ಮನೆ ರಾಜಕೀಯ ದಿಂಗಾಲೇಶ್ವರ ಸ್ವಾಮಿಗಳ ಹೇಳಿಕೆ: ವಿವರಗಳನ್ನು ನೀಡಿದರೆ ಸಂಪೂರ್ಣ ತನಿಖೆ ಎಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ದಿಂಗಾಲೇಶ್ವರ ಸ್ವಾಮಿಗಳ ಹೇಳಿಕೆ: ವಿವರಗಳನ್ನು ನೀಡಿದರೆ ಸಂಪೂರ್ಣ ತನಿಖೆ ಎಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

0

ಬೆಂಗಳೂರು: ದಿಂಗಾಲೇಶ್ವರ ಸ್ವಾಮಿಗಳು ಸರ್ಕಾರದ ಕಮಿಷನ್ ಬಗ್ಗೆ ವಿವರಗಳನ್ನು ನೀಡಿದರೆ ಸಂಪೂರ್ಣವಾಗಿ ತನಿಖೆ ಮಾಡಲಾಗುವುದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ದಿಂಗಾಲೇಶ್ವರ ಸ್ವಾಮಿಗಳು ಅನುದಾನ ಬಿಡುಗಡೆ ಮಾಡಲು ಕಮಿಷನ್ ನೀಡುವ ಕುರಿತು ಹೇಳಿಕೆ ನೀಡಿರುವ ಬಗ್ಗೆ ಮುಖ್ಯಮಂತ್ರಿಗಳು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ದಿಂಗಾಲೇಶ್ವರರು ಪರಮಪೂಜ್ಯರು, ಮಹಾತ್ಮರು, ತಪಸ್ವಿಗಳು. ಮಠಾಧೀಶರು ಹೇಳಿಕೆ ನೀಡಿದರೆ ಸಾಲುವುದಿಲ್ಲ ಅವರು ಯಾರು, ಯಾರಿಗೆ, ಯಾವುದಕ್ಕಾಗಿ ಎಷ್ಟು ಪರ್ಸೆಂಟ್ ಹಣ ಕೊಟ್ಟಿದ್ದಾರೆ ಎಂದು ವಿವರಗಳನ್ನು ನೀಡಿದರೆ ಸಂಪೂರ್ಣವಾಗಿ ಅದರ ಆಳಕ್ಕೆ ಹೋಗಿ ತನಿಖೆ ಮಾಡಿಸುವುದಾಗಿ ಹೇಳಿದರು.

ಹಿಂದಿನ ಲೇಖನಹೆಚ್ಚುವರಿಯಾಗಿ 1.14 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಗೆ ತೀರ್ಮಾನ: ಸಿಎಂ ಬೊಮ್ಮಾಯಿ
ಮುಂದಿನ ಲೇಖನಹಿಂದೂ ವಿವಾಹ ಕಾಯಿದೆಯ ಅಡಿಯಲ್ಲಿ ಶಾಶ್ವತ ಜೀವನಾಂಶದ ಅಡಿಯಲ್ಲಿ ಮಕ್ಕಳು ಯಾವುದೇ ಮೊತ್ತವನ್ನು ಕ್ಲೈಮ್ ಮಾಡಬಹುದೇ?: ಕೇರಳ ಹೈಕೋರ್ಟ್ ಹೇಳಿದ್ದೇನು?