ಮನೆ ರಾಜ್ಯ ಸಂಶೋಧನಾ ಗ್ರಂಥಗಳ ಪ್ರಕಟಣೆಗೆ ನಿರಂತರ ಪ್ರೋತ್ಸಾಹ: ಪ್ರೊ.ಜಿ.ಹೇಮಂತ್ ಕುಮಾರ್

ಸಂಶೋಧನಾ ಗ್ರಂಥಗಳ ಪ್ರಕಟಣೆಗೆ ನಿರಂತರ ಪ್ರೋತ್ಸಾಹ: ಪ್ರೊ.ಜಿ.ಹೇಮಂತ್ ಕುಮಾರ್

0

ಮೈಸೂರು(Mysore): ಸಂಶೋಧನಾ ಗ್ರಂಥಗಳ ಪ್ರಕಟಣೆಗೆ ವಿಶ್ವವಿದ್ಯಾನಿಲಯ ಮೊದಲಿನಿಂದಲೂ ಪ್ರೋತ್ಸಾಹ ನೀಡುತ್ತಾ ಬಂದಿದೆ. ನಾನು ಕುಲಪತಿಯಾದ ಮೇಲೂ ಸಂಪೂರ್ಣ ನೆರವು-ಪ್ರೋತ್ಸಾಹ ನೀಡುತ್ತಿದ್ದೇನೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.

ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ನಾಲ್ಕು ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಯಾವುದೇ ವಿಶ್ವವಿದ್ಯಾನಿಲಯಕ್ಕೆ ಕೀರ್ತಿ ಬರುವುದು ಅಲ್ಲಿಯ ಸಂಶೋಧನಾ ಪ್ರಕಟಣೆಗಳಿಂದ. ಈ ನಿಟ್ಟಿನಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಕಟಣೆಗಳು ಮೈಸೂರು ವಿಶ್ವವಿದ್ಯಾನಿಲಯದ ಕೀರ್ತಿಯನ್ನು ಹಲವು ದಶಕಗಳಿಂದಲೂ ಹೆಚ್ಚಿಸಿದೆ. ಅಧ್ಯಯನ ಸಂಸ್ಥೆಯ ವಿಶ್ವಕೋಶ ಯೋಜನೆ, ಎಪಿಗ್ರಾಫಿಯ ಕರ್ನಾಟಕ ಯೋಜನೆ, ಪ್ರಾಚೀನ ಹಸ್ತಪ್ರತಿಗಳ ಪ್ರಕಟಣ ಯೋಜನೆ ಎಲ್ಲ ಯೋಜನೆಗಳಿಗೂ ಸೂಕ್ತ ನೆರವನ್ನು ನೀಡುತ್ತಾ ಬಂದಿದ್ದೇನೆ. ಇದೇ ರೀತಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಂಶೋಧನಾ ಗ್ರಂಥಗಳನ್ನು ಅಧ್ಯಯನ ಸಂಸ್ಥೆಯಿಂದ ಪ್ರಕಟಿಸಲೆಂದು ಹಾರೈಸುತ್ತೇನೆ ಎಂದರು.

ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಪ್ರೊ.ಟಿ.ವಿ.ವೆಂಕಟಾಚಲ ಶಾಸ್ತ್ರಿ ಅವರು ವೈದ್ಯ ಸಂಪುಟ, ಚಂದ್ರಸಾಗರವರ್ಣಿಯ ಮೂರು ಕೃತಿಗಳು, ಗಣಿತ ವಿಳಾಸಂ, ವಿರಾಟ ಪರ್ವ ಸಂಪುಟ ಪುಸ್ತಕಗಳನ್ನು ಬಿಡುಗಡೆ ಮಾಡಿದರು.

ಅಧ್ಯಯನ ಸಂಸ್ಥೆ ನಿರ್ದೇಶಕರಾದ ಪ್ರೊ.ಎಂ.ಜಿ.ಮಂಜುನಾಥ, ಡಾ.ವೈ.ಸಿ.ಭಾನುಮತಿ, ಪ್ರೊ.ಜಿ.ನಾರಾಯಣ ಪ್ರಸಾದ್, ಜಿ.ಜಿ.ಮಂಜುನಾಥನ್ ಇದ್ದರು.

ಹಿಂದಿನ ಲೇಖನಮೇಕೆದಾಟು ಪಾದಯಾತ್ರೆ: ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಮನ್ಸ್ ಜಾರಿ
ಮುಂದಿನ ಲೇಖನಟಿಪ್ಪು ಹುಲಿ ಅಲ್ಲ, ಆತ ಒಬ್ಬ ಕ್ರೂರಿ: ಪ್ರತಾಪ್ ಸಿಂಹ