ಮನೆ ಅಪರಾಧ ನಾಲೆಗೆ ಬಿದ್ದ ಕಾರ್:  ಹೆಂಡತಿ ಸಾವು, ಗಂಡ ಬಚಾವ್

ನಾಲೆಗೆ ಬಿದ್ದ ಕಾರ್:  ಹೆಂಡತಿ ಸಾವು, ಗಂಡ ಬಚಾವ್

0

ಶಿವಮೊಗ್ಗ: ಶಿವಮೊಗ್ಗದಿಂದ ತುಮಕೂರಿಗೆ ಹೊರಟಿದ್ದ ದಂಪತಿಗಳಿದ್ದ ಕಾರೊಂದು ಶಿವಮೊಗ್ಗ ಜಿಲ್ಲೆಯ ಗಾಜನೂರು ಬಳಿಯ ತುಂಗಾ ನಾಲೆ ಬಿದ್ದ ಪರಿಣಾಮ ಹೆಂಡತಿ ಸಾವನ್ನಪ್ಪಿದ್ದು, ಗಂಡ ಅದೃಷ್ಟವಶಾತ್ ಬಚಾವಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.  
ಚೇತನ್ ಹಾಗೂ ಸುಷ್ಮಾ ದಂಪತಿ ತುಮಕೂರು ನಿವಾಸಿಗಳು. ಮೂಲತಃ ತುಮಕೂರಿನ ನಿವಾಸಿ ಚೇತನ್, ಗಾಜನೂರಿನ ನವೋದಯ ಶಾಲೆಯಲ್ಲಿ ಗೇಟ್ ಕೀಪರ್ ಕೆಲಸ ಮಾಡ್ತಿದ್ದ ಎನ್ನಲಾಗಿದೆ. ತುಮಕೂರಿನಲ್ಲಿರುವ ಚೇತನ್ ತಾಯಿ ಅನಾರೋಗ್ಯವಾಗಿತ್ತು. ಹೀಗಾಗಿನಿನ್ನೆ ರಾತ್ರಿಯೇ ಪತ್ನಿ ಸಮೇತ KA 06 C 5275 ಕಾರಿನಲ್ಲಿ ತುಮಕೂರು ಕಡೆ ಹೊರಟಿದ್ದಾಗ ಗಾಜನೂರು ನಾಲೆ ಬಳಿ ಅಪಘಾತವಾಗಿದೆ.

ಘಟನೆ ವಿವರ: ಗಂಡ ಹೆಂಡತಿ ಇಬ್ಬರೂ ಕಾರಿನಲ್ಲಿ ಬರುತ್ತಿರುವಾಗ ದಾರಿ ಮಧ್ಯೆ ಹಾವೊಂದು ಎದುರಾಗಿದೆ. ಇನ್ನೇನು ಹಾವಿನ ಮೇಲೆ ಕಾರು ಹತ್ತಿಸಬೇಕು, ಅಷ್ಟರಲ್ಲಿ ಚೇತನ್ ವಿಚಲಿತರಾಗಿದ್ದಾರೆ. ಹಾವನ್ನು ತಪ್ಪಿಸಿ, ಕಾರನ್ನು ಸೈಡಿಗೆ ತೆಗೆದುಕೊಳ್ಳಲು ಯತ್ನಿಸಿದ್ದಾರೆ. ಅಷ್ಟರಲ್ಲಿ ನಿಯಂತ್ರಣ ತಪ್ಪಿ ಕಾರು ತುಂಗಾ ನಾಲೆಗೆ ಬಿದ್ದು ಬಿಟ್ಟಿದೆ. ನಾಲೆಗೆ ಬೀಳುತ್ತಿದ್ದಂತೆ ಇಡೀ ಕಾರು ಮುಳುಗಿ ಹೋಗಿದೆ. ಚೇತನ್ ಹೇಗೋ ಕಾರಿನಿಂದ ಹೊರಕ್ಕೆ ಬಿದ್ದಿದ್ದಾರೆ. ಆದರೆ ಪತ್ನಿ ಸುಷ್ಮಾ ಕಾರಿನಲ್ಲೇ ಸಿಲುಕಿ ಕೊಂಡಿದ್ದರು. ಕಾರು ನೀರಿನಲ್ಲಿ ಮುಳುಗುತ್ತಿದ್ದಂತೆ ಸುಷ್ಮಾ ಸಹ ನೀರಿನಲ್ಲಿ ಮುಳುಗಿದ್ದಾರೆ. ಅದೆಷ್ಟೇ ಪ್ರಯತ್ನಿಸಿದರೂ ಹೊರಕ್ಕೆ ಬರಲಾಗದೇ ಉಸಿರು ಕಟ್ಟಿ ಸಾವನ್ನಪ್ಪಿದ್ದಾರೆ.
ಚೇತನ್ ಹಾಗೂ ಸುಪ್ಮಾ ದಂಪತಿ ನಿನ್ನೆ ರಾತ್ರಿಯೇ ಶಿವಮೊಗ್ಗದಿಂದ ಕಾರಿನಲ್ಲಿ ಹೊರಟಿದ್ದರು. ಮಧ್ಯರಾತ್ರಿ ಗಾಜನೂರು ಬಳಿ ಬರುತ್ತಿರುವಾಗ ಈ ಅಪಘಾತ ನಡೆದಿದೆ. ಕಾರು ಮುಳುಗುತ್ತಿದ್ದಂತೆ ಪತ್ನಿಗೆ ಸಹಾಯ ಮಾಡಲು ಚೇತನ್ ಮುಂದಾಗಿದ್ದಾರೆ. ಆದರೆ ನೀರಿನ ರಭಸಕ್ಕೆ ಅವರಿಂದ ಏನು ಮಾಡಲೂ ಸಾಧ್ಯವಾಗಿಲ್ಲ. ಆಗ ಸಹಾಯಕ್ಕಾಗಿ ಜೋರಾಗಿ ಕೂಗಿಕೊಂಡಿದ್ದಾರೆ.
ಘಟನೆ ನಡೆದ ತುಂಗಾ ನಾಲೆ ಅಕ್ಕ ಪಕ್ಕ ಸುಮಾರು ಮನೆಗಳಿವೆ. ಆದರೆ ಯಾರೂ ಸ್ಥಳಕ್ಕೆ ಬರಲಿಲ್ಲ ಎನ್ನಲಾಗಿದೆ. ಬಳಿಕ ಸ್ಥಳೀಯರೇ ಪೊಲೀಸರಿಗೆ ಕರೆ ಮಾಡಿ, ಅಪಘಾತದ ವಿಚಾರ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಚೇತನ್ ಅವರನ್ನು ರಕ್ಷಿಸಿದ್ದಾರೆ. ಸ್ಥಳೀಯರ ಸಹಾಯದಿಂದ ಸುಷ್ಮಾ ಅವರನ್ನು ರಕ್ಷಿಸುವ ಪ್ರಯತ್ನ ಮಾಡಿದರು. ಆದರೆ ಅಷ್ಟರಲ್ಲಾಗಲೇ ಉಸಿರುಗಟ್ಟಿ ಸುಷ್ಮಾ ಮೃತಪಟ್ಟಿದ್ದರು.

ಇದೀಗ ಕ್ರೇನ್ ಸಹಾಯದಿಂದ ಕಾರನ್ನು ಮೇಲಕ್ಕೆ ಎತ್ತಿರುವ ಪೊಲೀಸರು, ದೂರು ದಾಖಲಿಸಿಕೊಂಡು  ತನಿಖೆ ಮುಂದುವರೆಸಿದ್ದಾರೆ.

ಹಿಂದಿನ ಲೇಖನವೈದ್ಯಕೀಯ ವಿದ್ಯಾರ್ಥಿಗಳ ಅಂತಿಮ ಪರೀಕ್ಷೆ ಮುಂದೂಡುವಂತೆ ಒತ್ತಾಯಿಸಿ ಪ್ರತಿಭಟನೆ
ಮುಂದಿನ ಲೇಖನಪರ್ಸಂಟೇಜ್ ಗಾಗಿ ಪಿಡಿಓಗಳಿಗೆ ಕಿರುಕುಳ ಆರೋಪ: ಇಓ ಅಮಾನತು