ಮನೆ ಸುದ್ದಿ ಜಾಲ ಹುಲಿ ಸೆರೆಗೆ ಸಾಕಾನೆಗಳ ಸಹಾಯದೊಂದಿಗೆ ಕೂಂಬಿಂಗ್ ಕಾರ್ಯಾಚರಣೆ ಆರಂಭ

ಹುಲಿ ಸೆರೆಗೆ ಸಾಕಾನೆಗಳ ಸಹಾಯದೊಂದಿಗೆ ಕೂಂಬಿಂಗ್ ಕಾರ್ಯಾಚರಣೆ ಆರಂಭ

0

ವೀರನಹೊಸಹಳ್ಳಿ: ಅಯ್ಯನಕೆರೆ ಹಾಡಿ ಬಳಿ ಕಾಣಿಸಿಕೊಂಡಿದ್ದ ಹುಲಿ ಪತ್ತೆಗಾಗಿ ಅರಣ್ಯ ಇಲಾಖೆ ಸಾಕಾನೆಗಳ ಸಹಾಯದಿಂದ ಕೂಂಬಿಂಗ್ ಕಾರ್ಯಚಾರಣೆ ಆರಂಭಿಸಿದ್ದರೂ, ಅರಣ್ಯ ಅಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.

ಶುಕ್ರವಾರ ನಾಗರಹೊಳೆ ಉದ್ಯಾನದಂಚಿನ ತಾಲ್ಲೂಕಿನ ಹನಗೋಡು ಹೋಬಳಿಯ ಉಡುವೇಪುರ-ಅಯ್ಯನಕೆರೆ ಹಾಡಿ ರಸ್ತೆಯಲ್ಲಿ ಹಾಡಹಗಲೇ ಹುಲಿ ಕಾಣಿಸಿಕೊಂಡು ಗ್ರಾಮಸ್ಥರು ಹಾಗೂ ಆದಿವಾಸಿಗಳಲ್ಲಿ ಆತಂಕ ಹುಟ್ಟಿಸಿತ್ತು.

ವನ್ಯಜೀವಿ ವಿಭಾಗದ ಹಿರಿಯ ಅಧಿಕಾರಿಗಳ ಮಾರ್ಗದರ್ಶನದೊಂದಿಗೆ ಶನಿವಾರದಂದು ಸಾಕಾನೆಗಳಾದ ಬಲರಾಮ ಮತ್ತು ಗಣೇಶ ಆನೆಗಳ ನೆರವಿನೊಂದಿಗೆ ಡಿಆರ್‌ಎಫ್‌ಒಗಳಾದ ಸಿದ್ದರಾಜು, ವೀರಭದ್ರಯ್ಯರ ನೇತೃತ್ವದಲ್ಲಿ ಅರಣ್ಯ ರಕ್ಷಕರಾದ ಕೃಷ್ಣಮಾದರ್, ಲಿಂಗರಾಜು, ಸಿಬ್ಬಂದಿ ಕಾರ್ಯಾಚರಣೆ ನಡೆಸಿದರೂ ಹುಲಿ ಪತ್ತೆಯಾಗಲಿಲ್ಲ.
ವ್ಯಾಘ್ರ ಕಾಣಿಸಿಕೊಂಡ ಸುತ್ತಮುತ್ತಲ ಹಳ್ಳಿಗಳಲ್ಲಿ ಮುಂಜಾಗ್ರತೆಯಾಗಿ ಅರಣ್ಯದಂಚಿನಲ್ಲಿ ರೈತರು ಹಾಗೂ ಸಾರ್ವಜನಿಕರಿಗೆ ಒಂಟಿಯಾಗಿ ಓಡಾಡದಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಎಸಿಎಫ್ ಸತೀಶ್ ತಿಳಿಸಿದ್ದಾರೆ.

ಹಿಂದಿನ ಲೇಖನಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೆಚ್.ಡಿ.ಕುಮಾರಸ್ವಾಮಿ ಅಭ್ಯರ್ಥಿ ಆಗುವುದಿಲ್ಲ: ಸಾ.ರಾ. ಮಹೇಶ್‌
ಮುಂದಿನ ಲೇಖನಪತಿಯ ನಿರುದ್ಯೋಗವು ಪತ್ನಿಯ ಜವಬ್ದಾರಿಯಿಂದ ಮುಕ್ತಗೊಳಿಸುವುದಿಲ್ಲ: ಮಧ್ಯಂತರ ಆದೇಶ ಎತ್ತಿ ಹಿಡಿದ ದಿಲ್ಲಿ ಕೋರ್ಟ್