗ್ಲಾಸ್‌ ಬಾಟಮ್‌ ಬೋಟ್‌ ರೈಡ್‌, ಸ್ಕ್ಯೂಬಾ ಡೈವಿಂಗ್‌, ಅಂಡರ್‌ ವಾಟರ್‌ ಶೋ ಸಹ ಇರಲಿದೆ ಎಂದು ಮೂಲಗಳು ತಿಳಿಸಿವೆ ಎನ್ನಲಾಗಿದೆ.