ನವದೆಹಲಿ (New Delhi)- ಗಡಿ ಸಮಸ್ಯೆಯನ್ನು ‘ಜೀವಂತವಾಗಿ’ ಇಡುವುದೇ ಚೀನಾದ ಉದ್ದೇಶವಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ (General Manoj Pandey) ಹೇಳಿದ್ದಾರೆ.
ಗಡಿಯಲ್ಲಿ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಭಾರತೀಯ ಪಡೆಗಳನ್ನು ಸಮರ್ಪಕವಾಗಿ ನಿಯೋಜಿಸಲಾಗಿದೆ. ಏಪ್ರಿಲ್ 2020ಕ್ಕಿಂತ ಮೊದಲು ಇದ್ದಂತೆ ಯಥಾಸ್ಥಿತಿ ಪುನಃಸ್ಥಾಪಿಸುವುದೇ ಸೇನೆಯ ಗುರಿಯಾಗಿದ್ದು, ಗಡಿಯಲ್ಲಿ ನಿಯೋಜಿಸಲಾಗಿರುವ ಸೇನಾ ಪಡೆಗಳಿಗೆ ತಮ್ಮ ಕೆಲಸದಲ್ಲಿ ದೃಢವಾಗಿ ಉಳಿಯಲು ಸೂಚಿಸಲಾಗಿದೆ ಎಂದು ಹೇಳಿದರು.
ವಾರದ ಹಿಂದೆ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಜನರಲ್ ಪಾಂಡೆ, ಎರಡೂ ಸೇನೆಗಳ ನಡುವಿನ ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆಗಳ ಫಲವಾಗಿ ಉತ್ತರ ಮತ್ತು ದಕ್ಷಿಣ ದಂಡೆಗಳಾದ ಪ್ಯಾಂಗಾಂಗ್ ತ್ಸೊ, ಗೊಗ್ರಾ ಮತ್ತು ಗಾಲ್ವಾನ್‌ನ ಗಸ್ತು ಪ್ರದೇಶಗಳಲ್ಲಿ ಸೇನಾ ಜಮಾವಣೆ ಹಿಂಪಡೆಯಲಾಗಿದೆ. ಉಳಿದ ಪ್ರದೇಶಗಳಲ್ಲೂ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲು ನಾವು ಪ್ರಯತ್ನಿಸುತ್ತೇವೆ ಎಂದು ಹೇಳಿದರು.