ಗುಂಡನ ಪಂಚಿಂಗ್ ಉತ್ತರ ಕೇಳಿ ಗಡಿಬಿಯಾದ ಟೀಚರ್
ಟೀಚರ್ : ರಾಮನು ಮರದಿಂದ ಕೆಳಗೆ ಬಿದ್ದನು- ಇದು ಯಾವ ಕಾಲ?
ಗುಂಡ : ರಾಮನಿಗೆ ಕೆಟ್ಟಕಾಲ *
ಟೀಚರ್ : ಅಕ್ಬರನು ಸಿಂಹಾಸನ ಏರಿದ ತಕ್ಷಣ ಏನು ಮಾಡಿದನು?
ಗುಂಡ : ಕುಳಿತುಕೊಂಡನು.
ಟೀಚರ್ : ವಾಸ್ಕೋಡಗಾಮನು ಭಾರತದಲ್ಲಿ ಮೊದಲ ಹೆಜ್ಜೆ ಇಟ್ಟ ತಕ್ಷಣ ಏನು ಮಾಡಿದನು?
ಗುಂಡ : ಎರಡನೇ ಹೆಜ್ಜೆ ಇಟ್ಟನು.
ಟೀಚರ್ ; ಸತ್ಯ ಹರಿಶ್ಚಂದ್ರನ ಕತೆಯಿಂದ ತಿಳಿಯಬೇಕಾದ ನೀತಿ ಏನು?
ಗುಂಡ : ಕಷ್ಟ ಬಂದಾಗ ಹೆಂಡತಿ ಮಕ್ಕಳನ್ನು ಮಾರಬಹುದು.
ಟೀಚರ್ : ರಾಮಾಯಣದಿಂದ ತಿಳಿಯಬೇಕಾದ ನೀತಿ ಏನು?
ಗುಂಡ : ಹೆಂಡತಿಗೆ ಮಾತು ಕೊಡಬಾರದು, ಕೊಟ್ಟರೂ ಅದನ್ನು ವರ್ಷಗಳ ಕಾಲ ಕಾದಿಡಬಾರದು. *
ಟೀಚರ್ : ಗಣಪತಿಯ ಕತೆಯಿಂದ ತಿಳಿಯಬೇಕಾದ ನೀತಿ ಏನು?
ಗುಂಡ : ಸ್ನಾನದ ಕೋಣೆಗೆ ಬಾಗಿಲು ಇದುವುದು ಅತೀ ಅವಶ್ಯ.
*******
ಶೀಲಾ: “ಡಾಕ್ಟ್ರೆ ಕೂಡಲೇ ಬನ್ನಿ ನನ್ನ ಮಗನಿಗೆ ಕೆಮ್ಮು”
ಡಾ| ಶ್ರೀನಿವಾಸ: “ನೋಡಮ್ಮ ನಾನು ಪಶು ವೈದ್ಯ.”
ಶೀಲಾ: “ನನ್ನ ಮಗನಿಗೆ ಬಂದಿರುವುದು ನಾಯಿ ಕೆಮ್ಮು..”
Saval TV on YouTube