ಮನೆ ರಾಜಕೀಯ ಬಿಜೆಪಿ ಎಂಬ ವೈರಸ್ ಗೆ ಕಾಂಗ್ರೆಸ್ ವ್ಯಾಕ್ಸಿನ್: ಪ್ರಿಯಾಂಕ ಖರ್ಗೆ

ಬಿಜೆಪಿ ಎಂಬ ವೈರಸ್ ಗೆ ಕಾಂಗ್ರೆಸ್ ವ್ಯಾಕ್ಸಿನ್: ಪ್ರಿಯಾಂಕ ಖರ್ಗೆ

0

ಕಲಬುರಗಿ: ಬಿಜೆಪಿ ಎಂಬ ವೈರಸ್​​ಗೆ  ವ್ಯಾಕ್ಸಿನ್ ಅಂದ್ರೆ ಅದು ಕಾಂಗ್ರೆಸ್ ಮಾತ್ರ ಎಂದು ಕೆಪಿಸಿಸಿ ವಕ್ತಾರ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಅವರು ಸಿಎಂ ಇಬ್ರಾಹಿಂ ಹೇಳಿಕೆಗೆ ತಿರುಗೇಟು ನೀಡಿದರು

ಕಲಬುರಗಿಯಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​​ಗೆ ಕೊರೊನಾ ಬಂದಿದೆ ಎನ್ನುವ ಸಿಎಂ ಇಬ್ರಾಹಿಂ ಹೇಳಿಕೆಗೆ ವ್ಯಂಗ್ಯವಾಡಿದ ಖರ್ಗೆ, ದೇಶದ ಎಲ್ಲ ಸಮಸ್ಯೆಗಳಿಗೂ ಕಾಂಗ್ರೆಸ್ ವ್ಯಾಕ್ಸಿನ್ ಇದ್ದಂತೆ.ಯಾರು ಪಕ್ಷ ಬಿಡುವ ಮಾತು ಹೇಳಿದ್ದಾರೋ ಅವರಿಗೆ ಬೂಸ್ಟರ್​​ ಡೋಸ್ ಬೇಕಾಗಿದೆ. ಬಿಜೆಪಿ ಎನ್ನುವ ವೈರಸ್​ಗೆ ಕಾಂಗ್ರೆಸ್ ವ್ಯಾಕ್ಸಿನ್ ಇದ್ದ ಹಾಗೆ. ಕಾಂಗ್ರೆಸ್​ನಿಂದ ಮಾತ್ರ ದೇಶದ ಎಲ್ಲ ಸಮಸ್ಯೆಗೆ ಪರಿಹಾರ ಸಾಧ್ಯ. ಬಡತನಕ್ಕೂ ಕಾಂಗ್ರೆಸ್ ವ್ಯಾಕ್ಸಿನ್ ಬೇಕು, ರೈತರಿಗೂ ಕಾಂಗ್ರೆಸ್ ವ್ಯಾಕ್ಸಿನ್ ಬೇಕು, ಕಾರ್ಮಿಕರ, ಮಹಿಳೆಯರ ಸುರಕ್ಷತೆಗೂ ನಮ್ಮದೇ ವ್ಯಾಕ್ಸಿನ್ ಬೇಕು ಎಂದರು.

ಕಾಂಗ್ರೆಸ್ ಕೊಳೆತ ಮಾವು, ಮೋದಿ ಫ್ರೆಶ್ ಆ್ಯಪಲ್​ ಎಂದಿದ್ದ ಸಚಿವ ಈಶ್ವರಪ್ಪ ಹೇಳಿಕೆಗೆ ಕಿಡಿಕಾರಿ ಪ್ರಿಯಾಂಕ ಖರ್ಗೆ, ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಇಳಿಸಿದ್ದು ಯಾಕೆ? ಯಡಿಯೂರಪ್ಪ ಕೊಳೆತ ಹಣ್ಣು ಅಂತಾನೆ ಬದಲಾಯಿಸಿದ್ರಾ ? ಈಗ ಬೊಮ್ಮಾಯಿ ಸಹ ಕೊಳೆತ ಹಣ್ಣು ಅಂತ ಬದಲಾಯಿಸಲು ಮುಂದಾಗ್ತಿದ್ದೀರಾ. ಹಾಗಾದ್ರೆ , ರಾಜ್ಯದಲ್ಲಿ ಬಿಜೆಪಿ ಆಡಳಿತ ಕೊಳೆತಿದೆಯಾ ? ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಕೊಳೆತ ಹಣ್ಣು ಅಲ್ಲ ಎವರ್ ಗ್ರೀನ್ ಎವರ್ ಫ್ರೆಶ್. ಇತ್ತೀಚಿನ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಮುಂದಿದೆ. ಯಾರು ಕೊಳೆತ ಹಣ್ಣು, ಯಾರು ಫ್ರೆಶ್ ಎನ್ನುವುದು ಚುನಾವಣೆ ಬರಲಿ ಗೊತ್ತಾಗುತ್ತೆ ಎಂದು ಈಶ್ವರಪ್ಪನವರಿಗೆ ಖರ್ಗೆ ಸವಾಲು ಹಾಕಿದ್ದಾರೆ‌.

ಹಿಂದಿನ ಲೇಖನನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಎರಡು ಹುಲಿಮರಿಗಳ ಕಳೇಬರ ಪತ್ತೆ
ಮುಂದಿನ ಲೇಖನಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಮಹಿಳೆ ಬಂಧನ