ಮನೆ ಸುದ್ದಿ ಜಾಲ ಪಂಜಾಬ್‌ ಗುಪ್ತಚರ ಕೇಂದ್ರ ಕಚೇರಿಯಲ್ಲಿ ಸ್ಫೋಟ

ಪಂಜಾಬ್‌ ಗುಪ್ತಚರ ಕೇಂದ್ರ ಕಚೇರಿಯಲ್ಲಿ ಸ್ಫೋಟ

0
ಚಿತ್ರ ಕೃಪೆ: ಎಎನ್‌ ಐ

ಮೊಹಾಲಿ (Mohali)- ಪಂಜಾಬ್ ಪೊಲೀಸ್‌ನ ಗುಪ್ತಚರ ಕೇಂದ್ರ ಕಚೇರಿಯಲ್ಲಿ ಅನುಮಾನಾಸ್ಪದ ಸ್ಫೋಟ ಸಂಭವಿಸಿದೆ. 

ಕಟ್ಟಡದ ಮೂರನೇ ಮಹಡಿಯಲ್ಲಿ ರಾಕೆಟ್ ಚಾಲಿತ ಗ್ರೆನೇಡ್ ಅನ್ನು ಎಸೆಯಲಾಗಿದೆ. ಸ್ಫೋಟದಲ್ಲಿ ಯಾವುದೇ ರೀತಿಯ ಸಾವು ನೋವು ಸಂಭವಿಸಿಲ್ಲ.

ಸ್ಫೋಟದ ತೀವ್ರತೆಗೆ ಕಟ್ಟಡದ ಕಿಟಕಿ ಗಾಜುಗಳು ಪುಡಿ ಪುಡಿಯಾಗಿದೆ. ಘಟನಾ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದ್ದು, ಪೊಲೀಸರು ಆ ಪ್ರದೇಶದಲ್ಲಿ ಸುತ್ತುವರಿದಿದ್ದಾರೆ.

ಘಟನಾ ಸ್ಥಳಕ್ಕೆ ಎಫ್ಎಸ್ಎಲ್ ತಂಡ ಭೇಟಿ ನೀಡಿದೆ. ಸ್ಫೋಟ ಸಂಬಂಧ ಮಾಹಿತಿ ನೀಡುವಂತೆ ಮುಖ್ಯಮಂತ್ರಿ ಭಗವಂತ್ ಮಾನ್ ಸೂಚಿಸಿದ್ದಾರೆ.

ಹಿಂದಿನ ಲೇಖನಶ್ರೀಲಂಕಾ ಪ್ರಧಾನಿ ರಾಜಪಕ್ಸೆ ರಾಜೀನಾಮೆ ಬೆನ್ನೆಲ್ಲೇ ನಿವಾಸಕ್ಕೆ ಬೆಂಕಿ ಹಚ್ಚಿದ ಉದ್ರಿಕ್ತರ ಗುಂಪು
ಮುಂದಿನ ಲೇಖನಗಡಿ ಸಮಸ್ಯೆಯನ್ನು ‘ಜೀವಂತವಾಗಿ’ಡುವುದೇ ಚೀನಾದ ಉದ್ದೇಶ: ಜನರಲ್ ಮನೋಜ್ ಪಾಂಡೆ