ಮನೆ ಸುದ್ದಿ ಜಾಲ ಮೈಸೂರು: 14 ಮಕ್ಕಳ ಪಾಲನಾ ಸಂಸ್ಥೆಗಳ ನೋಂದಣಿ ರದ್ದು

ಮೈಸೂರು: 14 ಮಕ್ಕಳ ಪಾಲನಾ ಸಂಸ್ಥೆಗಳ ನೋಂದಣಿ ರದ್ದು

0

ಮೈಸೂರು(Mysuru):  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ 2015ರ ಸೆಕ್ಷನ್ 41(1) ರಡಿ ನೊಂದಾಯಿಸಲ್ಪಟ್ಟಿರುವ ಜಿಲ್ಲೆಯಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಕಾರ್ಯನಿರ್ವಹಿಸುತ್ತಿರುವ 14 ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಅನಾಥ ಮಕ್ಕಳು, ನಿರ್ಲಕ್ಷಿತ ಮಕ್ಕಳು ಹಾಗೂ ಪಾಲನೆ ಮತ್ತು ರಕ್ಷಣೆ ಅಗತ್ಯವಿರುವ ಮಕ್ಕಳಿಲ್ಲದ ಕಾರಣಕ್ಕೆ ಹಾಗೂ ಶಿಕ್ಷಣ ಮತ್ತು ಕಲಿಕಾ ಉದ್ದೇಶಗಳಿಗಾಗಿ ಸದರಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಬಾಲ ನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ 2015 ಸೆಕ್ಷನ್ 41(7) ರ ಅನ್ವಯ ನೋಂದಣಿಯನ್ನು ರದ್ದುಪಡಿಸಿದೆ.

ರದ್ದುಗೊಂಡ ಮಕ್ಕಳಾ ಪಾಲನಾ ಸಂಸ್ಥೆಗಳು
 ಮಹಾಬೋಧಿ ಮೈತ್ರಿ ಮಂಡಳ, ಸರಸ್ವತಿಪುರಂ, ಫಾಸ್ಟರ್ ಶಿಪ್ ಹೋಂ ಫಾರ್ ಆದಿವಾಸಿ ಚಿಲ್ದçನ್ (ಗಂಡು) ಹುಣಸೂರು ತಾ, ಫಾಸ್ಟರ್ ಶಿಪ್ ಹೋಂ ಫಾರ್ ಆದಿವಾಸಿ ಚಿಲ್ಡ್ರನ್ (ಹೆಣ್ಣು) ಹುಣಸೂರು ತಾ, ನಿಗರ್ಸ ಫೌಂಡೇಶನ್ ಎಸ್.ಸಿ.ಎಲ್.ಪಿ, ಹೆಚ್.ಡಿ ಕೋಟೆ ತಾ, ಸಿ.ಎಸ್.ಐ ವೆಸ್ಲೆ ಗರ್ಲ್ಸ್ ಬೋರ್ಡಿಂಗ್ ಹೋಂ, ಲಕ್ಷ್ಮಿಪುರಂ, ಸಂತ ಅಂತೋಣಿಯವರ ಅನಾಥಾಲಯ, ಶಕ್ತಿಧಾಮ, ಮೈಸೂರು-ಊಟಿ ರಸ್ತೆ, ಜೆ.ಎಸ್.ಎಸ್ ಕಾಲೇಜ್, ರಂಗರಾವ್ ಮೆಮೊರಿಯಲ್ ಅಂಧ ಹೆಣ್ಣು ಮಕ್ಕಳ ಶಾಲೆ, ಮೇಟಗಳ್ಳಿ, ಸಾಯಿರಂಗ ವಿದ್ಯಾಸಂಸ್ಥೆ, ಬನ್ನಿಮಂಟಪ, ಸಿ.ಎಸ್.ಯ ಬಾಯ್ಸ್ ಬೋರ್ಡಿಂಗ್ ಹೋಂ, ಲಕ್ಷ್ಮಿಪುರಂ, ಸೆಂಟ್ ಮೇರಿ ಚಿಲ್ಡ್ರನ್  ಹೋಂ, ಸಿಲ್ಕ್ ಫ್ಯಾಕ್ಟರಿ ಹತ್ತಿರ ಮೈಸೂರು, ಶ್ರೀ ಪುಟ್ಟವೀರಮ್ಮ ಕಿವುಡು ಮಕ್ಕಳ ವಸತಿ ಶಾಲೆ, ವಿದ್ಯಾರಣ್ಯಪುರಂ, ಮರ್ಸಿ ಶ್ರವಣದೋಷವುಳ್ಳ ಮಕ್ಕಳ ವಸತಿ ಶಾಲೆ, ಶ್ರೀರಾಂಪುರ, ಅತಿಷಾ ಚಾರಿಟೆಬಲ್, ಅರಿಸಿನಕೆರೆ ಗ್ರಾಮ, ಮೈಸೂರು.
ಈ ಮಕ್ಕಳ ಪಾಲನಾ ಸಂಸ್ಥೆಗಳ ನೋಂದಣಿಯನ್ನು ಮಕ್ಕಳ ರಕ್ಷಣಾ ನಿರ್ದೇಶನಾಲಯದಿಂದ ಈ ಕೂಡಲೇ ಜಾರಿಗೆ ಬರುವಂತೆ ರದ್ದುಗೊಳಿಸಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದಿನ ಲೇಖನಆರೋಪಿ ಪತ್ತೆಗೆ 1 ಲಕ್ಷ ಬಹುಮಾನ ಘೋಷಣೆ
ಮುಂದಿನ ಲೇಖನಗಜಚರ್ಮಾಂಭರ ಗೌರಿಮಹೇಶಗೆ