ಮನೆ ಅಪರಾಧ ನಿಂತ ಲಾರಿಗೆ ಡಿಕ್ಕಿ ಹೊಡೆದ ಕಾರು: ಸ್ಥಳದಲ್ಲೇ ದಂಪತಿ ಸಾವು

ನಿಂತ ಲಾರಿಗೆ ಡಿಕ್ಕಿ ಹೊಡೆದ ಕಾರು: ಸ್ಥಳದಲ್ಲೇ ದಂಪತಿ ಸಾವು

0

ತುಮಕೂರು(Tumkur) : ತಾಲ್ಲೂಕಿನ ಮಲಸಂದ್ರದ ಬಳಿ ರಸ್ತೆ ಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಗಂಡ-ಹೆಂಡತಿ ಸ್ಥಳದಲ್ಲೇ ಮೃತಪಟ್ಟಿರುವ ಧಾರುಣ ಘಟನೆ ನಡೆದಿದೆ,

ಮೃತ ಪಟ್ಟವರನ್ನು ಈಶ್ವರಪ್ಪ (50) ಹಾಗೂ ಕಲ್ಪನಾ (42) ಎಂದು ಗುರುತಿಸಲಾಗಿದೆ.

ದಂಪತಿಯಾದ ಈಶ್ವರಪ್ಪ ಮತ್ತು ಕಲ್ಪನಾ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಈಶ್ವರಪ್ಪ ಪಿಆರ್​ಸಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೆ ಆತನ ಪತ್ನಿ ಕಲ್ಪನಾ ಸರ್ಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಇಬ್ಬರು ಕಾರಿನಲ್ಲಿ ಹೆಗ್ಗೆರೆಯಿಂದ ತಮ್ಮ ಸ್ವಗ್ರಾಮ ದೇವನಹಳ್ಳಿಗೆ ಬರುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. ಕಾರು ಚಲಾಯಿಸುತ್ತಿದ್ದ ಈಶ್ವರಪ್ಪಗೆ ನಿಯಂತ್ರಣ ತಪ್ಪಿದ್ದು, ರಸ್ತೆ ಬದಿ ನಿಂತ ಲಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಕಾರು ಸಂಪೂರ್ಣ ಜಖಂಗೊಂಡಿದೆ. ಈ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

ಹಿಂದಿನ ಲೇಖನಧಾರವಾಡ ಜೈಲಿನಲ್ಲಿರುವ ಪಾಕ್ ಮೂಲದ ಕೈದಿಯಿಂದ ಉಪವಾಸ ಸತ್ಯಾಗ್ರಹ: ಆಸ್ಪತ್ರೆಗೆ ದಾಖಲು
ಮುಂದಿನ ಲೇಖನಉದ್ಯಮಿ​ ಆತ್ಮಹತ್ಯೆ ಪ್ರಕರಣ: ಮೊದಲನೇ ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿ ವಜಾ